ರಾಕಿಂಗ್ ಸ್ಟಾರ್ ಯಶ್ ನಟನೆಯ ʻಕೆಜಿಎಫ್ 2ʼ ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ ಪೂರೈಸಿದೆ. ಯಶ್ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ʻಕೆಜಿಎಫ್ 2ʼ ಸಿನಿಮಾ ಒಂದು ವರ್ಷ ಪೂರೈಸಿದ್ರೂ ಕೂಡ ಇದುವರೆಗೂ ಯಶ್ ಅವರ ಸಿನಿಮಾ ಘೋಷಣೆಯಾಗಿಲ್ಲ.

ದಿನ ಕಳೆದಂತೆ ʼನಿಮ್ಮ ಮುಂದಿನ ಸಿನಿಮಾ ಅನೌನ್ಸ್ ಮಾಡಿ ಬಾಸ್ʼ ಅಂತ ಯಶ್ ಅಭಿಮಾನಿಗಳು ದಂಗೆಯೇಳುತ್ತಿದ್ದಾರೆ. ಆದ್ರೆ ರಾಕಿಭಾಯ್ ಮಾತ್ರ ಸೈಲೆಂಟ್ ಆಗಿದ್ದಾರೆ. ಈ ನಡುವೆ ಯಶ್ ಮುಂದಿನ ಚಿತ್ರದ ಬಗ್ಗೆ ಹೊಸ ಅಪ್‌ಡೇಟ್ ಒಂದು ಸಿಕ್ಕಿದೆ.

ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಜೊತೆ ಯಶ್ ಸಿನಿಮಾ ಮಾಡಲಿದ್ದಾರೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಸದ್ದು ಮಾಡ್ತಿದೆ. ಆದ್ರೆ ಈ ವಿಚಾರದಲ್ಲಿ ಅಧಿಕೃತ ಮಾಹಿತಿ ಸಿಗಲಿ ಅಂತ ಯಶ್ ಅವರ ಫ್ಯಾನ್ಸ್ ಕಾಯ್ತಿದ್ದಾರೆ.

ಈ ಹಿಂದೆ ಯಶ್ ನಿರ್ದೇಶಕ ನರ್ತನ್ ಜೊತೆ ಸಿನಿಮಾ ಮಾಡ್ತಾರೆ ಎನ್ನಲಾಗಿತ್ತು. ಅದು ಸುಳ್ಳಾಯಿತು. ಬಳಿಕ ʻಬ್ರಹ್ಮಾಸ್ತ್ರ 2ʼ ಸಿನಿಮಾದಲ್ಲಿ ಯಶ್‌ಗೆ ಆಫರ್ ಬಂದಿದೆ ಅಂತ ಹೇಳಲಾಗಿತ್ತು. ಅದೂ ಕೂಡ ಹುಸಿಯಾಯ್ತು.

ಈಗ ರಾಕಿಭಾಯ್ ಗೀತು ಮೋಹನ್‌ದಾಸ್ ಜೊತೆ ಸಿನಿಮಾ ಮಾಡಲಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಅನ್ನೋದನ್ನ ಅಧಿಕೃತ ಮಾಹಿತಿ ಹೊರಬೀಳುವವರೆಗೂ ಕಾದುನೋಡ್ಬೇಕಿದೆ