
ಹೈದರಾಬಾದ್: ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ ಕುರಿತಂತೆ ವಿವಾದಿತ ಹೇಳಿಕೆ ನೀಡಿದ ತೆಲಂಗಾಣದ ಸಚಿವೆ ಮತ್ತು ಕಾಂಗ್ರೆಸ್ ನಾಯಕಿ ಕೊಂಡ ಸುರೇಖಾ ವಿರುದ್ಧ ನಟ ನಾಗಾರ್ಜುನ ಅವರು ದೂರು ದಾಖಲಿಸಿದ್ದಾರೆ.

ನಾಗಾರ್ಜುನ ಅವರು ಕೊಂಡ ಸುರೇಖಾ ಅವರ ವಿವಾದಿತ ಹೇಳಿಕೆಗೆ ಸಂಬಂಧಿಸಿಂತೆ ಕ್ರಿಮಿನಲ್ ಮತ್ತು ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ.
ಈ ದೂರಿನ ಪ್ರತಿಯನ್ನು ನಟ ನಾಗ ಚೈತನ್ಯ ಅವರು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಾಗ ಚೈತನ್ಯ ಮತ್ತು ಸಮಂತಾ ನಡುವಿನ ಭಿನ್ನಾಭಿಪ್ರಾಯಕ್ಕೆ ಕೆಟಿ ರಾಮರಾವ್ ಕಾರಣ. ಕೆಟಿಆರ್ ಹಸ್ತಕ್ಷೇಪದಿಂದ ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಅವರ ಸಂಬಂಧದಲ್ಲಿ ಬಿರುಕು ಉಂಟಾಗಿ ವಿಚ್ಛೇದನಕ್ಕೆ ಕಾರಣವಾಯಿತು ಎಂದು ಸುರೇಖಾ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದು ರಾಜಕೀಯವಾಗಿ ಸದ್ದು ಮಾಡಿದ್ದಲ್ಲದೇ ಅಕ್ಕಿನೇನಿ ಕುಟುಂಬದಲ್ಲಿ ಗೊಂದಲವನ್ನು ಉಂಟುಮಾಡಿತು.










