ಕಾಂತಾರ ಪ್ರೀಕ್ವೆಲ್ ಮೂಲಕ ಸಖತ್ ಸದ್ದು ಮಾಡುತ್ತಿರುವ ರಿಷಬ್ ಶೆಟ್ಟಿ, ಬಳಿಕ ಹನುಮಾನ್ ಸೀಕ್ವೆಲ್ ನಲ್ಲಿ ಕಾಣಿಸಿಕ್ಕೊಳುವುದಾಗಿ ಇತ್ತೇಚೆಗಷ್ಟೇ ಅನೌನ್ಸ್ ಮಾಡಿದ್ದರು. ಇದ್ರಿಂದ ಫ್ಯಾನ್ಸ್ ಮತ್ತಷ್ಟು ಖುಷಿಯಾಗಿದ್ದರು. ಈ ಪ್ರಾಜೆಕ್ಟ್ ಗಳ ನಡುವೆ ಇದೀಗ ಮತ್ತೊಂದು ಬಿಗ್ಗೆಸ್ಟ್ ಪ್ರಾಜೆಕ್ಟ್ ಅನೌನ್ಸ್ ಮಾಡಿದ್ದಾರೆ.
ಹೌದು ಸದ್ಯದಲ್ಲೇ ರಿಷಬ್ ಹಿಂದೂ ಹೃದಯ ಸಮ್ರಾಟ್ ಛತ್ರಪತಿ ಶಿವಾಜಿ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಭಾರತದ ಮಹಾನ್ ಯೋಧ ರಾಜನ ಮಹಾಕಾವ್ಯವನ್ನು ಪ್ರಸ್ತುತಪಡಿಸಲಿದ್ದೇವೆ- ಭಾರತದ ಹೆಮ್ಮೆ, ಛತ್ರಪತಿ ಶಿವಾಜಿ ಮಹಾರಾಜ್. ಇದು ಕೇವಲ ಚಲನಚಿತ್ರವಲ್ಲ. ಎಲ್ಲಾ ವಿಲಕ್ಷಣಗಳ ವಿರುದ್ಧ ಹೋರಾಡಿದ, ಮೈಟಿ ಮೊಘಲ್ ಸಾಮ್ರಾಜ್ಯದ ಶಕ್ತಿಗೆ ಸವಾಲು ಹಾಕಿದ ಮತ್ತು ಎಂದಿಗೂ ಮರೆಯಲಾಗದ ಪರಂಪರೆಯನ್ನು ರೂಪಿಸಿದ ಯೋಧನನ್ನು ಗೌರವಿಸುವ ಯುದ್ಧದ ಕೂಗು.
ಛತ್ರಪತಿ ಶಿವಾಜಿ ಮಹಾರಾಜರ ಹೇಳಲಾಗದ ಕಥೆಯನ್ನು ನಾವು ಬಿಚ್ಚಿಡಲು ನಾವು ತಯಾರಿದ್ದೇವೆ, ಮ್ಯಾಗ್ನಮ್ ಓಪಸ್ ಆಕ್ಷನ್ ಡ್ರಾಮಾಕ್ಕೆ ನೀವು ಸಿದ್ಧರಾಗಿ. 21ನೇ ಜನವರಿ 2027 ರಂದು ಜಾಗತಿಕ ಬಿಡುಗಡೆ ಹರ ಹರ ಮಹಾದೇವ ಎಂಬ ಪೋಸ್ಟ್ ಹಂಚಿಕೊಂಡಿದ್ದಾರೆ.