5ಜಿ ತರಂಗಾಂತರ ಸೇವೆಗೆ ರಿಲಾಯನ್ಸ್ 2 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದ್ದು, ದೀಪಾವಳಿಗೆ ದೇಶದ ಪ್ರಮುಖ ನಗರಗಳಲ್ಲಿ ಸೇವೆ ಆರಂಭಿಸಲಾಗುವುದು ಎಂದು ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಘೋಷಿಸಿದ್ದಾರೆ.
ಮುಂಬೈನಲ್ಲಿ ಸೋಮವಾರನ ನಡೆದ ರಿಲಾಯನ್ಸ್ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪ್ರಾರಂಭಿಕ ಹಂತದಲ್ಲಿ ದೆಹಲಿ, ಮುಂಬೈ, ಕೋಲ್ಕತಾ ಮತ್ತು ಚೆನ್ನೈನಲ್ಲಿ ದೀಪಾವಳಿಗೆ ೫ಜಿ ತರಂಗಾಂತರ ಸೇವೆ ಆರಂಭಿಸಲಾಗುವುದು ಎಂದರು.
ಡಿಸೆಂಬರ್ ಅಂತ್ಯದ ವೇಳೆ ದೇಶದ ಪ್ರಮುಖ ನಗರಗಳಲ್ಲಿ ಜಿಯೊದಿಂದ 5ಜಿ ಸೇವೆ ಆರಂಭಿಸಲಾಗುವುದು. ದೇಶದ ಪ್ರತಿ ಪಟ್ಟಣ, ನಗರಗಳಲ್ಲಿ 5ಜಿ ಸೇವೆ ತಲುಪಿಸುವುದು ನಮ್ಮ ಗುರಿ ಎಂದು ಅವರು ಹೇಳಿದರು.
ದೇಶದಲ್ಲಿ 10 ಕೋಟಿ ಜನರನ್ನು ತಲುಪುವುದು ನಮ್ಮ ಗುರಿಯಾಗಿದೆ. ಉದ್ಯೋಗ ಸೃಷ್ಟಿಗಾಗಿ 75 ಸಾವಿರ ಕೋಟಿ ರೂ. ವಿನಿಯೋಗಿಸಲಾಗುವುದು ಎಂದು ಅಂಬಾನಿ ವಿವರಿಸಿದರು.