ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಪೂರ್ತಿ ಹಣ ತುಂಬಿದ ನಾಲ್ಕು ಕಾರುಗಳು ಮತ್ತು ಹೆಲಿಕಾಪ್ಟರ್ನೊಂದಿಗೆ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂದು ಕಾಬೂಲ್ನಲ್ಲಿರುವ ರಷ್ಯಾದ ರಾಯಭಾರ ಕಚೇರಿ ಸೋಮವಾರ ತಿಳಿಸಿದೆ.
ತಾಲಿಬಾನರ ಹಟ್ಟಹಾಸದಿಂದ ಇಕ್ಕಟ್ಟಿಗೆ ಸಿಲುಕಿದ ಘನಿ ಕಾಬೂಲ್ ನ ಅಧ್ಯಕ್ಷೀಯ ಅರಮನೆಯಿಂದ ಕಾಲ್ಕಿತ್ತಿದ್ದಾರೆ.
“ರಕ್ತಪಾತವನ್ನು ತಪ್ಪಿಸಲು, ನಾನು ದೇಶವನ್ನು ಬಿಡುವುದು ಉತ್ತಮ ಎಂದು ನಾನು ಭಾವಿಸಿದ್ದೇನೆ” ಎಂದು 72 ರ ಹರೆಯದ ಘನಿ ಅವರು ನಿರ್ಗಮಿಸಿದ ನಂತರ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಮಾಜಿ ವಿಶ್ವಬ್ಯಾಂಕ್ ಅಕಾಡೆಮಿಕ್ – ನ್ಯೂಯಾರ್ಕ್ ನಗರದ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಅವರು ಎಲ್ಲಿಗೆ ಹೋಗುತ್ತಿದ್ದಾರೆಂದು ಯಾರಿಗೂ ಹೇಳಿಲ್ಲ, ಆದರೆ ಅಲ್ ಜಜೀರಾ ಅವರು ಘನಿ ಉಜ್ಬೇಕಿಸ್ತಾನಕ್ಕೆ ಹೋಗಿದ್ದಾರೆ ಎಂದು ವರದಿ ಮಾಡಿದೆ.
“ಆಡಳಿತ ಪತನಕ್ಕೆ ಸಂಬಂಧಿಸಿದಂತೆ, ಘನಿ ಅಫ್ಘಾನಿಸ್ತಾನದಿಂದ ಪಲಾಯನ ಮಾಡಿದ ರೀತಿಯಲ್ಲಿ ಇದು ಅತ್ಯಂತ ನಿರರ್ಗಳವಾಗಿ ನಿರೂಪಿಸಲ್ಪಟ್ಟಿದೆ” ಎಂದು ಕಾಬೂಲ್ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ವಕ್ತಾರರಾದ ನಿಕಿತಾ ಇಶ್ಚೆಂಕೊ ಹೇಳಿದ್ದನ್ನು ರಷ್ಯಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ RIA ವರದಿ ಮಾಡಿದೆ. .
“ನಾಲ್ಕು ಕಾರುಗಳಲ್ಲಿ ಹಣ ತುಂಬಿತ್ತು, ಹಣದ ಇನ್ನೊಂದು ಭಾಗವನ್ನು ಹೆಲಿಕಾಪ್ಟರ್ಗೆ ತುಂಬಲು ಪ್ರಯತ್ನಿಸಿದರು, ಅಷ್ಟು ಹಣ ತುಂಬಲು ಸಾದ್ಯವಾಗಲಿಲ್ಲ. ಹಾಗಾಗಿ ಕೆಲ ಹಣವು ಡಾಂಬರ್ ಮೇಲೆ ಬಿದ್ದಿದೆ” ಎಂದು ಇಶ್ಚೆಂಕೊ ಹೇಳಿದ್ದನ್ನು ಉಲ್ಲೇಖಿಸಲಾಗಿದೆ.
ಅಫ್ಘಾನಿಸ್ತಾನದ ಕುರಿತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿಶೇಷ ಪ್ರತಿನಿಧಿಯಾದ ಜಮೀರ್ ಕಾಬುಲೋವ್, ಪಲಾಯನ ಮಾಡುವ ಸರ್ಕಾರವು ಎಷ್ಟು ಹಣವನ್ನು ಬಿಟ್ಟು ಹೋಗುತ್ತಿದೆ ಎಂದು ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ.
“ಪಲಾಯನ ಮಾಡಿದ ಸರ್ಕಾರವು ರಾಜ್ಯ ಬಜೆಟ್ನಿಂದ ಎಲ್ಲಾ ಹಣವನ್ನು ತೆಗೆದುಕೊಂಡು ಹೋಗಲ್ಲ ಎಂದು ನಾನು ಭಾವಿಸುತ್ತೇನೆ. ಏನನ್ನಾದರೂ ಬಿಟ್ಟರೆ ಅದು ಬಜೆಟ್ನ ಭಾಗವಾಗಿರುತ್ತದೆ “ಎಂದು ಕಾಬುಲೋವ್ ಮಾಸ್ಕೋದ ಎಖೋ ಮಾಸ್ಕ್ವಿ ರೇಡಿಯೋ ಕೇಂದ್ರಕ್ಕೆ ಹೇಳಿದ್ದಾರೆ ಎಂದು ರಾಯಿಟರ್ಸ್ ತಿಳಿಸಿದೆ.
ಅಫ್ಘಾನಿಸ್ತಾನದಲಗಲಿರು ರಷ್ಯಾ ರಾಯಭಾರಿ ಮಂಗಳವಾರ ತಾಲಿಬಾನ್ ಅನ್ನು ಭೇಟಿ ಮಾಡಲಿದ್ದು, ಅಫ್ಘಾನ್ ನಡವಳಿಕೆಯ ಆಧಾರದ ಮೇಲೆ ಹೊಸ ಸರ್ಕಾರವನ್ನು ಗುರುತಿಸಬೇಕೇ ಎಂದು ಮಾಸ್ಕೋ ನಿರ್ಧರಿಸುತ್ತದೆ ಎಂದು ಸೋಮವಾರ ರಷ್ಯಾ ಸರ್ಕಾರ ಹೇಳಿದೆ.
“ನಮ್ಮ ರಾಯಭಾರಿ ತಾಲಿಬಾನ್ ನಾಯಕತ್ವದೊಂದಿಗೆ ಸಂಪರ್ಕದಲ್ಲಿದ್ದಾರೆ, ಮಂಗಳವಾರ ತಾಲಿಬಾನ್ ಭದ್ರತಾ ಸಂಯೋಜಕರನ್ನು ಭೇಟಿ ಮಾಡುತ್ತಾರೆ” ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿ ಜಮೀರ್ ಕಾಬುಲೋವ್ ಸೋಮವಾರ ಎಖೋ ಮಾಸ್ಕ್ವಿ ರೇಡಿಯೋ ಕೇಂದ್ರಕ್ಕೆ ತಿಳಿಸಿದ್ದರು.
ರಾಯಭಾರಿ ಡಿಮಿಟ್ರಿ ಜಿರ್ನೋವ್ ಮತ್ತು ತಾಲಿಬಾನ್ ನಡುವಿನ ಮಾತುಕತೆಗಳು ಕಾಬೂಲ್ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯಲ್ಲಿ ನಡೆಲಿದ್ದು, ಭದ್ರತೆಯನ್ನು ಒದಗಿಸಲು ಗುಂಪು ಹೇಗೆ ಯೋಜಿಸುತ್ತಿದೆ ಎಂಬುದರ ಬಗ್ಗೆ ನಮ್ಮ ಕಾಳಜಿ ಇದೆ ಎಂದು ಹೇಳಿದ್ದಾರೆ.