RTI ಕಾರ್ಯಕರ್ತ ಹರೀಶ್ ಹಳ್ಳಿ ನಿಗೂಢವಾಗಿ ಮೃತ ಪಟ್ಟಿದ್ದಾನೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದ RTI ಕಾರ್ಯಕರ್ತ (38) ಹರೀಶ್ ಹಳ್ಳಿ ಸಾವು. ಪ್ರಕರಣವೊಂದರಲ್ಲಿ ವಿಚಾರಣೆಗೆ ಹರೀಶ್ ಹಳ್ಳಿಯನ್ನ ಕರೆ ತರುತಿದ್ದ ದಾವಣಗೆರೆ ಪೊಲೀಸರು. ಈ ವೇಳೆ ಪರಾರಿಯಾಗಲು ಕಾರಿನಿಂದ ಜಿಗಿದು ಸಾವನ್ನಪ್ಪಿದ್ದಾರೆ ಅಂತ ಕುಟುಂಬಸ್ಥರಿಗೆ ಮಾಹಿತಿ. ದಾವಣಗೆರೆ ತೋಳಹುಣಸೆ ಬ್ರೀಡ್ಜ್ ಮೇಲಿಂದ ಬಿದ್ದು ಸಾವು. ಪೊಲೀಸರ ಮೇಲೆ ಅನುಮಾನ ವ್ಯಕ್ತಪಡಿಸುತ್ತಿರುವ ಕುಟುಂಬಸ್ಥರು.

ಪೊಲೀಸರೆ ಕೊಲೆ ಮಾಡಿದ್ದಾರೆ ಅಂತ ಕುಟುಂಬಸ್ಥರ ಆರೋಪ. ಜಿಲ್ಲೆಯಲ್ಲಿ ಸಾಕಷ್ಟು ಜನರ ವಿರೋಧ ಎದುರಿಸುತಿದ್ದ ಹರೀಶ್ ಹಳ್ಳಿ. RTI ಕಾರ್ಯಕರ್ತ ನಿಗೂಢವಾಗಿ ಮೃತಪಟ್ಟಿರುವುದಕ್ಕೆ ಪೊಲೀಸರ ಮೇಲೆ ಅನುಮಾನ ವ್ಯಕ್ತವಾಗುತ್ತಿದೆ . ರಾತ್ರಿ 12ಗಂಟೆಗೆ ವಿಚಾರಣೆಗೆ ಕರೆ ತರುವಾಗ ಘಟನೆ. ಸೈಟ್ ವಿಚಾರದಲ್ಲಿ ಹರೀಶ್ ಹಳ್ಳಿ ಮೇಲೆ ಕೇಸ್ ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ಅವರನ್ನ ವಿಚಾರಣೆಗೆ ಕರೆ ತರುತಿದ್ದ ಪೊಲೀಸರು. ಈ ವೇಳೆ ಹರೀಶ್ ಹಳ್ಳಿ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾನೆ.












