ಹಿಂದೂ ಧರ್ಮದ ಬಗ್ಗೆ ತಮಿಳುನಾಡಿನ ಸಿಎಂ ಪುತ್ರ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧ ಪಟ್ಟ ಹಾಗೆ ಈ ವಿಚಾರದ ಕುರಿತು ಯದುವೀರ್ ಒಡೆಯರ್ ಮಾತನಾಡಿದ್ದು ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಖಂಡನೆ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು,
ʼʼಧರ್ಮದ ಬಗ್ಗೆ ಮಾತನೋಡೋದು ತಪ್ಪು, ಎಲ್ಲಾ ಧರ್ಮಕ್ಕೂ ಒಂದು ಗೌರವ ಮರ್ಯಾದೆ ಇರಬೇಕು, ನಮ್ಮ ನಾಡು ದೇಶದಲ್ಲಿ ಸನಾತನ ಧರ್ಮ ಎಲ್ಲಕ್ಕೂ ಮೂಲ, ನಾವು ಅವರ ಹೇಳಿಕೆ ಒಪ್ಪುವುದಿಲ್ಲ, ಧರ್ಮಕ್ಕೆ ಗೌರವ ಕೊಡಬೇಕು, ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲೀನ್ ಪುತ್ರ ಉದಯನಿಧಿ ಸ್ಟಾಲೀನ್ ಹೇಳಿಕೆಗೆ ಅಸಮಧಾನವನ್ನು ವ್ಯಕ್ತ ಪಡಿಸಿದ್ದಾರೆ.

KRS ಡ್ಯಾಂ ನಿಂದ ತಮಿಳುನಾಡಿಗೆ ನೀರು ಬಿಟ್ಟ ವಿಚಾರ ಕುರಿತು ಮಾತನಾಡಿದ ಯದುವೀರ್ ಒಡೆಯರ್, ಇತಿಹಾಸ ನೋಡಿ ನಮ್ಮ ರಾಜ್ಯ ಸುಪ್ರೀಂ ಕೋರ್ಟ್ ಏನು ನಿರ್ಧಾರ ತೆಗೆದುಕೊಂಡಿದ್ದಾರೋ ನೋಡಬೇಕು, ಅದರ ಜೊತೆಗೆ ಸಮಸ್ಯೆ ಬಗೆಹರಿಸುವ ಬಗ್ಗೆ ರಾಜ್ಯ ಸರ್ಕಾರ ತಿರ್ಮಾನ ಮಾಡಬೇಕು, ಸಂಪೂರ್ಣವಾಗಿ ರಾಜ್ಯ ಹಾಗೂ ರೈತರ ಜೊತೆ ನಮ್ಮ ಬೆಂಬಲ ಇದೆ, ಅಧಿಕಾರದಲ್ಲಿರುವವರನ್ನ ಪ್ರಶ್ನೆ ಮಾಡಿ, ನಾವು ರಾಜ್ಯದ ಜೊತೆ ಇರ್ತೇವೆ ಎಂದು ಹೇಳಿಕೆಯನ್ನ ನೀಡಿದ್ದಾರೆ.