ದೀಪಾವಳಿ ಹಬ್ಬದ ಪ್ರಯುಕ್ತ ಖಾಸಗಿ ಬಸ್‌ಗಳ ಸುಲಿಗೆ ಆರೋಪ ಹಿನ್ನೆಲೆ RTO ದಾಳಿ ನಡೆದಿದೆ. ಹಬ್ಬದ ಹಿನ್ನಲೆ ಜನರ ಓಡಾಟ ಹೆಚ್ಚಿದ್ದು, ಖಾಸಗಿ ಬಸ್‌ಗಳು ಟಿಕೆಟ್ ದರ ಹೆಚ್ಚಿಸಿರುವ ಕಾರಣ, ಆರ್ ಟಿ ಓ ಅಧಿಕಾರಿಗಳು ಹಾಗೂ ಹೆಚ್ಚುವರಿ ಆಯುಕ್ತರು ಧಿಡೀರ್ ಪರೀಶಿಲನೆ ನಡೆಸಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಫೀಲ್ಡ್ ಗಿಳಿದ ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ ನೇತೃತ್ವದ ತಂಡ, ಆನಂದ್ ರಾವ್ ವೃತ್ತದ ಬಳಿ ಬಸ್‌ಗಳನ್ನ ಚೆಕ್ ಮಾಡಿದ್ದಾರೆ. ಪ್ರಯಾಣಿಕರಿಗೆ ಹೊರೆಯಾಗುವಂತೆ ಟಿಕೆಟ್ ದರ ಹೆಚ್ಚಿಸುವಂತಿಲ್ಲ ಎಂದು ಸಾರಿಗೆ ಇಲಾಖೆ ಹೇಳಿದೆ. ಎಚ್ಚರಿಕೆ ನಡುವೆಯೂ ಟಿಕೆಟ್ ದರ ಹೆಚ್ಚಿಸಿದ್ದ ಖಾಸಗಿ ಬಸ್‌ಗೆ ನೋಟಿಸ್ ನೀಡಲಾಗಿದೆ.
ಹೀಗಾಗಿ ಟಿಕೆಟ್ ದರ ಹೆಚ್ಚಿಸಿರುವ ಬಸ್ ಗಳ ಚಾಲಕನ ಮಾಹಿತಿ, ಲೈಸನ್ಸ್, FC ಸೇರಿದಂತೆ ಹಲವು ಮಾಹಿತಿ ಪಡೆದುಕೊಂಡು ಚೆಕ್ ರಿಪೋರ್ಟ್ ನೀಡಿರುವ ಅಧಿಕಾರಿಗಳು, ಎಷ್ಟು ಜನ ಪ್ರಯಾಣಿಕರು ಹಾಗೂ ಟಿಕೆಟ್ ದರ ಎಷ್ಟು ಎಂಬ ವಿವರಗಳನ್ನು ಉಲ್ಲೇಖಿಸಿದ್ದಾರೆ.