ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಗೋಧಿ ಮತ್ತು ಸಕ್ಕರೆ ನಂತರ ಇದೀಗ ಅಕ್ಕಿಯ ರಫ್ತು ಕೂಡ ನಿಷೇಧಿಸಲು ಚಿಂತನೆ ನಡೆಸಿದೆ.
ಜಾಗತಿಕ ಮಟ್ಟದಲ್ಲಿ ಆಹಾರ ಸಂರಕ್ಷಣೆ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅಕ್ಕಿ ರಫ್ತು ನಿಷೇಧಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ದೇಶಗಳು ಆಹಾರ ಧಾನ್ಯಗಳ ಸಂರಕ್ಷಣೆಗೆ ಒತ್ತು ನೀಡುತ್ತಿವೆ. ಕೇಂದ್ರ ಸರಕಾರ ಗೋಧಿ ಮತ್ತು ಸಕ್ಕರೆ ರಫ್ತು ನಿಷೇಧಿಸಿದ್ದು, ಇದರಿಂದ ಭಾರತದಿಂದ ಅಕ್ಕಿ ಅತೀ ಹೆಚ್ಚು ರಫ್ತು ಆಗುತ್ತಿದ್ದು, ಇದರ ಮೇಲೂ ನಿಯಂತ್ರಣ ವಿಧಿಸಲಿದೆ ಎನ್ನಲಾಗಿದೆ.