ಹೋರಾಟ ನಿರತ ರೈತರನ್ನು ಖಲಿಸ್ತಾನಿಗಳು, ದೇಶದ್ರೋಹಿಗಳು ಎಂದು ಬಿಂಬಿಸಿದ ದೇಶದ ಮುಖ್ಯವಾಹಿನಿ ಮಾಧ್ಯಮಗಳು ಪೊಲೀಸರ ವಿಷಯದಲ್ಲಿ ಮಾತ್ರ ಜಾಣತನದ ನಡೆಯನ್ನು ತೋರಿವೆ. ಪೊಲೀಸರು ಅಮಾನವೀಯತೆ ಪ್ರದರ್ಶನದ ಬಗ್ಗೆ ಅಷ್ಟಾಗಿ ಎಲ್ಲೂ ಸುದ್ದಿಯಾಗುತ್ತಿಲ್ಲ.
ಮುಸ್ಲಿಮರು ಮತ್ತು ಸಿಖ್ಖರನ್ನು ಎಲ್‌ಟಿಟಿಇ ಮತ್ತು ಜೆಕೆಎಲ್‌ಎಫ್‌ನೊಂದಿಗೆ ತಳುಕು ಹಾಕುವ ಆದೇಶದ ನಂತರ ಮಧ್ಯಪ್ರದೇಶದ ಪೊಲೀಸರು ‘ಇದು ಮುದ್ರಣದೋಷ’ ಎಂದು ಪ್ಯಾ ಪ್ಯಾ ಎನ್ನುತ್ತಿದ್ದಾರೆ.
ಸಿಖ್ ಮತ್ತು ಮುಸ್ಲಿಂ ಪದಗಳ ನಂತರ ‘ಆತಂಕವಾದಿ’ ಎಂದು ಟೈಪ್ ಮಾಡುವುದನ್ನು ಗುಮಾಸ್ತ ಮರೆತಿದ್ದಾನೆ ಎಂದು ಕಟ್ನಿ ವಿಭಾಗದ ಎಸ್ಪಿ ಹೇಳಿದ್ದಾರೆ. ಡಿಸೆಂಬರ್ 7 ರಂದು ರಾಜ್ಯಪಾಲ ಮಂಗುಭಾಯ್ ಸಿ. ಪಟೇಲ್ ಜಿಲ್ಲೆಗೆ ಭೇಟಿ ನೀಡುವ ಮುನ್ನ ಈ ಆದೇಶವನ್ನ ಹೊರಡಿಸಲಾಗಿದೆ.
ಮಧ್ಯಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಸಹಿ ಮಾಡಿರುವ ವಿಐಪಿ-ಭದ್ರತೆ ಸಂಬಂಧಿತ ಆದೇಶವು ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್), ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಉಗ್ರಗಾಮಿಗಳು ಮತ್ತು ನಿಷೇಧಿತ ಸಂಘಟನೆಗಳ ಮುಸ್ಲಿಮರು ಮತ್ತು ಸಿಖ್ಖರನ್ನು ಪಟ್ಟಿ ಮಾಡಲು ಬಳಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ.
ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ULFA) ಮತ್ತು ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI) ಸಾಂಘಟನೆಗಳ ಜೊತೆ ಅಲ್ಪಸಂಖ್ಯಾತರನ್ನು ತಳುಕು ಹಾಕಲಾಗಿದೆ.
ಡಿಸೆಂಬರ್ 7 ರಂದು ಮಧ್ಯಪ್ರದೇಶದ ರಾಜ್ಯಪಾಲ ಮಂಗುಭಾಯ್ ಸಿ. ಪಟೇಲ್ ಜಿಲ್ಲೆಗೆ ಭೇಟಿ ನೀಡುವ ಮುನ್ನ ಕಟ್ನಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸುನಿಲ್ ಕುಮಾರ್ ಜೈನ್ ಸಹಿ ಮಾಡಿದ ಎರಡು ಪುಟಗಳ ಆದೇಶವನ್ನು ಹೊರಡಿಸಲಾಗಿದೆ. ಲಿಖಿತ ಆದೇಶದ ಆರನೇ ಅಂಶವು “ಸಿಖ್, ಮುಸಲ್ಮಾನ್, JKLF, ULFA, SIMI, LTTE aatankwadi (ಭಯೋತ್ಪಾದಕರು)” ಮೇಲೆ ಕಟ್ಟುನಿಟ್ಟಾದ ನಿಗಾ ಇರಿಸಲು ಭದ್ರತಾ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗೆ ಸೂಚಿಸಿದೆ ಎಂದು ಹೇಳುತ್ತದೆ.
“ಸಿಖ್, ಮುಸಲ್ಮಾನ್, ಜೆಕೆಎಲ್‌ಎಫ್, ಉಲ್ಫಾ, ಸಿಮಿ, ಎಲ್‌ಟಿಟಿಇ ಆತಂಕ್‌ವಾದಿ ಪರ್ ಸಖ್ತ್ ನಜರ್ ರಖಿ ಜಾಯೆ” ಎಂದು ಪೊಲೀಸ್ ಆದೇಶದಲ್ಲಿ ತಿಳಿಸಲಾಗಿದೆ.
The Print ನೊಂದಿಗೆ ಮಾತನಾಡಿದ ಎಸ್‌ಪಿ ಜೈನ್ ಇದನ್ನು “ಟೈಪಿಂಗ್ ದೋಷ” ಎಂದು ಕರೆದಿದ್ದಾರೆ ಮತ್ತು “ಎರಡೂ ಸಮುದಾಯಗಳ ಜನರ ಭಾವನೆಗಳು ನೋಯಿಸುವ ಉದ್ದೇಶವನ್ನು ಯಾರೂ ಹೊಂದಿಲ್ಲ” ಎಂದು ಹೇಳಿದ್ದಾರೆ.

“ಗುಮಾಸ್ತರು ಟೈಪ್ ಮಾಡುವಾಗ ದೋಷವನ್ನು ಮಾಡಿದ್ದಾರೆ. ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾವು ಕ್ಷಮೆ ಯಾಚಿಸುತ್ತೇವೆ. ನಾನು ಕ್ಲರ್ಕ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದೇನೆ, ಆದರೆ ಅದಕ್ಕಾಗಿ ಅವರನ್ನು ಅಮಾನತು ಮಾಡದಿರಲು ನಿರ್ಧರಿಸಿದ್ದೇನೆʼ ಎಂದು ಎಸ್‌ಪಿ ಹೇಳಿದ್ದಾರೆ..
ಆದೇಶದಲ್ಲಿ ಎಲ್‌ಟಿಟಿಇ, ಜೆಕೆಎಲ್‌ಎಫ್ ಮತ್ತು ಉಲ್ಫಾವನ್ನು ಉಲ್ಲೇಖಿಸಿದ ಬಗ್ಗೆ ಕೇಳಿದಾಗ, ಎಸ್‌ಪಿ ಅವರು “ಎಲ್ಲಾ ಟ್ರ್ಯಾಕ್‌ಗಳನ್ನು ಕವರ್ ಮಾಡಲು” ಬಯಸುವುದಾಗಿ ಹೇಳಿದ್ದಾರೆ..
ಎಲ್‌ಟಿಟಿಇ ಶ್ರೀಲಂಕಾದ ತಮಿಳು ಪ್ರತ್ಯೇಕತಾವಾದಿ ಸಂಘಟನೆಯಾಗಿದ್ದು, ಜೆಕೆಎಲ್‌ಎಫ್ ಕಾಶ್ಮೀರಿ ಉಗ್ರಗಾಮಿ ಸಂಘಟನೆ ಮತ್ತು ಉಲ್ಫಾ ಅಸ್ಸಾಂ ಮೂಲದ ಪ್ರತ್ಯೇಕತಾವಾದಿ ಸಂಘಟನೆಯಾಗಿದೆ.
ಮೂಲತಃ ಏನು ಬರೆಯಲು ಉದ್ದೇಶಿಸಲಾಗಿತ್ತು ಎಂದು ಎಸ್ಪಿ ಜೈನ್ ಅವರನ್ನು ಕೇಳಿದಾಗ, “ಗುಮಾಸ್ತರು ನಡುವೆ ಒಂದು ಪದವನ್ನು ಬರೆಯಲು ಮರೆತಿದ್ದಾರೆ. ಅವರು ಸಿಖ್ ಮತ್ತು ಮುಸ್ಲಿಮರು ಎಂದು ಬರೆದ ನಂತರ ಆತಂಕ್‌ವಾದಿ (ಭಯೋತ್ಪಾದಕ) ಬರೆಯಬೇಕಾಗಿತ್ತು.
“ಖಾಲಿಸ್ತಾನ್ ಪರ ಸಂಘಟನೆಗಳಂತೆ ಸಿಖ್ ಮತ್ತು ಮುಸ್ಲಿಂ ಉಗ್ರಗಾಮಿ ಸಂಘಟನೆಗಳ ಮೇಲೆ ಕಟ್ಟುನಿಟ್ಟಿನ ಕಣ್ಣು ಇಡಬೇಕು ಎಂದು ನಾವು ಉಲ್ಲೇಖಿಸಲು ಬಯಸಿದ್ದೇವೆ. ಪದ ತಪ್ಪಿಹೋಗಿದೆ, ಆದ್ದರಿಂದ ನಾವು ಸಮುದಾಯಗಳನ್ನು ಭಯೋತ್ಪಾದಕ ಸಂಘಟನೆಗಳೊಂದಿಗೆ ಸೇರಿಸಿಕೊಂಡಂತೆ ತೋರುತ್ತಿದೆʼ ಎಂದು ಎಸ್ಪಿ ಜೈನ್ ತಪ್ಪು ಒಪ್ಪಿಕೊಂಡಿದ್ದಾರೆ.
ರಾಜ್ಯಪಾಲರ ಭೇಟಿಗೆ ಮುನ್ನ ಭಯೋತ್ಪಾದಕರ ಬಗ್ಗೆ ಗಮನ ಹರಿಸುವಂತೆ ನಾವು ಎಲ್ಲರಿಗೂ ಎಚ್ಚರಿಕೆ ನೀಡಲು ಬಯಸಿದ್ದೇವೆ ಎಂದು ಆ ಅಧಿಕಾರಿ ಹೇಳಿದ್ದಾರೆ.
ಟ್ವಿಟರ್‌ನಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದ ಕಾಂಗ್ರೆಸ್ನ ಹಿರಿಯ ನಾಯಕ ಮತ್ತು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೆ. ಮಿಶ್ರಾ, “ವಾವ್, ಎಸ್,ಪಿ ಸಾಬ್, ಧನ್ಯವಾದಗಳು. ಇದುವರೆಗೂ ಬಿಜೆಪಿಯವರು ದೇಶದ ರೈತರು ಮತ್ತು ಮುಸ್ಲಿಮರನ್ನು ಭಯೋತ್ಪಾದಕರು ಎಂದು ಪರಿಗಣಿಸುತ್ತಿದ್ದರು. ಖಂಡಿತ, ಸರ್ಕಾರವು ನಿಮ್ಮನ್ನು ಶಿಕ್ಷಿಸುವುದಿಲ್ಲ, ಆದರೆ ನಿಮಗೆ ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡುತ್ತದೆ, ”ಎಂದು.ವ್ಯಂಗ್ಯವಾಡಿದ್ದಾರೆ.
ನಮ್ಮ ಕರಾವಳಿ ಭಾಗದಲ್ಲೂ ಇಂತಹ ಪೊಲೀಸ್ ಅತಿಕ್ರಮಣ ನಡೆಯುತ್ತಲೇ ಇದ್ದು, ಈ ಬಗ್ಗೆ ಚಕಾರ ಎತ್ತದ ಸರ್ಕಾರದ ನಡೆ ಗಮನಿಸಿದರೆ ಪೊಲೀಸರು ಖಾಕಿ ಚೆಡ್ಡಿ ಧರಿಸುತ್ತಿದ್ದಾರಾ ಎಂಬ ಅನುಮಾನ ಮೂಡದೇ ಇರದು.