ಮಥುರಾ (ಉತ್ತರ ಪ್ರದೇಶ): ಕೃಷ್ಣ ಜನ್ಮಭೂಮಿ ದೇವಸ್ಥಾನದ ಸಂಕೀರ್ಣದಿಂದ ಮಸೀದಿಯನ್ನು ತೆಗೆದುಹಾಕುವಂತೆ ಕೋರಿ 18 ಹಿಂದೂಗಳು ದಾಖಳಿಸಿದ್ದ ಮೊಕದ್ದಮೆಗಳ ನಿರ್ವಹಣೆಯನ್ನು ಪ್ರಶ್ನಿಸಿ ಮುಸ್ಲಿಂ ಕಡೆಯವರು ಸಲ್ಲಿಸಿದ್ದ ಮನವಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದ ಮರುದಿನ, ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ ಸಮಿತಿಯು ಮುಸ್ಲಿಂರಿಗೆ ನ್ಯಾಯಾಲಯದ ಹೊರಗೆ ವಿಷಯವನ್ನು ಇತ್ಯರ್ಥಪಡಿಸಿ, ಹರಿಯಾಣದಲ್ಲಿ ಪರ್ಯಾಯ ಮಸೀದಿಗಾಗಿ 10 ಎಕರೆ ಭೂಮಿ ಮತ್ತು 10 ಕೋಟಿ ರೂ ನೀಡುವುದಾಗಿ ಆಫರ್ ಕೊಟ್ಟಿದೆ.
ಅಲಹಾಬಾದ್ ಹೈಕೋರ್ಟಿನ ನ್ಯಾಯಮೂರ್ತಿ ಮಯಾಂಕ್ ಜೈನ್ ಅವರ ಪೀಠವು ಗುರುವಾರ ಆರ್ಡರ್ 7 ನಿಯಮ 11 ಸಿಪಿಸಿ ಅಡಿಯಲ್ಲಿ ಸಲ್ಲಿಸಿದ ಶಾಹಿ ಈದ್ಗಾ ಮಸೀದಿ ಸಮಿತಿಯ ಮನವಿಯನ್ನು ವಜಾಗೊಳಿಸಿದ್ದು, ದೇವಾಲಯ ಸಂಕೀರ್ಣದಿಂದ ಮಸೀದಿಯನ್ನು ತೆಗೆದುಹಾಕಲು ಕೋರಿ ದೇವತಾ ಮತ್ತು ಹಿಂದೂ ಆರಾಧಕರು ಸಲ್ಲಿಸಿದ 18 ಮೊಕದ್ದಮೆಗಳ ಕಾನೂನುಬದ್ದತೆ ಪ್ರಶ್ನಿಸಲಾಗಿತ್ತು. ಈ ಕ್ರಮವು ಪ್ರಕರಣದ ವಿಚಾರಣೆಗೆ ದಾರಿ ಸುಗಮ ಮಾಡಿಕೊಟ್ಟಿದ್ದು, ಮುಂದಿನ ವಿಚಾರಣೆಯನ್ನು ಆಗಸ್ಟ್ 12 ರಂದು ನಿಗದಿಪಡಿಸಲಾಗಿದೆ.
ಹಿಂದೂಗಳ ಪರವಾದ ನಿರ್ಧಾರದ ನಂತರ, ಮಸೀದಿ ವಿವಾದದ ವಿಷಯವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಗೊಳಿಸಬೇಕು ಎಂದು ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ್ ಅಧ್ಯಕ್ಷ ದಿನೇಶ್ ಶರ್ಮಾ ಮುಸ್ಲಿಂ ಪರವಾಗಿ ಪ್ರಸ್ತಾಪಿಸಿದ್ದಾರೆ. ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ್ ಮಸೀದಿ ನಿರ್ಮಿಸಲು ಹರಿಯಾಣದ ಮೇವಾತ್ ಪ್ರದೇಶದಲ್ಲಿ 10 ಎಕರೆ ಭೂಮಿ ಮತ್ತು 10 ಕೋಟಿ ರೂ ನೀಡಲಿದೆ ಎಂದು ಶರ್ಮಾ ಹೇಳಿದರು.
ನ್ಯಾಯಾಲಯದ ತೀರ್ಪನ್ನು ಹಿಂದೂ ಕಕ್ಷಿದಾರರು ಐತಿಹಾಸಿಕ ಎಂದು ಕರೆದಿದೆ. ಮುಸ್ಲಿಂ ಸಂಘಟನೆಗಳು “ಮೊಘಲ್ ಆಡಳಿತಗಾರರು ಮಾಡಿದ ತಪ್ಪುಗಳನ್ನು ಸರಿಪಡಿಸಲು ಬಯಸುತ್ತವೆ” ಎಂದು ಶರ್ಮಾ ಹೇಳಿದ್ದಾರೆ. “ಮುಸ್ಲಿಂ ಕಡೆಯವರು ಈದ್ಗಾ ಸಮಿತಿಯ ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಮುಸ್ಲಿಂ ಕಡೆಯವರು ಕೂಡ ನ್ಯಾಯಾಲಯದ ಹೊರಗೆ ಇತ್ಯರ್ಥವಾಗಬೇಕು ಎಂದು ಬಯಸುತ್ತಾರೆ,” ಎಂದು ಅವರು ಹೇಳಿದರು. “ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ್ ಮಸೀದಿಯನ್ನು ಮೇವಾತ್‌ಗೆ ಸ್ಥಳಾಂತರಿಸಲು ಪ್ರಸ್ತಾಪಿಸಿದ್ದಾರೆ. ಮಸೀದಿ ನಿರ್ಮಾಣಕ್ಕೆ 10 ಎಕರೆ ಜಾಗ ಹಾಗೂ 10 ಕೋಟಿ ನೀಡುತ್ತೇವೆ.
ಬ್ರಿಜ್ ಭೂಮಿಯಲ್ಲಿರುವ ಈ ಭೂಮಿಯಲ್ಲಿ ಭಗವಾನ್ ಕೃಷ್ಣನ ಭವ್ಯವಾದ ದೇವಾಲಯವನ್ನು ನಿರ್ಮಿಸಲಾಗುವುದು, ಈ ಒಪ್ಪಂದದ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಶರ್ಮಾ ಹೇಳಿದರು.