ಹಲವು ತಿಂಗಳುಗಳ ನಂತರ ರಾಕಿಂಗ್ ಸ್ಟಾರ್ ಯಶ್ (Rocking star Yash) ತಮ್ಮ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. KGF 2 ನಂತರ ಯಶ್ ತಮ್ಮ ಮುಂದಿನ ಸಿನಿಮಾ ಟಾಕ್ಸಿಕ್ (Toxic) ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಇದುವರೆಗೂ ಯಶ್ ಯಾವುದೇ ವೇದಿಕೆಯಲ್ಲಿ ಈ ಬಗ್ಗೆ ಎಳ್ಳಷ್ಟು ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಯಾವುದೇ ಹಿಂಟ್ ಕೂಡ ಇರಲಿಲ್ಲ.

ಇದೀಗ ಬಾಲಿವುಡ್ ನ (Bollywood) ಯೂಟ್ಯೂಬ್ ಚಾನೆಲ್ ಒಂದಕ್ಕೆ ಯಶ್ ಸಂದರ್ಶನ ನೀಡಿದ್ದಾರೆ. ಅದೂ ಕೂಡ ಟಾಕ್ಸಿಕ್ ಶೂಟಿಂಗ್ ಸೆಟ್ ನಲ್ಲೇ ಯಶ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡು,ಅದೇ ಗೆಟ್ಅಪ್ ನಲ್ಲಿ ಸಂದರ್ಶನ ನೀಡಿದ್ದು, ಟಾಕ್ಸಿಕ್ ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.
ಟಾಕ್ಸಿಕ್ ಸಿನಿಮಾದ ಮೊದಲ ಷೆಡ್ಯೂಲ್ ನ ಶೂಟಿಂಗ್ ಬಹುತೇಕ ಮುಗಿದಿದ್ದು, ಇದೀಗ ಎರಡನೇ ಮತ್ತು ಅತಿ ಪ್ರಮುಖ ಷೆಡ್ಯೂಲ್ ನ ಶೂಟಿಂಗ್ ಆರಂಭವಾಗಿದ್ದು, ಸಿನಿಮಾ ಅದ್ಭುತವಾಗಿ ಮೂಡಿ ಬರುತ್ತಿದೆ ಎಂದಿದ್ದಾರೆ. ಇನ್ನು ಇದೇ ವೇಳೆ ಟಾಕ್ಸಿಕ್ ನಲ್ಲಿ ಯಶ್ ಲುಕ್ ಮತ್ತು ಕಾಸ್ಟ್ಯೂಮ್ಸ್ ಹೇಗಿರಲಿವೆ ಎಂಬುದರ ಲುಕ್ ರಿವೀಲ್ ಆಗಿದ್ದು, ಒಂದಷ್ಟು ಫೋಟೋಗಳನ್ನು ರಿಲೀಸ್ ಮಾಡಲಾಗಿದೆ.
ಈ ವೇಳೆ ಸಿನಿಮಾ ಕಥಾ ಹಂದರದ ಬಗ್ಗೆ ಮಾತನಾಡಿರುವ ರಾಕಿ, ಸಾಮಾನ್ಯವಾಗಿ ಮಕ್ಕಳಿಗಾಗಿ ಫೇರಿ ಟೇಲ್ ಗಳನ್ನ (Fairy tail) ಮಾಡ್ತಾರೆ. ಆದ್ರೆ ನಾವು ದೊಡ್ಡವರಿಗೆ ಫೇರಿ ಟೇಲ್ ಮಾಡುತ್ತಿದ್ದೇವೆ. ಇದಕ್ಕಿಂತ ಹೆಚ್ಚಿಗೆ ನಾನು ಇನ್ನೇನು ಹೇಳುವುದಿಲ್ಲ. ಸಿನಿಮಾದಲ್ಲಿ ದೊಡ್ಡ ಕಲಾವಿದರ ದಂಡೇ ಇದೆ. ಅದು ಮುಂದಿನ ದಿನಗಳಲ್ಲಿ ರಿವೀಲ್ ಆಗಲಿದೆ ಎಂದಿದ್ದು, ಟಾಕ್ಸಿಕ್ ಸಿನಿಮಾ ಬಗ್ಗೆ ದೊಡ್ಡದಾಗಿ ಸಿಗ್ನಲ್ ಕೊಟ್ಟಿದ್ದಾರೆ.