ಬಿಜೆಪಿಯಿಂದ (Bjp) ಧರ್ಮಸ್ಥಳ ಚಲೋ (Dharmasthala case) ವಿಚಾರಕ್ಕೆ ಸಂಬಂಧಪಟ್ಟಂತೆ ನವದೆಹಲಿಯಲ್ಲಿ ಬಿಕೆ ಹರಿಪ್ರಸಾದ್ (BK Hariprasad) ಮಾತನಾಡಿದ್ದಾರೆ. ಘಟ್ಟದ ಮೇಲೆ ಮತ್ತು ಕೆಳಗೆ ಇರುವ ಆರ್.ಎಸ್.ಎಸ್ (RSS) ನಾಯಕರಿಂದ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಬಂದಿದೆ. ಸಂಘದ ಇಬ್ಬರು ಪ್ರಮುಖ ನಾಯಕರಿಂದ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಬರ್ತಿದೆ ಎಂದಿದ್ದಾರೆ.

ಧರ್ಮಸ್ಥಳದ ವಿಚಾರದಲ್ಲಿ ಈ ಹಿಂದೆ ನಳೀನ್ ಕುಮಾರ್ ಕಟೀಲ್ ಹಾಗೂ ಶಾಸಕ ಸುನೀಲ್ ಕುಮಾರ್ ಹೇಳಿಕೆಗಳನ್ನು ನೋಡಿ. ಸೌಜನ್ಯ ಪ್ರಕರಣದಲ್ಲಿ ತನಿಖೆ ಆಗಬೇಕೆಂದು ಧರ್ಮಸ್ಥಳಕ್ಕೆ ಹೋಗಿ ಭಾಷಣ ಮಾಡಿದ್ರು. ಎಸ್ ಐಟಿ ಮಾಡಬೇಕು ಅಂತಾ ಹೇಳಿದ್ದು ಬಿಜೆಪಿಯವರೇ..ಎಸ್ ಐಟಿ ಧರ್ಮಸ್ಥಳ ದೇವಾಲಯ ಅಥವಾ ದೇವಾಲಯದವರನ್ನ ತನಿಖೆ ಮಾಡ್ತಿಲ್ಲ ಎಂದಿದ್ದಾರೆ.

ಯಾರು ಯಾರು ಧರ್ಮಸ್ಥಳದ ಬಗ್ಗೆ ಹೇಳಿಕೆ ನೀಡಿದ್ದಾರೋ..ಈ ಮಾಸ್ಕಮ್ಯಾನ್..ಸಮೀರ್ ಸೇರಿದಂತೆ ಹಲವರ ಬಗ್ಗೆ ಎಸ್.ಐ.ಟಿ ತನಿಖೆ ಮಾಡ್ತಿದೆ.ರಾಮಾಯಣ ಕಾಲದಲ್ಲಿ ಸೀತೆಯನ್ನ ಪರೀಕ್ಷಿಸಲಾಯಿತು.ಹೀಗಾಗಿ ಜನರು ಅರ್ಥ ಮಾಡಿಕೊಳ್ಳಬೇಕು, ಇಲ್ಲಿ ಹೇಳಿಕೆ ನೀಡಿರುವವರನ್ನ ಮಾತ್ರ ತನಿಖೆ ಮಾಡ್ತಿದ್ದಾರೆ ಎಂದಿದ್ದಾರೆ.

ಧಾರ್ಮಿಕ ವಿಚಾರದಲ್ಲಿ ರಾಜಕೀಯ ಮಾಡಲು ಬಿಜೆಪಿ ಶತಪ್ರಯತ್ನ ಮಾಡ್ತಿದೆ.ಆರ್.ಎಸ್.ಎಸ್ ಹಾಗೂ ಗಟ್ಟದ ಮೇಲೆ ಇರುವವರ ಗುಂಪಿನಿಂದ ಧರ್ಮಸ್ಥಳಕ್ಕೆ ಅಪಪ್ರಚಾರವಾಗಿದೆ. ಸಂಘದ ಇಬ್ಬರು ಪ್ರಮುಖ ನಾಯಕರಿಂದ ಧರ್ಮಸ್ಥಳ ಹೆಸರು ಹಾಳಾಗ್ತಿದೆ ಎಂದಿದ್ದಾರೆ.











