ಇಶಾ ಫೌಂಡೇಶನ್ (Isha foundation) ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಸಂಬಂದ ಮದ್ರಾಸ್ ಹೈಕೋರ್ಟ್ (Madras high court) ಸೂಚನೆ ನೀಡಿದ ನಂತರ 150 ಮಂದಿ ಪೊಲೀಸ್ ಅಧಿಕಾರಿಗಳ ತಂಡ ಕೊಯಮತ್ತೂರಿನ ತೊಂಡಮುತ್ತೂರ್‌ನಲ್ಲಿರುವ ಇಶಾ ಫೌಂಡೇಶನ್‌ನ ಆಶ್ರಮಕ್ಕೆ ನುಗ್ಗಿ ಶೋಧ ನಡೆಸಿದ್ದಾರೆ.
ಈ ಇಶಾ ಫೌಂಡೇಶನ್ ವಿರುದ್ಧದ ಆರೋಪಗಳ ವಿಚಾರಣೆಯ ಹಂತದಲ್ಲಿ, ನ್ಯಾಯಮೂರ್ತಿಗಳಾದ ಎಸ್‌ಎಂ ಸುಬ್ರಮಣ್ಯಂ & ವಿ ಶಿವಜ್ಞಾನಂ ಅವರು ಸದ್ಗುರು ಜಗ್ಗಿ ವಾಸುದೇವ್ (Sadhguru jaggi Vasudev) ಅವರ ವೈಯಕ್ತಿಕ ಜೀವನ ಶೈಲಿ ಮತ್ತು ಅವರು ತಮ್ಮ ಅನುಯಾಯಿಗಳಿಗೆ ಭೋಧಿಸುವ ಜೀವನಶೈಲಿಯ ನಡುವಿನ ವ್ಯತ್ಯಾಸದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಸದ್ಗುರು ಜಗ್ಗಿ ವಾಸುದೇವ್ ತಮ್ಮ ಸ್ವಂತ ಮಗಳಿಗೆ ಮದುವೆ ಮಾಡಿ ಸಂಸಾರದ ಜೀವನದ ದಾರಿ ತೋರಿಸಿ, ಮತ್ತೊಂದೆಡೆ ಇಶಾ ಫೌಂಡೇಶನ್ ನಲ್ಲಿ ಯುವತಿಯರೈಗೆ ಲೌಕಿಕ ಜೀವನ ತ್ಯಜಿಸಿ, ತಲೆ ಬೋಳಿಸಿಕೊಂಡು, ಯೋಗ ಕೇಂದ್ರಗಳಲ್ಲಿ ಸಂನ್ಯಾಸಿಗಳಾಗಿ ಬದುಕಲು ಏಕೆ ಪ್ರೋತ್ಸಾಹಿಸುತ್ತಿರುವುದು ಎಂದು ನ್ಯಾಯಾಲಯ ಪ್ರಶ್ನಿಸಿದೆ.