ರಾಜ್ಯದಲ್ಲಿ ಶುರುವಾಗಿದ್ದ ಐಎಎಸ್ ವರ್ಸಸ್ ಐಪಿಎಸ್ ಬಿಕ್ಕಟ್ಟಿಗೆ ರಾಜ್ಯ ಸರ್ಕಾರ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಿದೆ. D. ರೂಪಾ ಹಾಗು ರೋಹಿಣಿ ಸಿಂಧೂರಿ ಅವರನ್ನು ಸ್ಥಳ ನಿಯೋಜನೆ ಮಾಡದೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಮಾಡಿದೆ. ಇನ್ನು ವರ್ಗಾವಣೆಯಲ್ಲಿ 7 ಮಂದಿ ಐಎಎಸ್ ಅಧಿಕಾರಿಗಳು ಸೇರಿದ್ದಾರೆ ಎನ್ನುವುದು ಸತ್ಯವಾದರೂ ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಗಂಡ ಮುನೀಶ್ ಮೌದ್ಗಿಲ್ ಅವರನ್ನೂ ವರ್ಗಾವಣೆ ಮಾಡಲಾಗಿದೆ. ಡಿಪಿಎಆರ್ ಪ್ರಧಾನ ಕಾರ್ಯದರ್ಶಿಯಾಗಿ ಮುನೀಶ್ ಮೌದ್ಗಿಲ್ ನಿಯೋಜನೆ ಮಾಡಲಾಗಿದೆ. ಜಗಳ ಆಡಿದ್ದು ಡಿ ರೂಪಾ ಹಾಗು ರೊಹಿಣಿ ಸಿಂಧೂರಿ. ಆದರೆ ಅವರಿಬ್ಬರಿಗೂ ವರ್ಗಾವಣೆ ಶಿಕ್ಷೆ ಕೊಟ್ಟಿದ್ದು ಸರಿ. ಆದರೆ ಯಾವುದೇ ವಿವಾದದಲ್ಲಿ ಪಾತ್ರವಹಿಸದಿದ್ದರೂ ಮುನೀಶ್ ಮೌದ್ಗಿಲ್ರನ್ನು ವರ್ಗಾವಣೆ ಮಾಡಿದ್ದು ಯಾಕೆ ಎನ್ನುವ ಅನುಮಾನ ಸಾಕಷ್ಟು ಜನರನ್ನು ಕಾಡುತ್ತಿದೆ.
ರೂಪಾ ಗಂಡ IAS ಮುನೀಶ್ ಮೌದ್ಗಿಲ್ ಯಾರು..?
ಪಂಜಾಬ್ನ ಜಲಂಧರ್ ಮೂಲದ ಮುನೀಶ್ ಮೌದ್ಗಿಲ್, ಕರ್ನಾಟಕ ಕೇಡರ್ನ IAS ಅಧಿಕಾರಿ. 1998ರಲ್ಲಿ ಕರ್ನಾಟಕಕ್ಕೆ ಅಧಿಕಾರಿ ಆಗಿ ಬಂದಿರುವ ಮುನೀಶ್ ಮೌದ್ಗಿಲ್, MGN Public school ಮತ್ತು ದಯಾನಂದ ಮಾದರಿ ಶಾಲೆಯಲ್ಲಿ ಕಲಿತ ಬಳಿಕ ಬಾಂಬೆಯ Indian institute of technology ಯಲ್ಲಿ ಬಿ-ಟೆಕ್ ಪದವಿ ಪಡೆದಿದ್ದಾರೆ. ಆ ಬಳಿಕ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಎಂ-ಟೆಕ್ ಕೂಡ ಪೂರೈಸಿದ್ದಾರೆ. ಯಾವುದೇ ಇಲಾಖೆಗೆ ಹೋದರು ತಾನಾಯ್ತು ತನ್ನ ಕೆಲಸ ಆಯ್ತು ಎಂದು ಕೆಲಸ ಮಾಡುವ ಮುನೀಶ್ ಮೌದ್ಗಿಲ್, ಈ ಬಾರಿ ಯಾವುದೇ ತಂಟೆ ತಕರಾರು ಇಲ್ಲದಿದ್ದರೂ ಮುನೀಶ್ ಮೌದ್ಗಿಲ್ ಅವರನ್ನು ಡಿಪಿಎಆರ್ ಪ್ರಧಾನ ಕಾರ್ಯದರ್ಶಿಯಾಗಿ ನಿಯೋಜನೆ ಮಾಡಿದ್ರ ಹಿಂದೆ ಸಾಕಷ್ಟು ಗುಮಾನಿಗಳು ಸೃಷ್ಟಿಯಾಗಿವೆ. ಅದರ ಜೊತೆಗೆ ರೋಹಿಣಿ ಸಿಂಧೂರಿ ಅವರ ವಿರುದ್ಧ ಐಪಿಎಸ್ ಅಧಿಕಾರಿ ರೂಪಾ ಸಿಡಿದು ಬೀಳಲು ಕಾರಣ ಇದೇ ಮುನೀಶ್ ಮೌದ್ಗಿಲ್ ಅನ್ನೋ ಮಾತುಗಳು ಕೇಳಿ ಬಂದಿವೆ.

ಡಿ. ರೂಪಾ ಕೈಗೆ ರೊಹಿಣಿ ಸೀಕ್ರೆಟ್ಸ್ ಸಿಕ್ಕಿದ್ದು ಹೇಗೆ..?
ಡಿ.ರೂಪಾ ಕಳೆದ ಎರಡು ದಿನದಿಂದ ಸಾಕಷ್ಟು ಆರೋಪ ಮಾಡಿದ್ದರು. ಆರೋಪ ಮಾಡಿದ್ದು ಮಾತ್ರವಲ್ಲ, ರೋಹಿಣಿ ಸಿಂಧೂರಿ ಇಲ್ಲೀವರೆಗೂ ಎಲ್ಲಿಯೂ ಹಂಚಿಕೊಳ್ಳದ ಫೋಟೋಗಳನ್ನೂ ಡಿ ರೂಪಾ ಸಮಾಜದ ಎದುರು ತೆರೆದಿಟ್ಟಿದ್ದರು. ಇಷ್ಟೆ ಅಲ್ಲದೆ ಇನ್ನೂ ತೋರಿಸಲು ಸಾಧ್ಯವಿಲ್ಲದ ಫೋಟೋಗಳೂ ನನ್ನ ಬಳಿ ಇವೆ ಎನ್ನುವ ಸುಳಿವನ್ನೂ ನೀಡಿದ್ದರು. ಜೊತೆಗೆ ನಗ್ನ ಫೋಟೋಗಳ ಬಗ್ಗೆ ಮಾತನಾಡುವ ಧೈರ್ಯ ಇದೆಯಾ..? ಎಂದು ರೊಹಿಣಿ ಸಿಂಧೂರಿಗೆ ನೇರವಾಗಿಯೇ ಸವಾಲು ಎಸೆದಿದ್ದರು. ಇಷ್ಟೆಲ್ಲಾ ಆದ್ಮೇಲೆ ರೋಹಿಣಿ ಸಿಂಧೂರಿ ಮೂವರು ಐಎಎಸ್ ಅಧಿಕಾರಿಗಳಿಗೆ ಈ ರೀತಿ ಫೋಟೋ ವೀಡಿಯೋ ಕಳುಹಿಸಿದ್ದಾರೆ, ಸಂಸಾರ ಮುರಿಯುವುದೇ ಇವರ ಕೆಲಸ ಎನ್ನುವ ಮೂಲಕ ರೋಹಿಣಿ ಸಿಂಧೂರಿ ಮಾನವನ್ನು ಮೂರು ಕಾಸಿಗೆ ಹರಾಜು ಹಾಕಿದ್ದರು. ಹಾಗಿದ್ದ ಮೇಲೆ ರೋಹಿಣಿಯ ಇಷ್ಟೊಂದು ಸೀಕ್ರೆಟ್ ಡಿ ರೂಪಾ ಕೈಗೆ ಸಿಗಬೇಕಿದ್ದರೆ ಕಾರಣ ಯಾರು..? ಎನ್ನುವುದನ್ನು ಬೆನ್ನತ್ತಿದ ಪ್ರತಿಧ್ವನಿಗೆ ಸಿಕ್ಕಿದ್ದು ಮುನೀಶ್ ಮೌದ್ಗಿಲ್ ನೆರಳು.
ಸಿಎಸ್ ಭೇಟಿ ವೇಳೆ ರೂಪಾ ಬಿಚ್ಚಿಟ್ಟ ಸತ್ಯವೇ ಘನಘೋರ..!
ಡಿ ರೂಪಾ ಇಷ್ಟೆಲ್ಲಾ ರಂಪಾಟ ಮಾಡಬೇಕಿದ್ದರೆ ಕಾರಣ ಏನು ಎನ್ನುವುದನ್ನು ಹುಡುಕಿಕೊಂಡು ಹೊರಟಾಗ ಕೇಳಿ ಬಂದ ಮಾತು ‘ ಹೆಣ್ಣು ಎಲ್ಲವನ್ನೂ ಸಹಿಸಿಕೊಳ್ತಾರೆ. ತನ್ನ ಗಂಡ ಬೇರೊಬ್ಬಳ ಸೆರಗು ಹಿಡಿಯುವುದನ್ನು ಬಿಟ್ಟು’ ಎನ್ನುವ ಮಾತು. ರೋಹಿಣಿ ಸಿಂಧೂರಿ ಮೈಸೂರು ಡಿಸಿ ಆಗಿದ್ದ ಸಮಯದಿಂದಲೂ ಮುನೀಶ್ ಮೌದ್ಗಿಲ್ ಜೊತೆಗೆ ಆತ್ಮೀಯತೆ ಹೊಂದಿದ್ದರು ಎನ್ನುವುದು ಬಹಿರಂಗ ಆಗಿದೆ. ಇದನ್ನು ಸ್ವತಃ ಡಿ ರೂಪಾ ಕೂಡ ಮಾತನಾಡುವ ವೇಳೆ ಬಹಿರಂಗ ಮಾಡಿದ್ದರು. ಸರ್ಕಾರದ ವರ್ಗಾವಣೆ ವಿರುದ್ಧ ಕೋರ್ಟ್ಗೆ ಹೋಗಲು ಮುನೀಶ್ ಮೌದ್ಗಿಲ್ ಅವರೇ ಡ್ರಾಫ್ಟ್ ರೆಡಿ ಮಾಡಿ ಕೊಟ್ಟಿದ್ದರು ಎಂದಿದ್ದರು. ಇನ್ನು ರೋಹಿಣಿ ಸಿಂಧೂರಿ ಬೆಂಗಳೂರಿಗೆ ವರ್ಗಾವಣೆ ಆಗಿ ಬಂದ ಬಳಿಕ ರೂಪಾ ಸಂಸಾರದಲ್ಲಿ ಬಿರುಗಾಳಿ ಶುರುವಾಗಿತ್ತು. ಸಾಕಷ್ಟು ದಿನಗಳಿಂದ ಸಾಕ್ಷಿಗಳನ್ನು ಕಲೆ ಹಾಕ್ತಿದ್ದ ರೂಪಾ ಕೊನೆಗೆ ಎಲ್ಲವನ್ನೂ ಬಹಿರಂಗ ಮಾಡುವ ನಿರ್ಧಾರಕ್ಕೆ ಬಂದರು ಎನ್ನಲಾಗ್ತಿದೆ. ಇನ್ನು ಸಿಎಂ ಭೇಟಿ ವೇಳೆ ತನಗಾದ ದೋಖಾದ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನಲಾಗಿದ್ದು, ರೋಹಿಣಿ ಸಿಂಧೂರಿ ಕಳುಹಿಸಿದ್ದಾರೆ ಎನ್ನಲಾದ ಒಂದು ಸಂದೇಶವನ್ನೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತೋರಿಸಿದ್ದಾರೆ ಎನ್ನುವ ಮಾತುಗಳು ವಿಧಾನಸೌಧ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.











