
ನಟಿ ರನ್ಯಾರಾವ್ ಪ್ರಕರಣದ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಫಸ್ಟ್ ರಿಯಾಕ್ಷನ್ ಮಾಡಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದಲ್ಲಿ ಇಲ್ಲೀವರೆಗೂ ಏನ್ ಬಂದಿದ್ಯೋ ನಾನು ಅದನ್ನು ನೋಡಿದ್ದೇನೆ. ತಾವೆಲ್ಲರು ತೋರಿಸಿದ್ದೀರಾ..? ಮಾನ್ಯ ಹೋಮ್ ಮಿನಿಸ್ಟರ್ ಸಹ ಇದಕ್ಕೆ ರಿಪ್ಲೈ ಮಾಡಿದ್ದಾರೆ. ತನಿಖೆ ನಡೆಯುತ್ತಾ ಇದೆ, ತನಿಖೆ ಆದ ಮೇಲೆ ಯಾರು ಎಷ್ಟೇ ಪ್ರಭಾವಿ ಇದ್ರು ಮುಚ್ಚಿಡಲು ಸಾಧ್ಯವಿಲ್ಲ ಎಂದಿದ್ದಾರೆ.
ಕಾನೂನು ರೀತಿ ಏನ್ ಕ್ರಮ ಆಗಬೇಕೋ ಅದು ಆಗೇ ಆಗುತ್ತದೆ. ಸಚಿವರ ಹೆಸ್ರು ಯಾಕೆ ಬರ್ತಾ ಇದೆ ಅನ್ನೋದರ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಮಾಹಿತಿ ಇರೋರನ್ನು ಕೇಳಿದ್ರೆ ಅವರಿಗೆ ಗೊತ್ತಿರುತ್ತದೆ. ನೀವು ಮಾಧ್ಯಮದಲ್ಲಿ ಏನ್ ತೋರುಸ್ತಾ ಇದ್ದೀರೊ ಅದನ್ನು ನಾನು ನೋಡಿದ್ದೇನೆ ಅಷ್ಟೇ.
ಗ್ಯಾರಟಿ ಅನುಷ್ಠಾನಕ್ಕೆ ಕಾರ್ಯಕರ್ತರ ನೇಮಕ ವಿಚಾರವಾಗಿ ಬಿಜೆಪಿ ನಾಯಕರು ರಾಜ್ಯಪಾಲರ ಭೇಟಿ ವಿಚಾರಕ್ಕೆ ಮಾತನಾಡಿ, ಬಿಜೆಪಿ ಅವ್ರಿಗೆ ಮಾಡೋದಕ್ಕೆ ಕೆಲಸ ಇಲ್ಲ. ಮೊದಲು ಗ್ಯಾರಂಟಿ ನಡೆಯೋದಿಲ್ಲ ಅಂತ ಹೇಳಿದ್ರು. ಅದನ್ನು ನಡೆಸಿದ್ವಿ, ಇವಾಗ ಗ್ಯಾರಂಟಿ ಸಮಿತಿ ಬಗ್ಗೆ ಮಾತನಾಡ್ತಾ ಇದ್ದಾರೆ. ಒಂದೂವರೆ ವರ್ಷ ಆಯ್ತು ಗ್ಯಾರಂಟಿ ಸಮಿತಿ ಮಾಡಿ, ಇಷ್ಟು ದಿನ ಏನು ಕಣ್ಮುಚ್ಚಿ ಕೋತ್ಕೊಂಡಿದ್ರಾ..? ಏನ್ ನಿದ್ದೆ ಮಾಡ್ತಾ ಇದ್ರಾ..? ಎಂದು ಪ್ರಶ್ನಿಸಿದ್ದಾರೆ.

ಅನುಷ್ಠಾನ ಸಮಿತಿಯಾಗಿ ಮೂರು ಸದನ ಆಯ್ತು. ಇದು ಮೂರನೇ ಸದನ, ಇವತ್ತು ಅವರಿಗೆ ಜ್ಞಾನೋದಯ ಆಗಿದ್ಯಾ..? ಸುಮ್ನೆ ಒಂದು ಪಿಳ್ಳೆ ನೆವ ಬೇಕು. ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ ಅದರ ಮೇಲೆ ಚರ್ಚೆ ಆಗಬೇಕು. ಬಜೆಟ್ನಲ್ಲಿ ಯಾವ ಯಾವ ಪ್ರಾಂತ್ಯಗಳಿಗೆ ಅನ್ಯಾಯ ಆಗಿದೆ ಅದರ ಮೇಲೆ ಚರ್ಚೆ ಆಗಬೇಕಿದೆ. ಇದನ್ನೆಲ್ಲ ಬಿಟ್ಟು ರಾಜ್ಯದ ಜನರ ದಿಕ್ಕನ್ನು ಬದಲಾಯಿಸೋದಕ್ಕೆ ಗ್ಯಾರಂಟಿ ಯೋಜನೆ ಬಗ್ಗೆ ಹೇಳ್ತಾರೆ.
ಮಹಾರಾಷ್ಟ್ರದಲ್ಲಿ ಲಾಂಡ್ಲೀ ಬೆಹನ ಘೊಷಣೆ ಮಾಡಿದ್ರು. ಎಲೆಕ್ಷನ್ಗೂ ಮುಂಚೆ ₹2,100 ರೂಪಾಯಿ ಎರಡು ತಿಂಗಳು ನೀಡಿದ್ರು. ಇವಾಗ ಬಂದ್ ಮಾಡಿ ಬಿಟ್ಟಿದ್ದಾರೆ. ಮಹಾರಾಷ್ಟ್ರ ಸಚಿವರುಗಳ ನಾಮ.. ನಾಲ್ಕು ಜನ ಆರ್ಎಸ್ಎಸ್ ಕಾರ್ಯಕರ್ತರನ್ನು ಪಿಎ ಎಂದು ತಗೊಂಡಿದ್ದಾರೆ. ಅವರಿಗೇನು ಬಿಜೆಪಿ ಪಗಾರ್ ಕೊಡ್ತಾ ಇದ್ಯಾ? ಮಹಾರಾಷ್ಟ್ರ ಸರ್ಕಾರ ಪೇಮೆಂಟ್ ಮಾಡ್ತಾ ಇದೆ ಎಂದು ಟೀಕಿಸಿದ್ದಾರೆ.

ಕೆಎಎಸ್ ಅಧಿಕಾರಿಗಳು ತೆಗೆದುಕೊಳ್ಳುವಷ್ಟು ಸಂಬಳ ಆರ್ ಎಸ್ ಎಸ್ ಕಾರ್ಯಕರ್ತರು ತಕೊಳ್ತಾ ಇದ್ದಾರೆ. ಎಲ್ಲಿ ಬಿಜೆಪಿ ಇದ್ಯೋ ಅಲ್ಲಿ ಇವೆಲ್ಲವೂ ಚೆನ್ನಾಗಿ ಕಾಣುತ್ತದೆ. ಕಾಂಗ್ರೆಸ್ ಸರ್ಕಾರ ಇರುವ ಕಡೆ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ತಾ ಇದ್ದಾರೆ ಎಂದು ದೂರಿದ್ದಾರೆ.
ಬೆಳಗಾವಿ ಪಹಣಿಯಲ್ಲಿ ಮರಾಠಿ ಕೈ ಬರಹ ವಿಚಾರವಾಗಿ ಮಾತನಾಡಿ, ನನಗೆ ಆ ಬಗ್ಗೆ ಮಾಹಿತಿ ಇಲ್ಲ. ಯಾಕಂದ್ರೆ ಇಲ್ಲಿಯವರೆಗು ಕನ್ನಡದಲ್ಲೇ ಪಹಣಿ ನೀಡ್ತಾ ಇದ್ರು, ಅದು ನನಗೆ ಗೊತ್ತು. ಮರಾಠಿ ಪಹಣಿ ಆಗಿರೋ ಬಗ್ಗೆ ನನಗೆ ಮಾಹಿತಿ ಇಲ್ಲ. ಇದು ಬಹಳಷ್ಟು ಸೂಕ್ಷ್ಮ ವಿಚಾರ.. ಗೊತ್ತಿಲ್ಲದೆ ರಿಯಾಕ್ಟ್ ಮಾಡಿದ್ರೆ ಅದು ತಪ್ಪಾಗುತ್ತದೆ. ಯಾಕಂದ್ರೆ ಬೆಳಗಾವಿ ಅಲ್ಲಿ ಏನೇ ಗಲಾಟೆ ಆದ್ರು ಸಹ ಅದು ಲಕ್ಷ್ಮೀ ಹೆಬ್ಬಾಳ್ಕರ್ ಅಂತ ಬಿಂಬಿತವಾಗ್ತಿದೆ ಎಂದಿದ್ದಾರೆ
