ಬೆಂಗಳೂರು : ಭಾರತೀಯ ರೂಪಾಯಿ(Rupee)ತನ್ನ ಕುಸಿತವನ್ನು ಮುಂದುವರಿಸಿ, ಡಾಲರ್(dollar) ವಿರುದ್ಧ 90.43 ರ ಕನಿಷ್ಠ ಮಟ್ಟವನ್ನು ತಲುಪಿದೆ. ಈ ರೀತಿಯ ಕುಸಿತಕ್ಕೆ ಹಣಕಾಸು ತಜ್ಞರು ಬೇರೆ ಬೇರೆ ಆಯಾಮಗಳಲ್ಲಿ ವಿಶ್ಲೇಷಿಸುತ್ತಿದ್ದಾರೆ. ಭಾರತ-ಯುಎಸ್ ವ್ಯಾಪಾರ ಒಪ್ಪಂದದಲ್ಲಿನ ವಿಳಂಬ ಮತ್ತು ದೇಶೀಯ ಷೇರು ಮಾರುಕಟ್ಟೆಯಿಂದ ವಿದೇಶಿ ಬಂಡವಾಳ ಹೂಡಿಕೆದಾರರಿಂದ (ಎಫ್‌ಪಿಐ) ನಿರಂತರ ಹೊರಹರಿವು, ಹೂಡಿಕೆದಾರರಿಗೆ ಸಂಕಷ್ಟ ತಂದಿದೆ.

ಬೆಳಗಿನ ವಹಿವಾಟಿನ ಪ್ರಕಾರ, ಭಾರತೀಯ ಕರೆನ್ಸಿ 17 ಪೈಸೆ ಕುಸಿತ ಕಂಡು 99.36 ಕ್ಕೆ ವಹಿವಾಟು ಆರಂಭಿಸಿತು, ಇದು ಹಿಂದಿನ 99.19 ಕ್ಕೆ ಹೋಲಿಸಿದರೆ. ಅಂತಿಮವಾಗಿ ಅದು 90.43 ರಷ್ಟು ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ. ಎಫ್‌ಪಿಐಗಳಿಂದ ಸ್ಥಿರವಾದ ಹೊರಹರಿವು ಕರೆನ್ಸಿಯ ಮೇಲೆ ಒತ್ತಡ ಹೇರುವ ಪ್ರಮುಖ ಅಂಶವಾಗಿದೆ ಎಂದು ವಿಶ್ಲೇಷಕರು ನಂಬಿದ್ದಾರೆ.

ಈ ವರ್ಷ ಇಲ್ಲಿಯವರೆಗೆ, ಎಫ್‌ಪಿಐಗಳು 1.52 ಲಕ್ಷ ಕೋಟಿ ರೂ. ಷೇರುಗಳನ್ನು ಮಾರಾಟ ಮಾಡಿದ್ದಾರೆ. ಡಿಸೆಂಬರ್‌ನ ಮೊದಲ ಮೂರು ದಿನಗಳಲ್ಲಿ ಅವರು 8,369 ಕೋಟಿ ರೂಪಾಯಿ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಏತನ್ಮಧ್ಯೆ, ರೂಪಾಯಿಗೆ ತಕ್ಷಣದ ಬೆಂಬಲ 89.20 ರಷ್ಟಿದ್ದು, ನಂತರ 88.60 ರ ಬಳಿಕ ಮತ್ತೆ ಪುಟಿದೇಳುವ ಸಾಧ್ಯತೆಗಳಿವೆ. ಅಲ್ಲದೆ ಬುಧವಾರ ರೂಪಾಯಿ 90 ರ ಗಡಿ ದಾಟಿದ ರೀತಿಯು ಅದರ ಮೇಲಿನ ಒತ್ತಡ ಕಡಿಮೆಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ವಾಸ್ತವವಾಗಿ, ಈ ಒತ್ತಡವು ಸ್ವಲ್ಪ ದಿನಗಳ ಕಾಲ ಮುಂದುವರೆಯುವ ಸಾಧ್ಯತೆಯಿದೆ. ಈ ಜೋಡಿಯು ಶೀಘ್ರದಲ್ಲೇ 90.70–91.00 ವಲಯದ ಕಡೆಗೆ ಚಲಿಸುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರ ಮಾತಾಗಿದೆ.

ಆದರೆ ಇದೇ ವಿಚಾರಕ್ಕೆ ಕೇಂದ್ರ ಸರ್ಕಾರದ ಮೇಲೆ ವಿಪಕ್ಷಗಳು ಮುಗಿಬೀಳುತ್ತಿವೆ. ಕರೆನ್ಸಿಯ ಕುಸಿತವು ಸರ್ಕಾರದ ವಿಫಲ ಆರ್ಥಿಕ ನೀತಿಗಳು ಮತ್ತು ಹೆಚ್ಚುತ್ತಿರುವ ವಿದೇಶಿ ಅಪಾಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಮನೀಶ್ ತಿವಾರಿ ರೂಪಾಯಿ ಕುಸಿತದ ಬಗ್ಗೆ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿ ದಾಳಿ ಮಾಡಿದ್ದಾರೆ. ಹಿಂದಿನ ಕರೆನ್ಸಿ ದೌರ್ಬಲ್ಯ ಉಲ್ಲೇಖಿಸಿ ಯುಪಿಎ ಸರ್ಕಾರದ ಬಗ್ಗೆ ಬಿಜೆಪಿಯ ನಾಯಕರು ಆಡಿದ ಮಾತುಗಳಿಗೆ ಕೌಂಟರ್ ನೀಡಿದ್ದಾರೆ.

ಅಲ್ಲದೆ ವಿದೇಶಿ ಹೂಡಿಕೆದಾರರ ಮಾರಾಟ, ಬ್ರೆಂಟ್ ಕಚ್ಚಾ ತೈಲ ಮತ್ತು ಅಮೆರಿಕದ ಮಾರುಕಟ್ಟೆಯು ಭಾರತೀಯ ರಫ್ತುಗಳ ಮೇಲೆ ಹೆಚ್ಚು ಸುಂಕಗಳನ್ನು ವಿಧಿಸಿದ ನಂತರ ಪ್ರಸ್ತಾವಿತ ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಸುತ್ತಲಿನ ಅಸ್ಪಷ್ಟತೆಯೇ ತಕ್ಷಣದ ಪ್ರಚೋದನೆಯಾಗಿದೆ. ರೂಪಾಯಿ ಕುಸಿತವು “ನಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂದು ತೋರಿಸುತ್ತದೆ. ಮೋದಿ ಸರ್ಕಾರದಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತೀಯ ಕರೆನ್ಸಿಗೆ “ಯಾವುದೇ ಮೌಲ್ಯವಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರದ ನೀತಿಗಳು ರೂಪಾಯಿಯನ್ನು ದುರ್ಬಲಗೊಳಿಸಿವೆ. ಭಾರತದ ರೂಪಾಯಿಗಳು ಜಗತ್ತಿನಲ್ಲಿ ಯಾವುದೇ ಮೌಲ್ಯ ಹೊಂದಿಲ್ಲ ಎಂದು ದೂರಿದರು. ಇವರ ನೀತಿಗಳಿಂದಾಗಿ ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಅವರ ನೀತಿಗಳು ಉತ್ತಮವಾಗಿದ್ದರೆ, ರೂಪಾಯಿ ಮೌಲ್ಯ ಹೆಚ್ಚಾಗಬೇಕಿತ್ತು. ಇದು ನಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂಬುದನ್ನು ತೋರಿಸಿದೆ. ನಾವು ಏನು ಬೇಕಾದರೂ ಹೇಳಬಹುದು. ನಮ್ಮನ್ನು ನಾವು ಹೊಗಳಿಕೊಳ್ಳಬಹುದು, ಆದರೆ ಇದು ನಮ್ಮ ರೂಪಾಯಿ ಜಗತ್ತಿನಲ್ಲಿ ಯಾವುದೇ ಮೌಲ್ಯವಿಲ್ಲ ಎಂದು ತೋರಿಸುತ್ತಿದೆ ಎಂದು ಖರ್ಗೆ ಹರಿಹಾಯ್ದರು.












