ರಾಜಸ್ಥಾನ ಕಾಂಗ್ರೆಸ್ನಲ್ಲಿ ಈ ಹಿಂದಿನಿಂದಲೂ ನಾಯಕತ್ವ ಬದಲಾವಣೆಯ ಕೂಗು ಕೇಳಿ ಬರುತ್ತಲೇ ಇದೆ ಈ ಮಧ್ಯೆ ರಾಜಸ್ಥಾನ ಕಾಂಗ್ರೆಸ್ನ ರೆಬೆಲಿಯನ್ ಎಂದೇ ಹೆಸರು ವಾಸಿಯಾಗಿರುವ ಸಚಿನ್ ಪೈಲಟ್ ಕಾಂಗ್ರೆಸ್ ವರಿಷ್ಠೆ ಸೋನಿಯಾರನ್ನು ಬೇಟಿ ಮಾಡಿ ಕೆಲಹೊತ್ತು ಚರ್ಚಿಸಿದ್ದಾರೆ ಎಂದು ಅಧಿಕೃತ ಸುದ್ದಿ ಮೂಲಗಳು ತಿಳಿಸಿವೆ.
ಸೋನಿಯಾರೊಂದಿಗೆ ಗುಪ್ತ ಮಾತುಕತೆ ನಡೆಸಿದ ಪೈಲಟ್ ತಮ್ಮನ್ನು ಮುಖ್ಯಮಂತ್ರಿ ಮಾಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಭೇಟಿ ನಂತರ ಮಾತನಾಡಿದ ಪೈಲಟ್ ರಾಜಸ್ಥಾನದಲ್ಲಿ ನಾವು ಹೇಗೆ ಟ್ರೆಂಡ್ ಮುರಿಯಬೇಕು ಎಂಬುದರ ಬಗ್ಗೆ ಚರ್ಚಿಸಿದ್ದೇನೆ ಎಂದು ಹೇಳಿ ಸುಮ್ಮನಾಗಿದ್ದಾರೆ.
ಚುನಾವಣೆಗಳಲ್ಲಿ ಸತತ ಸೋಲಿನ ಪರಿಣಾಮವಾಗಿ ಈಗಾಗಲೇ ಕುಗ್ಗಿ ಹೋಗಿರುವ ಕಾಂಗ್ರೆಸ್ಗೆ ರಾಜಸ್ಥಾನದ ಮೂಲಕ ಮತ್ತೆ ಪುಟಿದೇಳುವ ತವಕದಲ್ಲಿದೆ. ಆದರೆ, ರಾಜಸ್ಥಾನ ಕಾಂಗ್ರೆಸ್ನ ಆಂತರಿಕ ಹಾಗೂ ಬಹಿರಂಗ ಬಂಡಾಯದಿಂದಾಗಿ ಅಲ್ಲು ಸಹ ಸೋಲುವ ಭೀತಿಯಲ್ಲಿದೆ.

ರಾಜಸ್ಥಾನ ರಾಜಕೀಯದಲ್ಲಿ ಸಚಿನ್ ಪೈಲಟ್ ತಮ್ಮ ಮುಂದಿನ ದಾರಿ ಹಾಗೂ ತಮ್ಮ ಪಾತ್ರದ ಕುರಿತು ಸೋನಿಯಾ ಬಳಿ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ. ಪೈಲಟ್ ಕಡೆಯದಾಗಿ 2020ರಲ್ಲಿ ರಾಜಸ್ಥಾನ್ ಪ್ರದೇಶ ಕಾಂಗ್ರೆಸ್ (RPCC) ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದರು. ನಂತರದ ದಿನಗಳಲ್ಲಿ ಅವರು ಬಂಡಾಯವೆದ್ದ ಕಾರಣ ಅವರನ್ನು ಸಂಪುಟದಿಂದ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು.
ನಾನು ಕಾಂಗ್ರೆಸ್ನ ಭವಿಷ್ಯದ ಹಾದಿ ಹಾಗೂ ರಾಜಸ್ಥಾನದಲ್ಲಿ ಅದನ್ನು ಹೇಗೆ ಕಾರ್ಯರೂಪಕ್ಕೆ ತರಬೇಕು ಎಂಬುದರ ಬಗ್ಗೆ ನಾನು ಮಾತನಾಡಿದ್ದೇನೆ. ಪಕ್ಷವನ್ನು ಬೇರು ಮಟ್ಟದಿಂದ ಹೇಗೆ ಬಲಗೊಳಿಸಬೇಕು ಅದಕ್ಕೆ ಅನುಸರಿಸಬೇಕಾದ ಅಗತ್ಯ ಕ್ರಮಗಳನ್ನು ಹೇಗೆ ಪಾಲಿಸಬೇಕು ಎಂಬುದನ್ನು ಈಗಾಗಲೇ ಮಾತನಾಡಿದ್ದೇನೆ ಎಂದು ಸಭೆಯ ನಂತರ ಸುದ್ದಿಗಾರರಿಗೆ ಪೈಲಟ್ ತಿಳಿಸಿದ್ದಾರೆ.
ಸಚಿನ್ ಪೈಲಟ್ನ ಪಾತ್ರದ ಕುರಿತು ಸೋನಿಯಾ ಅಂತಿಮ ನಿರ್ಧಾರದ ಮೇಲೆ ನಿಂತಿದೆ. ಒಂದು ವೇಳೆ ನಿಮ್ಮಗೆ ರಾಷ್ಟ್ರೀಯ ಸ್ಥಾನಮಾನ ನೀಡಿದರೆ ನೀವು ಅದನ್ನು ನಿರ್ವಹಿಸುತ್ತೀರಾ ಎಂಬ ಪ್ರಶ್ನೆಗೆ ಮಾತನಾಡಿದ ಪೈಲಟ್ ʻʻನಾನು ಈ ಹಿಂದೆ ಸ್ಪಷ್ಟಪಡಿಸಿದ್ದೇನೆ ನಾನು ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಪಾತ್ರ ವಹಿಸುವುದಕ್ಕು ಸಿದ್ದನಿದ್ದೇನೆ ರಾಜಸ್ಥಾನದಲ್ಲಾಗಲ್ಲಿ ಅಥವಾ ರಾಷ್ಟ್ರದಲ್ಲಾಗಲ್ಲಿ ಎಂದು ಹೇಳಿದ್ದಾರೆ.
ಇಂದಿನ ಸಭೆಯು ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್ನಲ್ಲಿ ಶುರುವಾಗಿರುವ ನಿರ್ಗಮನದ ಟ್ರೆಂಡ್ ಅನ್ನು ಸೂಚಿಸುತ್ತದೆ. ಈಗಾಗಲೇ ರಾಹುಲ್ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಜ್ಯೋತಿರಾಧಿತ್ಯಸಿಂಧಿಯಾ, ಜಿತಿನ್ ಪ್ರಸಾದ್ ಹಾಗೂ ಆರ್ಪಿಎನ್ ಸಿಂಗ್ ಈಗಾಗಲೇ ಬಿಜೆಪಿ ಕ್ಯಾಂಪ್ ಸೇರಿದ್ದಾರೆ.
ತಾವು ರಾಜಸ್ಥಾನ ಮುಖ್ಯಮಂತ್ರಿಯಾಗಲು ಸೂಕ್ತ ಅಭ್ಯರ್ಥಿ 2018ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಅವಿರತವಾಗಿ ಶ್ರಮಿಸಿದ್ದರು. ಆದರೆ, ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದ ನಂತರ ಸಚಿನ್ರನ್ನು ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸುವಂತೆ ಕೈ ಕಮಾಂಡ್ ಮನವೊಲಿಸಿತ್ತು.

ಸರ್ಕಾರ ರಚನೆಯಾಗಿ ಒಂದು ವರ್ಷಗಳ ನಂತರ ಗೆಹ್ಲೋಟ್ ಸರ್ಕಾರ ಮಾಡಿಕೊಂಡಿದ್ದ ಒಡಂಬಡಿಕೆ ವಿರುದ್ದ ಸಿಡಿದೆದ್ದ ಪೈಲಟ್ ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ಗೆ ದೂರನ್ನು ಸಲ್ಲಿಸಿದರು. ಇದು ಬಂಡಾಯಕ್ಕೆ ಕಾರಣವಾಗಿ 18 ಕೈ ಶಾಸಕರು ಪೈಲಟ್ ಜೊತೆಜೊತೆಗೆ ರಾಜೀನಾಮೆ ನೀಡಲು ಸಿದ್ದರಾಗಿದ್ದರು ಇದು ಎಲ್ಲಿಯವರೆಗೂ ಬಂದಿತ್ತೆಂದರೆ ಇನ್ನೇನು ಗೆಹ್ಲೋಟ್ ಸರ್ಕಾರ ಪತನವಾಯಿತ್ತು ಎಂದು ದೇಶದ ಜನತೆ ಅಂದುಕೊಂಡಿದ್ದರು.
ಸಚಿನ್ ಬಂಡಾಯವನ್ನು ತಣಿಸಿದ ಕಾಂಗ್ರೆಸ್ ಹೈ ಕಮಾಂಡ್ ಕುಂದುಕೊರತೆಗಳನ್ನು ಅಗತ್ಯವಾಗಿ ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಜರುಗಿಸಲಾಗುವುದು ಮತ್ತು ತಮ್ಮ ಬೆಂಬಲಿಗರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆಯೊಂದಿಗೆ ಬಂಡಾಯವನ್ನು ತಣಿಸಿತ್ತು. ಅದರಂತೆ ಪೈಲಟ್ ಬೆಂಬಲಿಗರಿಗೆ ಗೆಹ್ಲೋಟ್ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ನೀಡಲಾಗಿದೆ.
ಸೋನಿಯಾ ಬೇಟಿಗೂ ಮೊದಲೇ ಪೈಲಟ್ ರಾಹುಲ್ ಹಾಗೂ ಪ್ರಿಯಾಂಕರ ಜೊತೆ ಒಂದು ಸುತ್ತು ಮಾತುಕತೆ ನಡೆಸಿದ್ದಾರೆ. ಪೈಲಟ್ ಹೆಸರು ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ. ಅದರ ಜೊತೆಗೆ ಇನ್ನೊಂದು ವಿಚಾರ ಕೇಳಿ ಬರುತ್ತಿತುವುದು ಏನೆಂದರೆ ಕಾಂಗ್ರೆಸ್‌ನ ಆಂತರಿಕ ತಿಕ್ಕಾಟದ ಲಾಭ ಪಡೆಯಲು ಯತ್ನಿಸುತ್ತಿರುವ ಬಿಜೆಪಿ ಸಚಿನ್‌ರನ್ನು ತಮ್ಮತ್ತ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ರಾಜಸ್ಥಾನ ರಾಜಕೀಯ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.