• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಸಾಯಿ ಪಲ್ಲವಿ ಬೆಂಬಲಕ್ಕೆ ನಿಂತ ಕಿಶೋರ್‌ ಕುಮಾರ್: ʼಬಾಯಿ ಮುಚ್ಚಿಸುವʼ ಮಾಧ್ಯಮಗಳಿಗೆ ತಪರಾಕಿ

ಪ್ರತಿಧ್ವನಿ by ಪ್ರತಿಧ್ವನಿ
June 19, 2022
in ಸಿನಿಮಾ
0
ಸಾಯಿ ಪಲ್ಲವಿ ಬೆಂಬಲಕ್ಕೆ ನಿಂತ ಕಿಶೋರ್‌ ಕುಮಾರ್: ʼಬಾಯಿ ಮುಚ್ಚಿಸುವʼ ಮಾಧ್ಯಮಗಳಿಗೆ ತಪರಾಕಿ
Share on WhatsAppShare on FacebookShare on Telegram

ಇತ್ತೀಚೆಗೆ ಬಲಪಂಥೀಯರ ಹಾಗೂ ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾಗಿರುವ ಸಾಯಿ ಪಲ್ಲವಿ ಬೆನ್ನಿಗೆ ಬಹುಭಾಷಾ ನಟ ಕಿಶೋರ್‌ ಕುಮಾರ್‌ ನಿಂತಿದ್ದಾರೆ.

ADVERTISEMENT

ಬಾಯಿ ಮುಚ್ಚಿಸುವುದು ಸರ್ಕಾರದ ಕೆಲಸವಲ್ಲವೇ ಮಾಧ್ಯಮಗಳು ಯಾವಾಗಿಂದ ಈ ಕೆಲಸಕ್ಕೂ ಗುತ್ತಿಗೆ ಪಡೆದವು? ಎಂದು ಪ್ರಶ್ನಿಸಿರುವ ಕಿಶೋರ್‌ ಕುಮಾರ್‌, ಸಿನಿಮಾದವರಿಗೆ ಜನಪರ ಕಾಳಜಿ ಇರುವುದು ತಪ್ಪೇ? ಎಂದು ಕೇಳಿದ್ದಾರೆ.

ನಟಿ ಸಾಯಿ ಪಲ್ಲವಿ ಅವರ ಚಿತ್ರವೊಂದು ಹಂಚಿ, ಫೇಸ್ಬುಕ್‌ ಪೋಸ್ಟ್‌ ಹಾಕಿರುವ ಕಿಶೋರ್‌ ಕುಮಾರ್‌, “ಕಾರಣ ಏನೇ ಆದರೂ ಕೊಲೆ ಮಾಡುವ ಮನಸ್ಥಿತಿ ಒಂದೇ ಹಾಗೂ ಅದು ತಪ್ಪು ಎಂದರೆ ತಪ್ಪೇ? ನಮ್ಮಲ್ಲಿನ ಅಲ್ಪಸಂಖ್ಯಾತರನ್ನು ನಾವು ಹೇಗೆ ಸಮಾನರಾಗಿ ಬದುಕಲು ಬಿಡುತ್ತೇವೆನ್ನುವುದು ನಮ್ಮ ಸಮಾಜದ ಸ್ವಾಸ್ಥ್ಯದ, ಸಭ್ಯತೆಯ ಅಳತೆಗೋಲು ಎನ್ನುವುದು ತಪ್ಪೇ? ಜೀವಕ್ಕೆ ಜಾತಿ ಧರ್ಮಗಳ ಹಂಗಿಲ್ಲವೆಂದರೆ ತಪ್ಪೇ? ಒಬ್ಬರ ಆಹಾರಕ್ರಮದ ಮೇಲೆ ನಿಷೇಧ ಹೇರಿ ಆಹಾರವನ್ನೂ ದ್ವೇಷದ ಸಾಧನವಾಗಿ ಬಳಸಬಾರದೆಂದರೆ ತಪ್ಪೇ?” ಎಂದು ಸುದೀರ್ಘ ಪ್ರಶ್ನೆಗಳನ್ನು ಕೇಳಿದ್ದಾರೆ.

“ಮಾನವೀಯತೆಯ ನಿಲುವಿನ ಸಾಯಿಪಲ್ಲವಿಯಿಂದ ಈ ಮಾಧ್ಯಮದವರು ಕಲಿಯಿವುದು ಸಾಕಷ್ಟಿದೆ . ಸಾಮಾಜಿಕ ಬದ್ಧತೆಯನ್ನು ಧರ್ಮಾಂಧತೆಯ ಕನ್ನಡಿಯಲ್ಲಿ ನೋಡುವ ಮಾಧ್ಯಮ ಗೋಕಾಕ್ ಚಳುವಳಿಯ ಕಾಲದಲ್ಲಿದ್ದಿದ್ದರೆ ರಾಜಕುಮಾರ್ ರವರ ಬಾಯನ್ನೂ ಮುಚ್ಚಿಸುತ್ತಿತ್ತೇನೊ.” ಎಂದು ಅವರು ಬರೆದಿದ್ದಾರೆ.

ಧರ್ಮದ ಹೆಸರಿನಲ್ಲಿ ನಡೆಯುವ ಯಾವುದೇ ಕೊಲೆಯೂ ತಪ್ಪು ಎಂದಿದ್ದ ನಟಿ ಸಾಯಿ ಪಲ್ಲವಿ, ಕಾಶ್ಮೀರ ಹತ್ಯೆಯಾದರೂ ಜೈ ಶ್ರೀ ರಾಂ ಎಂದು ಹೇಳಿ ದನ ಸಾಗಾಟಗಾರನನ್ನು ಕೊಲ್ಲುವುದಕ್ಕೂ ಏನು ವ್ಯತ್ಯಾಸ ಎಂದು ಪ್ರಶ್ನಿಸಿದ್ದರು.

ಇದು ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿತ್ತು. ಸಾಯಿ ಪಲ್ಲವಿ ಅಭಿನಯದ ಎಲ್ಲಾ ಚಿತ್ರಗಳನ್ನು ಬಹಿಷ್ಕರಿಸುವಂತೆ ಬಲಪಂಥೀಯರ ಅಭಿಯಾನ ಮಾಡಿದ್ದರು. ಅದಾಗ್ಯೂ, ಈ ವಿವಾದದ ಬಳಿಕ ತೆರೆಕಂಡ ವಿರಾಟ ಪರ್ವಂ ಚಿತ್ರ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

Previous Post

ಜನರ ಸ್ಪಂದನೆ ನನ್ನ ಸ್ಪೂರ್ತಿ ಎಂದ ಕಿಚ್ಚ | kiccha sudeep |

Next Post

ಬೆಂಗಳೂರು ಪಂದ್ಯ ರದ್ದು: ಭಾರತ-ದ.ಆಫ್ರಿಕಾ ಸರಣಿ 2-2ರಿಂದ ಸಮ

Related Posts

ಡಾಲಿ ಧನಂಜಯ್ ಮನೆಗೆ ಹೊಸ ಸಂತಸದ ಸುದ್ದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್
ಸಿನಿಮಾ

ಡಾಲಿ ಧನಂಜಯ್ ಮನೆಗೆ ಹೊಸ ಸಂತಸದ ಸುದ್ದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್

by ಪ್ರತಿಧ್ವನಿ
April 29, 2026
0

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಡಾಲಿ ಧನಂಜಯ್ ಹಾಗೂ ಅವರ ಪತ್ನಿ ಧನ್ಯತಾ ಜೀವನದ ಹೊಸ ಘಟ್ಟಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಈ...

Read moreDetails
‘ಟಾಕ್ಸಿಕ್’ ಮತ್ತೆ ಮುಂದೂಡಿಕೆ: ಜೂನ್ 4 ರಿಲೀಸ್ ರದ್ದು! ಕಾರಣವೇನು?

‘ಟಾಕ್ಸಿಕ್’ ಮತ್ತೆ ಮುಂದೂಡಿಕೆ: ಜೂನ್ 4 ರಿಲೀಸ್ ರದ್ದು! ಕಾರಣವೇನು?

April 29, 2026
ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

ಕಿಚ್ಚ ಸುದೀಪ್ ಗರಂ: ‘ಸೆರಗ ಸರ್ಸೆ’ ವಿವಾದಕ್ಕೆ ತಣ್ಣನೆಯ ಸಂದೇಶ

April 28, 2026
ಸ್ಟಾರ್ ನಟಿ ಸೌಂದರ್ಯ ನೆನಪು: ವದಂತಿಗಳಿಗೆ ತೆರೆ ಎಳೆದ ಜಗಪತಿ ಬಾಬು – ಭಾವುಕ ಮಾತುಗಳು ವೈರಲ್

ಸ್ಟಾರ್ ನಟಿ ಸೌಂದರ್ಯ ನೆನಪು: ವದಂತಿಗಳಿಗೆ ತೆರೆ ಎಳೆದ ಜಗಪತಿ ಬಾಬು – ಭಾವುಕ ಮಾತುಗಳು ವೈರಲ್

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಸರ್ಜಾ–ದರ್ಶನ್ ಕುಟುಂಬಗಳ ನಡುವೆ ಬಿರುಕು? ಧ್ರುವ ಸರ್ಜಾ ಸ್ಪಷ್ಟನೆಗೆ ತೆರೆಬಿದ್ದ ವದಂತಿಗಳು

April 25, 2026
Next Post
ಬೆಂಗಳೂರು ಪಂದ್ಯ ರದ್ದು: ಭಾರತ-ದ.ಆಫ್ರಿಕಾ ಸರಣಿ 2-2ರಿಂದ ಸಮ

ಬೆಂಗಳೂರು ಪಂದ್ಯ ರದ್ದು: ಭಾರತ-ದ.ಆಫ್ರಿಕಾ ಸರಣಿ 2-2ರಿಂದ ಸಮ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada