ಯುರೋಪ್ ಒಕ್ಕೂಟದ ಪ್ರಮುಖ ದೇಶವಾದ ಸ್ವಿಟ್ಜರ್ಲ್ಯಾಂಡ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹೊಸ ಯಂತ್ರವೊಂದನ್ನು ಅವಿಷ್ಕರಿಸಲಾಗಿದೆ. ಭಾರತದಲ್ಲಿ ಇಂತಹದೊಂದು ಅವಿಷ್ಕಾರದ ಕುರಿತು ಯಾರಾದರೂ ಯೋಚಿಸುವ ಮೊದಲೇ, ಆ ಯಂತ್ರಕ್ಕೆ ಕಾನೂನಿನ ಮಾನ್ಯತೆ ಪಡೆಯುವ ಪರೀಕ್ಷೆಯನ್ನೂ ಪಾಸ್ ಮಾಡಿದೆ. ಇದು ವಿಚಿತ್ರವೆಂದು ಅನ್ನಿಸಿದರೂ ಸತ್ಯ.
ಈ ಆತ್ಮಹತ್ಯೆ ಮಾಡಿಕೊಳ್ಳುವ ಯಂತ್ರದ ಹೆಸರು Sacro suicide capsule. ಎಕ್ಸಿಟ್ ಇಂಟರ್ನ್ಯಾಷನಲ್ ಎಂಬ ಸರ್ಕಾರೇತರ ಸಂಸ್ಥೆಯೊಂದು ಈ ಯಂತ್ರವನ್ನು ಅಭಿವೃದ್ದಿಪಡಿಸಿದೆ. ಅಂದಹಾಗೆ, ಕೆಲವೊಂದು ನಿರ್ದಿಷ್ಟ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಸ್ವಿಟ್ಜರ್ಲ್ಯಾಂಡ್ನ ಕಾನೂನಿನಡಿ ಅವಕಾಶವಿದೆ.
2020ರಲ್ಲಿ ಸುಮಾರು ಸ್ವಿಟ್ಜರ್ಲ್ಯಾಂಡ್ ನ 1,300 ಜನರು ಹಲವು ಕಾರಣಗಳಿಗಾಗಿ ಕಾನೂನಿನಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಆತ್ಮಹತ್ಯೆಗಳಿಗಾಗಿ ಎಕ್ಸಿಟ್ (ಎಕ್ಸಿಟ್ ಇಂಟರ್ನ್ಯಾಷನಲ್ ಅಲ್ಲ) ಮತ್ತು ಡಿಗ್ನಿಟಾಸ್ ಎಂಬ ಎರಡು ಎರಡು ಸಂಸ್ಥೆಗಳು ಸಹಕರಿಸಿವೆ. ಈ ರೀತಿ ಇನ್ನೊಂದು ಸಂಸ್ಥೆ ಅಥವಾ ವ್ಯಕ್ತಿಯ ಸಹಕಾರದಿಂದ ಆತ್ಮಹತ್ಯೆ (Assisted suicide) ಮಾಡಿಕೊಳ್ಳುವವರ ಸಂಖ್ಯೆ ಸ್ವಿಟ್ಜರ್ಲ್ಯಾಂಡ್ನಲ್ಲಿ ಏರುತ್ತಲೇ ಇದೆ.
ಏನಿದು Sacro suicide capsule?
ಈ ಆತ್ಮಹತ್ಯಾ ಪೆಟ್ಟಿಗೆಯನ್ನು 3D ಪ್ರಿಂಟ್ ಮೂಲಕ ತಯಾರಿಸಲಾಗಿದೆ. ಡಾ. ಫಿಲಿಪ್ ನಿಷ್ಕೆ ಈ ಅವಿಷ್ಕಾರದ ಹಿಂದಿರುವ ವ್ಯಕ್ತಿ. ಆತ್ಮಹತ್ಯೆ ಮಾಡಿಕೊಳ್ಳಲು ಇಚ್ಛಿಸುವ ವ್ಯಕ್ತಿ ಒಮ್ಮೆ ಪೆಟ್ಟಿಗೆಯೊಳಗೆ ಹೋಗಿ ಮಲಗಿದ ಬಳಿಕ ಈ ಯಂತ್ರ ಸಕ್ರಿಯವಾಗುತ್ತೆ.
ಈ ಯಂತ್ರವನ್ನು ತಯಾರಿಸಿದವರು ನೀಡಿರುವ ಮಾಹಿತಿಯ ಪ್ರಕಾರ, ವ್ಯಕ್ತಿ ಈ ಯಂತ್ರದಲ್ಲಿ ಮಲಗಿಕೊಂಡ ಬಳಿಕ, ಯಂತ್ರವು ವ್ಯಕ್ತಿಗೆ ಹಲವು ಪ್ರಶ್ನೆಗಳನ್ನು ಕೇಳುತ್ತದೆ. ಈ ಪ್ರಶ್ನೆಗಳಿಗೆ ಉತ್ತರಿಸಿದ ಬಳಿಕ ಯಂತ್ರದೊಳಗಿನ ಗುಂಡಿಯೊಂದನ್ನು ಅದುಮಿದರೆ ಅವರ ಜೀವನದ ಅಂತ್ಯ ಘಳಿಗೆ ಅಲ್ಲಿ ಸಮೀಪಿಸುತ್ತದೆ.
“ಎರಡು ಮಾದರಿಯ ಸ್ಯಾಕ್ರೊ ಪ್ರೋಟೋಟೈಪ್ ಗಳನ್ನು ತಯಾರಿಸಲಾಗಿದೆ. ಮೂರನೇಯದು ಈಗಾಗಲೇ ನೆದರ್ಲ್ಯಾಂಡ್’ನಲ್ಲಿ ಪ್ರಿಂಟ್ ಆಗುತ್ತಿದೆ. ಎಲ್ಲವೂ ಅಂದಕೊಂಡಂತೆ ನಡೆದಲ್ಲಿ 2022ರ ವೇಳೆಗೆ ಸ್ವಿಟ್ಜರ್ಲ್ಯಾಂಡ್ ಗೆ ತಲುಪಲಿದೆ,” ಎಂದು ಡಾ. ಫಿಲಿಪ್ ಹೇಳಿದ್ದಾರೆ.
ಈ ಆತ್ಮಹತ್ಯಾ ವಿಧಾನವು ದಯಾಮರಣದ ರೀತಿಯಲ್ಲ ಎನ್ನುತ್ತಾರೆ ತಜ್ಞರು. ದಯಾಮರಣವು ತೀವ್ರವಾದ ಹಾಗೂ ಗುಣಪಡಿಸಲಾಗದ ನೋವಿನಿಂದ ಅಥವಾ ರೋಗದಿಂದ ನರಳುತ್ತಿರುವ ವ್ಯಕ್ತಿಯ ನೋವನ್ನು ದೂರಪಡಿಸಲು ಬಳಸುವ ಮರಣದ ವಿಧಾನ. ಇಲ್ಲಿ ವೈದ್ಯರು ರೋಗಿಯ ಸಾವಿಗಾಗಿ ಮದ್ದು ನೀಡುತ್ತಾರೆ. ಆದರೆ, Sacro suicide capsule ಯಾವುದೇ prescription ಇಲ್ಲದೆ ಅಥವಾ ವೈದ್ಯಕೀಯ ಸಲಹೆ ಇಲ್ಲದೆ ವ್ಯಕ್ತಿಯು ತನ್ನ ಸ್ವಇಚ್ಛೆಯಿಂದ ಮರಣವನ್ನು ಸ್ವೀಕರಿಸುವ ವಿಧಾನ, ಎಂಬುದು ಅವರ ವಾದ.
ಭಾರತೀಯ ಕಾನೂನಿನ ಪ್ರಕಾರ ದಯಾಮರಣ ಹಾಗೂ ಆತ್ಮಹತ್ಯೆ ಎರಡೂ ಕಾನೂನು ಬಾಹಿರ ಕೃತ್ಯಗಳು. 2011ರಲ್ಲಿ ಅರುಣಾ ಶಾನುಭಾಗ್ ಎಂಬವರಿಗೆ ನೀಡಲಾಗಿದ್ದ ವೈದ್ಯಕೀಯ ಜೀವ ಸಾಧನಗಳನ್ನು ತೆಗೆಯಲು ಸುಪ್ರಿಂ ಕೋರ್ಟ್ ಅನುಮತಿ ನೀಡಿತ್ತು. ಅವರಿಗೆ ವೈದ್ಯಕೀಯ ಸೇವೆ ಪಡೆಯಲು ಇಚ್ಛೆ ಇಲ್ಲದ ಕಾರಣ ಅವರಿಗೆ ದಯಾವಮರಣವನ್ನು ನೀಡಲಾಗಿತ್ತು. ಇದು ಭಾರತದ ಮೊತ್ತಮೊದಲ ದಯಾಮರಣದ ಪ್ರಕರಣ. ಈಗಲೂ, ಯಾವುದೇ ದಯಾಮರಣದ ಅರ್ಜಿ ಸಲ್ಲಿಕೆಯಾದಾಗ ಇದೇ ಪ್ರಕರಣದ ತೀರ್ಪನ್ನು ಮುಂದಿಟ್ಟುಕೊಂಡು ವಾದ ಮಂಡಿಸಲಾಗುತ್ತದೆ.