ಕಾಂಗ್ರೇಸ್ (ongress) ತನ್ನ ಮೊದಲ ಪಟ್ಟಿಯಲ್ಲೇ ರಾಜ್ಯ 7 ಲೊಕಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನ ಫೈನಲ್ ಮಾಡಿ ಪಟ್ಟಿ ರಿಲೀಸ್ ಮಾಡಿತ್ತು. ಈ ಪೈಕಿ ಶಿವಮೊಗ್ಗ (shivamogga) ಕ್ಷೇತ್ರದಿಂದ ಗೀತಾ ಶಿವರಾಜ್ಕುಮಾರ್ (Geetha shivarajkumar) ಕಾಂಗ್ರೇಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬುದು ಖಾತ್ರಿಯಾಗಿತ್ತು. ಈ ಮಾಹಿತಿ ಹೊರಬಿದ್ದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ (social media) ಗೀತಾ ಶಿವರಾಜ್ಕುಮಾರ್ ಮೇಲೆ ಟ್ರೋಲ್ಸ್ ಗಳು ಆರಂಭವಾಗಿವೆ.
ಶಿವಮೊಗ್ಗದಿಂದ ಕಾಂಗ್ರೇಸ್ (congress) ಅಭರ್ಥಿಯಾಗಿರುವ ಗೀತಾ ಶಿವರಾಜ್ ಕುಮಾರ್ ರವರೇ, ದಯವಿಟ್ಟು ಈ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ ಎಂದು ಗೀತಾ ಶಿವರಾಜ್ ಕುಮಾರ್ ಫೋಟೋ ಬಳಸಿ ಸಾಕಷ್ಟು ಟ್ರೋಲ್ (trolls)ಮಾಡಲಾಗ್ತಿದೆ.. ಈ ಹಿಂದಿನ ಚುನಾವಣೆಯಲ್ಲಿ ಜೆಡಿಎಸ್ (jds) ನಿಂದ ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡಿ, ಸೋಲನುಭವಿಸಿ ಬೆಂಗಳೂರಿಗೆ (bangalore) ತೆರಳಿದ ಮೇಲೆ ನೀವು ಶಿವಮೊಗ್ಗಕ್ಕೆ ಎಷ್ಟು ಬಾರಿ ಬಂದಿದ್ದೀರಿ? ಶಿವಮೊಗ್ಗಕ್ಕೆ ಗೀತಾ ಶಿವರಾಜ್ ಕುಮಾರ್ ಕೊಡುಗೆ ಏನು? ಶಿವಮೊಗ್ಗದ ಯಾವ ಹಳ್ಳಿಗೆ ಭೇಟಿ ನೀಡಿದ್ದೀರಿ? ಶಿವಮೊಗ್ಗದ ಜನರ ಕಷ್ಟವನ್ನು ಏನಾದರೂ ಕೇಳಿದ್ದೀರಾ? ಎಂದು ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.
ಇತ್ತ, ಈ ವಿಚಾರ ಹೆಚ್ಚೆಚ್ಚು ವೈರಲ್ (viral) ಆಗ್ತಿದ್ದಂತೆ ಕಾಂಗ್ರೇಸ್ (congress) ಕಾರ್ಯಕರ್ತರು ಎಚ್ಚೆತ್ತುಕೊಂಡಿದ್ದು, ಇದ್ರಿಂದ ಚುನಾವಣೆಗೆ ಯಾವುದೇ ಪ್ರಭಾವ ಆಗದಂತೆ ಶ್ರಮವಹಿಸಲು ಮುಂದಾಗಿದ್ದಾರೆ. ಇಂಥ ಪ್ರಶ್ನೆಗಳು ಮೇಲಿಂದ ಮೇಲೆ ಹೆಚ್ಚಾದಂತೆ ಸೋಷಿಯಲ್ ಮೀಡಿಯಾದಲ್ಲಿ (social media) ಈ ರೀತಿ ಪ್ರಶ್ನೆ ಕೇಳುತ್ತಿರುವ ಟ್ರೋಲರ್ಸ್ ಮೇಲೆ ಶಿಕ್ಷಣ ಸಚಿವ ಮಧು ಬಂಗಾಪ್ಪ (minister madhu bangarappa) ಗರಂ ಆಗಿದ್ದರೆ.