ದೇವರನಾಡು ಕೇರಳದಲ್ಲಿ ಹಾಡಹಗಲೇ ಆರ್ ಎಸ್ ಎಸ್ ಕಾರ್ಯಕರ್ತನೋರ್ವನನ್ನು ದುಷ್ಕರ್ಮಿಗಳು ಕೊಚ್ಚಿ ಹಾಕಿದ್ದಾರೆ.
ಶ್ರೀನಿವಾಸನ್ (45) ಮೃತ ದುರ್ದೈವಿ. ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಪಾಲಕ್ಕಾಡ್ ಪಟ್ಟಣದಲ್ಲಿರುವ ಶ್ರೀನಿವಾಸನ್ ಅವರ ಅಂಗಡಿಗೆ ನುಗ್ಗಿ ಅವರ ಕೊಲೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರು ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ(PFI) ಮುಖಂಡನ ಹತ್ಯೆಯಾಗಿ 24 ಘಂಟೆಗಳ ಬಳಿಕ ಈ ಹತ್ಯೆ ನಡೆದಿದೆ ಎಂದು ವರದಿಯಾಗಿದೆ. ಶುಕ್ರವಾರ ಮಧ್ಯಾಹ್ನ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಮನೆಗೆ ಹಿಂತಿರುಗುತ್ತಿದ್ದ ಸುಬೈರ್ (43) ಅಂಬಾತನನ್ನು ಹತ್ಯೆ ಮಾಡಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಕೇರಳ ಬಿಜೆಪಿ ಘಟಕ ಶ್ರೀನಿವಾಸನ್ ಹತ್ಯೆ ಹಿಂದೆ PFIನ ರಾಜಕೀಯ ಶಾಖೆಯಾದ SDPI ಕೈವಾಡವಿದೆ ಎಂದು ಆರೋಪಿಸಿದೆ.