• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಷ್ಯಾದಲ್ಲಿ ವಿಮಾನ ಪತನ- 10 ಸಾವು; ಕೊಲೆಯೋ..? ಅಪಘಾತವೋ..?

ಕೃಷ್ಣ ಮಣಿ by ಕೃಷ್ಣ ಮಣಿ
August 24, 2023
in Top Story, ವಿದೇಶ
0
ರಷ್ಯಾದಲ್ಲಿ ವಿಮಾನ ಪತನ- 10 ಸಾವು; ಕೊಲೆಯೋ..? ಅಪಘಾತವೋ..?
Share on WhatsAppShare on FacebookShare on Telegram

ರಷ್ಯಾ ಮತ್ತು ಉಕ್ರೇನ್​ ನಡುವೆ ಯುದ್ಧ ಶುರುವಾಗಿ ಬರೋಬ್ಬರಿ ಒಂದೂವರೆ ವರ್ಷ ಆಗುತ್ತಿದೆ. ಆದರೆ ಇನ್ನೂ ಯುದ್ಧ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಆದರ ನಡುವೆ ರಷ್ಯಾ ವಿರುದ್ಧ ತಿರುಗಿ ಬಿದ್ದಿದ್ದ ರಷ್ಯಾದ ಖಾಸಗಿ ಸೇನಾಪಡೆ ವ್ಯಾಗ್ನರ್ ಗ್ರೂಪ್​ನ ಮುಖ್ಯಸ್ಥ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾನೆ. ಉಕ್ರೇನ್​ ಮೇಲೆ ಯುದ್ಧ ಸಾರಿದ ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಸಡ್ಡು ಹೊಡೆದಿದ್ದ ಪ್ರಿಗೊಜಿನ್, ರಷ್ಯಾ ಸೇನೆ ವಿರುದ್ಧ ತೊಡೆ ತಟ್ಟಿ ಯುದ್ಧ ಶುರು ಮಾಡಿತ್ತು. ಇದೀಗ ವಿಮಾನ ದುರಂತದಲ್ಲಿ ವ್ಯಾಗ್ನರ್ ಗ್ರೂಪ್ ಮುಖ್ಯಸ್ಥ ಪ್ರಿಗೊಜಿನ್ ಸಾವನ್ನಪ್ಪಿದ್ದು ರಷ್ಯಾಗೆ ಎದುರಾಗಿದ್ದ ಆಂತರಿಕ ಯುದ್ಧ ಭೀತಿ ಶುರು ಆಗಿದೆ.

ADVERTISEMENT

ರಷ್ಯಾ ತಂತ್ರಗಾರಿಕೆಯಿಂದ ಪ್ರಿಗೊಜಿನ್​ನನ್ನು ಮುಗಿಸಿತೇ..?

2023ರ ಜೂನ್‌‌ನಲ್ಲಿ ವ್ಯಾಗ್ನರ್ ಖಾಸಗಿ ಸೇನಾಪಡೆ ಮುಖಸ್ಥ ಯೆವೆಗೆನ್ಸಿ ಪ್ರಿಗೊಜಿನ್ ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಬಂಡೆದ್ದಿದ್ದ. ಒಂದು ಕಾಲದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಪರಮಾಪ್ತನಾಗಿದ್ದ ಪ್ರಿಗೊಜಿನ್, ಅಧ್ಯಕ್ಷರ ಖಾಸಗಿ ಅಂಗರಕ್ಷಕ ಪಡೆಯ ಮುಖ್ಯಸ್ಥನಾಗಿದ್ದ. ಆದರೆ ಅಧ್ಯಕ್ಷ ಪುಟಿನ್​ ವಿರುದ್ಧ ಹಾಗು ರಷ್ಯಾ ಸೇನೆ ವಿರುದ್ಧವೇ ಪ್ರಿಗೊಜಿನ್ ತಿರುಗಿ ಬಿದ್ದು ಯುದ್ಧ ಸಾರಿದ್ದನ್ನು. ಬಳಿಕ ಶಾಂತಿ ಸಂಧಾನ ನಡೆದ ಬಳಿಕ ಬಂಡಾಯ ಶಮನ ಆಗಿತ್ತು. ಇದಾಗಿ ಮೂರೇ ತಿಂಗಳಲ್ಲಿ ಪ್ರಿಗೊಜಿನ್ ಇದ್ದ ವಿಮಾನ ಪತನ ಆಗಿದೆ. ಪ್ರಿಗೊಜಿನ್ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಈ ದುರುಂತದ ಬಗ್ಗೆ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಇದೀಗ ಮತ್ತೆ ಖಾಸಗಿ ಸೇನಾಪಡೆ ತಿರುಗಿ ಬೀಳುತ್ತಾ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ವಿಮಾನ ದುರಂತದಲ್ಲಿ 10 ಪ್ರಯಾಣಿಕರ ದುರ್ಮರಣ..!

ಖಾಸಗಿ ವಿಮಾನ ಪತನ ಆಗಿದ್ದರಿಂದ ಒಟ್ಟು 10 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ರಷ್ಯಾದ ಟಿವೆರ್ ಪ್ರಾಂತ್ಯದಲ್ಲಿ ಖಾಸಗಿ ಜೆಟ್‌ ಪತನಗೊಂಡಿದೆ. ಪ್ರಿಗೊಜಿನ್ ಇದ್ದ ವಿಮಾನ ಪತನದ ಹಿಂದೆ ಹತ್ತಾರು ಅನುಮಾನಗಳು ಶುರುವಾಗಿದೆ. ಮಾಸ್ಕೋನಿಂದ ಸೇಂಟ್​ ಪೀಟರ್ಸ್​ಬರ್ಗ್​ಗೆ ಹೋಗುವಾಗ ಈ ದುರಂತ ನಡೆದಿದೆ ಎಂದು ರಷ್ಯಾದ The Associated Press reports ಮಾಹಿತಿ ನೀಡಿದೆ. ವಿಮಾನ ನಭಕ್ಕೆ ಹಾರಿದ ಕೆಲವೇ ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡಿತು. ಈ ದುರಂತ ಗ್ರಾಮೀಣ ಪ್ರದೇಶದಲ್ಲಿ ನಡೆದಿದ್ದು, ರಷ್ಯಾ ಸರ್ಕಾರದ ಸ್ವಯಂಕೃತ ದುರಂತವೇ..? ಅನ್ನೋ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಪ್ರಿಗೊಜಿನ್ ವಿಮಾನದಲ್ಲೇ ಇರಲಿಲ್ಲ ಅನ್ನೋ ಶಂಕೆ..!

ವ್ಯಾಗ್ನರ್ ಖಾಸಗಿ ಸೇನಾಪಡೆ ಮುಖಸ್ಥ ಯೆವೆಗೆನ್ಸಿ ಪ್ರಿಗೊಜಿನ್ ಸಾವನ್ನಪ್ಪಿರುವ ಬಗ್ಗೆ ವರದಿ ಆಗುತ್ತಿರುವ ಜೊತೆ ಜೊತೆಗೆ ರಷ್ಯಾ ಮಾಧ್ಯಮಗಳು ಖಾಸಗಿ ಸೇನಾಪಡೆ ಮುಖಸ್ಥ ಪ್ರಿಗೊಜಿನ್ ವಿಮಾನದಲ್ಲಿ ಇರಲಿಲ್ಲ ಅನ್ನೋ ವರದಿಯೂ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಅಪಘಾತದ ವಿಡಿಯೋ ಹರಿದಾಡುತ್ತಿದ್ದು, ಅದರಲ್ಲಿ ಒಂದು ದೇಹ ಸುಟ್ಟುಹೋಗುತ್ತಿರುವ ದೃಶ್ಯ ಕಂಡು ಬರುತ್ತಿದೆ. plane number RA-02795 ಬುಧವಾರ ಸಂಜೆ 6:11ರ ವೇಳೆಗೆ ರಾಡಾರ್​ನಿಂದ ಸಂಪರ್ಕ ಕಳೆದುಕೊಂಡು ದುರಂತಕ್ಕೀಡಾಗಿದೆ. ರಷ್ಯಾದಲ್ಲಿ ಈ ಬಗ್ಗೆ ತತ್​ಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಸೇನಾಪಡೆ ಸೂಚನೆ ನೀಡಿದೆ. ಆದರೆ ಈ ದುರಂತಕ್ಕೆ ರಷ್ಯಾ ಮಾಡಿದ ತಂತ್ರವೇ ಕಾರಣ ಎನ್ನುವುದಾದರೆ ಆಂತರಿಕ ಯುದ್ಧ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗ್ತಿದೆ.

ಕೃಷ್ಣಮಣಿ

Tags: Aeroplaneflight crashPlaneprighozinRussia
Previous Post

ಶಿರಾ ನಗರದ ಅಭಿವೃದ್ಧಿಗೆ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಟಿಬಿ ಜಯಚಂದ್ರ

Next Post

ಚಂದ್ರಯಾನ – 3, ಯಶಸ್ವಿ ಆಯ್ತು.. ಇನ್ಮುಂದೆ ರಾಜಕೀಯ ಲಾಭ.. ನಷ್ಟದ ಲೆಕ್ಕ..!!

Related Posts

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್
Top Story

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

by ಪ್ರತಿಧ್ವನಿ
March 4, 2026
0

ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ನಂ.1 ಮಾಡುವುದು ಶಿವಕುಮಾರ್ ಅವರ ಕನಸು: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್.. ಮಾಗಡಿ : "ಮಾಗಡಿ ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದರು. ಬೆಂಗಳೂರು ದಕ್ಷಿಣ ಜಿಲ್ಲೆಗೆ...

Read moreDetails
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

March 4, 2026
ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

March 4, 2026
Next Post
ಚಂದ್ರಯಾನ – 3, ಯಶಸ್ವಿ ಆಯ್ತು.. ಇನ್ಮುಂದೆ ರಾಜಕೀಯ ಲಾಭ.. ನಷ್ಟದ ಲೆಕ್ಕ..!!

ಚಂದ್ರಯಾನ - 3, ಯಶಸ್ವಿ ಆಯ್ತು.. ಇನ್ಮುಂದೆ ರಾಜಕೀಯ ಲಾಭ.. ನಷ್ಟದ ಲೆಕ್ಕ..!!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada