ಕೆಲ ದಿನಗಳಿಂದ ನಾಗಚೈತನ್ಯ ಜೊತೆ ನಟಿ ಶೋಭಿತಾ ಧುಲಿಪಾಲ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಇತ್ತೀಚೆಗೆ ನಾಗಚೈತನ್ಯ ಹಾಗೂ ಶೋಭಿತಾ ಜೊತೆಗಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಫೋಟೋ ನೋಡಿ ನೆಟ್ಟಿಗರು ಬಗೆ ಬಗೆಯ ಕಮೆಂಟ್‌ಗಳನ್ನ ಮಾಡಿದ್ರು. ಅನೇಕರು ನಾಗಚೈತನ್ಯ ವಿರುದ್ಧ ಆಕ್ರೋಶ ಹೊರಹಾಕಿದ್ರು. ʻಡಿವೋರ್ಸ್ ಪಡೆದು ವರ್ಷ ತುಂಬುತ್ತಿದ್ದಂತೆ, ಬೇರೆಯವರ ಜೊತೆ ಡೇಟಿಂಗ್ ಮಾಡ್ತಿದ್ದೀರ ಅಂತ ಕಿಡಿಕಾರಿದ್ರು.

ಈಗ ನಾಗಚೈತನ್ಯ ಮತ್ತು ಶೋಭಿತಾ ರಿಲೇಶನ್‌ಶಿಪ್ ಬಗ್ಗೆ ಸಮಂತಾ ಮಾತನಾಡಿದ್ದು, ಅವರ ಹೇಳಿಕೆ ಅಚ್ಚರಿ ಮೂಡಿಸಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸ್ಯಾಮ್, ʻಯಾರು ಯಾರ ಜೊತೆ ರಿಲೀಶನ್‌ಶಿಪ್ ಇಟ್ಕೊಂಡಿದ್ದಾರೆ ಅನ್ನೋ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ.

ಪ್ರೀತಿಯ ಮೌಲ್ಯವನ್ನ ತಿಳಿಯದವರು ಎಷ್ಟು ಜನರ ಜೊತೆ ಡೇಟ್ ಮಾಡಿದ್ರೂ ಕಣ್ಣೀರು ಹಾಕ್ತಾರೆ. ಅಟ್‌ಲೀಸ್ಟ್ ಆ ಹುಡುಗಿಯಾದ್ರೂ ಸಂತೋಷವಾಗಿರ್ಬೇಕು. ಅವರು ತಮ್ಮ ನಡವಳಿಕೆಯನ್ನ ಬದಲಾಯಿಸಿಕೊಂಡು ಆ ಹುಡುಗಿಯನ್ನ ನೋಯಿಸದಂತೆ ನೋಡಿಕೊಂಡ್ರೆ ಎಲ್ಲರಿಗೂ ಒಳ್ಳೆಯದುʼ ಅಂತ ಸಮಂತಾ ಹೇಳಿದ್ದಾರೆ.

2017ರಲ್ಲಿ ಸಮಂತಾ ಹಾಗೂ ನಾಗಚೈತನ್ಯ ಪ್ರೀತಿಸಿ ಮದುವೆಯಾದರು. ಮದುವೆಯಾದ ನಾಲ್ಕೇ ವರ್ಷಕ್ಕೆ ಇವರ ದಾಂಪತ್ಯ ಮುರಿದುಬಿತ್ತು. ಟಾಲಿವುಡ್‌ನ ಕ್ಯೂಟ್ ಕಪಲ್ ಎನಿಸಿಕೊಂಡಿದ್ದ ಈ ಜೋಡಿ, ವಿಚ್ಛೇದನ ತೆಗೆದುಕೊಳ್ಳೋದಾಗಿ ಘೋಷಿಸುತ್ತಿದ್ದಂತೆ, ಅಭಿಮಾನಿಗಳಿಗೆ ತೀವ್ರ ಬೇಸರ ಉಂಟಾಗಿತ್ತು.

ಆದರೂ ಇದು ಅವರವರ ವೈಯಕ್ತಿಕ ವಿಚಾರ ಅಂತ ಸುಮ್ಮನಾಗಿದ್ರು. ಇವರಿಬ್ಬರು ಬೇರೆ ಆಗೋಕೆ ಕಾರಣ ಏನು ಅನ್ನೋದು ಈವರೆಗೂ ರಿವೀಲ್ ಆಗಿಲ್ಲ. ಅನೇಕರು ಸಮಂತಾ ವಿರುದ್ಧ ಕಿಡಿಕಾರಿದ್ದರು. ಆದ್ರೀಗ ಸಮಂತಾ ಹೇಳಿಕೆ ನೋಡಿದ್ರೆ, ನಾಗಚೈತನ್ಯ ಅವರದ್ದೇ ತಪ್ಪಾ ಅಂತ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಆಗ್ತಿದೆ.
