ಕಳೆದ ವರ್ಷ ಆರಂಭಗೊಂಡ ಉಕ್ರೇನ್ (ukraine) ವಿರುದ್ಧದ ಯುದ್ಧ ಮುಂದುವರೆದಿರುವ ನಡುವೆ ರಷ್ಯಾ (Russia) ಮತ್ತೊಂದು ಕ್ಷಿಪಣಿ ಪರೀಕ್ಷೆ ಮಾಡಿದೆ. RS24 ಯಾರ್ಸ್ ಎಂಬ ಹೆಸರಿನ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ನಡೆಸಿದೆ.
ವಾಯುವ್ಯ ರಷ್ಯಾದ ಪ್ಲೆಸೆಟ್ಸ್ ಕಾಸ್ಕೋಡೋಮ್‌ನಿಂದ ದೂರದ ಪರ್ಯಾಯ ದ್ವೀಪ ಕಮ್ಪಟ್ನಾಕ್ಕೆ ಉಡಾವಣೆ ಮಾಡಿದೆ. ಜಲಾಂತರ್ಗಾಮಿ ನೌಕೆಗಳಿಂದ ಸಿನೆವಾ ಹಾಗೂ ಬುಲವಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ.
ಆಯಕಟ್ಟಿನ ಬಾಂಬರ್ ವಿಮಾನಗಳಿಂದ ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿದೆ. ಜಾಗತಿಕ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹಾಗೂ ಬಾಹ್ಯ ಬೆದರಿಕೆಗಳಿಂದ ಅಪಾಯ ಎದುರಾಗುವ ಸಾಧ್ಯತೆ ಇದ್ದು ಆಧುನಿಕ ಹಾಗೂ ನಿರಂತರವಾಗಿ ಕಾರ್ಯತಂತ್ರದ ಶಕ್ತಿಗಳನ್ನು ಹೊಂದುವುದು ಮುಖ್ಯವಾಗಿದೆ ಅಂತ ರಷ್ಯಾ ಹೇಳಿದೆ.