ʼಪರಾಕ್ʼ ಲೀಡ್ ರೋಲ್ ನಲ್ಲಿ ರೋರಿಂಗ್ ಸ್ಟಾರ್ !
‘ಉಗ್ರಂ’ ಚಿತ್ರದಿಂದ ಮೂಲಕ Come Back ಮಾಡಿ ಪರದೆಯ ಮೇಲೆ ರೋರಿಂಗ್ ಸ್ಟಾರ್ ಆಗಿ ರೂಲ್ ಮಾಡುತ್ತಿರುವ ಮುರಳಿ, ಬಘೀರ ನಂತರ ಈಗ ಪರಾಕ್ ನಲ್ಲಿ ಆರ್ಭಟಿಸಲು ಸಜ್ಜಾಗುತ್ತಿದ್ದಾರೆ.
ಬಘೀರ ಚಿತ್ರವು 2025ರಲ್ಲಿ ಬಡುಗಡೆಯಾಗಿ ಸೂಪರ್ ಹಿಟ್ ಆದ ಚಿತ್ರ. ಈ ಚಿತ್ರದ ನಂತರ ಸ್ವಲ್ಪ ದಿನಗಳ ಕಾಲ Break ನಲ್ಲಿದ್ದ, ನಟ ಈಗ ಮತ್ತೊಮ್ಮೆ ರೋರ್ ಮಾಡಲು ಸಿದ್ದರಾಗುತ್ತಿದ್ದಾರೆ, ಅದು ಪರಾಕ್ ಚಿತ್ರದ ಮೂಲಕ Busy ಆಗುತ್ತಿದ್ದಾರೆ.

‘ಪರಾಕ್’ ಮುಹೂರ್ತವು ಇಂದು ಬಂಡಿ ಮಾಕಳ್ಳಮನ ಸನ್ನಿದಿಯಲ್ಲಿ ನೆರೆವೇರಿತು. ಬಘೀರ ಸಿನಿಮಾದ success ಬಳಿಕ ರೋರಿಂಗ್ ಸ್ಟಾರ್ ಶ್ರೀಮುರಳಿ ‘ಪರಾಕ್’ ಚಿತ್ರಕ್ಕೆ sign ಮಾಡಿದ್ದಾರೆ. ಇನ್ನು ಮೂಹರ್ತದ ಸಂದರ್ಭದಲ್ಲಿ ಚನ್ನಗಿರಿ ವಿಧಾನ ಸಭಾ ಕ್ಷೇತ್ರದ ಶಾಸಕ ಶಿವಗಂಗಾ ಬಸವರಾಜ್ ಕ್ಲ್ಯಾಪ್ ಮಾಡಿ, ಪರಾಕ್ ಚಿತ್ರ ತಂಡಕ್ಕೆ ಶುಭಹಾರೈಸಿದರು. ಬಳಿಕ ಮಾತನಾಡಿದ ಶ್ರೀ ಮುರಳಿ ಮಾತನಾಡಿ “ಪರಾಕ್ʼ ʼVintage Styleʼ ನಲ್ಲಿ ನಡೆಯುವ ಸಿನಿಮಾ. ಬಘೀರ ಚಿತ್ರದ ನಂತರ ಯಾವ ರೀತಿ ಕಥೆ ಆಯ್ಕೆ ಮಾಡಿಕೊಳ್ಳಬೇಕೆಂಬ tension ಇತ್ತು.
ಸುಮಾರು 200 ಕಥೆ ಕೇಳಿದ್ದೆ. ಪರಾಕ್ ಸಿನಿಮಾ ತಂಡದ ಜೊತೆ ಎರಡು ವರ್ಷಗಳ ನಿರಂತರವಾಗಿ ಟ್ರಾವೆಲ್ ಮಾಡಿದ್ದೆ. ತಂಡದ ಬಗ್ಗೆ ವಿಶ್ವಾಸವಿದ್ದ ಹಿನ್ನಲೆಯಲ್ಲಿ ಚಿತ್ರಕಥೆಯನ್ನು ಒಪ್ಪಿ, ಈ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದೆ ಎಂದು ಹೇಳಿದರು.
ಚಿತ್ರದ ಬಗ್ಗೆ ಕೇಳಿದಾಗ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಿದರು. ಯುವ ಪ್ರತಿಭೆ ಹಾಲೇಶ್ ಕೋಗುಂಡಿ ಚಿತ್ರವನ್ನ direct ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಅವರು debut ಮಾಡಲಿದ್ದಾರೆ. ಕೆಲವು ಕಿರು ಚಿತ್ರಗಳನ್ನು ನಿರ್ದೇಶಸಿರುವ ಇವರು ಸದ್ಯ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಕೈ ಚಳಕವನ್ನು ತೋರಿಸಲು ಸಜ್ಜಾಗಿದ್ದಾರೆ. ಇದೀಗ ಪರಾಕ್ ಮೂಲಕ director ಆಗುತ್ತಿದ್ದಾರೆಂದು ಹೇಳಿದರು. ‘ Brand Studious ‘ ಬ್ಯಾನರ್ ಅಡಿ ನಿರ್ಮಾಣವಾಗುತ್ತಿದ್ದು, ಚರಣ್ ರಾಜ್ ಸಂಗೀತವಿರುವ ಚಿತ್ರಕ್ಕೆ ಸಂದೀಪ್ ವಲ್ಲುರಿ ಕ್ಯಾಮೆರಾ, ಉಲ್ಲಾಸ್ ಹೈದೂರ್ ಕಲಾ ನಿರ್ದೇಶನ, ಇಂಚರಾ ಸುರೇಶ್ ‘costume Design’ ಮಾಡಲಿದ್ದಾರೆ. ಶೀಘ್ರದಲ್ಲೇ ಉಳಿದ Update ಗಳನ್ನು ಚಿತ್ರತಂಡ ರಿವೀಲ್ ಮಾಡಲಿದೆ ಎಂದು ಮಾಹಿತು ನೀಡಿದರು.


