ಪ್ರಜ್ವಲ್ ರೇವಣ್ಣ (prajwal revanna) ಅಶ್ಲೀಲ ವಿಡಿಯೋ ಪ್ರಕರಣ ತಂದೆ ಹೆಚ್.ಡಿ.ರೇವಣ್ಣಗೆ (HD Revanna) ಮುಳುವಾಗಿದೆ. ನಿನ್ನೆ ಕಿಡ್ನಾಪ್ ಕೇಸ್ (Kidnap case) ವಿಚಾರಣೆ ನಡೆಸಿದ 17ನೇ ಎಸಿಎಂಎಂ ನ್ಯಾಯಾಲಯ (ACMM court) ಮೇ 14ರವರೆಗೆ 7 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.
ಇದರ ಬೆನ್ನಲ್ಲೇ ಹೆಚ್.ಡಿ. ರೇವಣ್ಣರನ್ನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇವಣ್ಣಗೆ ‘4567 ಎಂಬ ಕೈದಿ ನಂಬರ್ ನೀಡಲಾಗಿದೆ. ಕ್ವಾರೆಂಟೈನ್ ಜೈಲಿನ ಪ್ರತ್ಯೇಕ ಕೊಠಡಿಯಲ್ಲಿ ರೇವಣ್ಣ ನಿನ್ನೆ ರಾತ್ರಿಯನ್ನ ಕಳೆದಿದ್ದಾರೆ. ಇನ್ನೂ ರಾತ್ರಿ ಜೈಲಿನಲ್ಲಿ ಊಟ ಮಾಡಲು ರೇವಣ್ಣ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.
ಜೈಲಿನಲ್ಲಿ (jail) ಸಾಮಾನ್ಯ ಕೈದಿಗಳಿಗೆ ಕೊಡುವ ಊಟ ಕೊಟ್ಟಿದ್ದಕ್ಕೆ ಬೇಸರಗೊಂಡಿದ್ರು ಅಂತ ತಿಳಿದುಬಂದಿದೆ. ಮನೆಯವರು ತಂದು ಕೊಟ್ಟ ಬಟ್ಟೆಯನ್ನ ಪಡೆದಿರೋ ರೇವಣ್ಣ ಅದನ್ನೇ ಧರಿಸಿ ರಾತ್ರಿ ಕಳೆದಿದ್ದಾರೆ.ಇವತ್ತು ರೇವಣ್ಣಗೆ ಜೈಲಿನ ಮೆನುವಿನಂತೆ ಪುಳಿಯೊಗರೆ ಮತ್ತು ಕಾಫಿ ಬ್ರೇಕ್ ಫಾಸ್ಟ್ ಆಗಿ ಫಿಕ್ಸ್ ಎಂದು ತಿಳಿದುಬಂದಿದೆ.