ಹೊಳೆನರಸಿಪುರದಲ್ಲಿ (Hole narasipura) ದಾಖಲಾಗಿದ್ದ ಕೇಸ್ಗೆ ಸಂಬಂಧಪಟ್ಟಂತೆ ಎ1 ಆರೋಪಿಯಾಗಿದ್ದ ರೇವಣ್ಣ (Revanna) ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆಯ ವಿಚಾರಣೆ ಇಂದು ಸೆಷನ್ಸ್ ಕೋರ್ಟ್ನಲ್ಲಿ (JMFC court) ನಡೆಯಿತು. ಈ ಸಂದರ್ಭದಲ್ಲಿ ವಾದ ಮಂಡಿಸಿದ ಎಸ್ಐಟಿ (SIT) ಪರ ವಕೀಲರು, ಈ ಪ್ರಕರಣದಲ್ಲಿ ಎಲ್ಲಾ ಬೇಲಬಲ್ ಸೆಕ್ಷನ್ ಗಳನ್ನೇ ಹಾಕಲಾಗಿದ್ದು, ಆರೋಪಿ ನಿರೀಕ್ಷಣಾ ಜಾಮಿನಿಗಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆಯೇ ಇಲ್ಲವೆಂದು ವಾದ ಮಂಡಿಸಿದ್ರು.
ಹೀಗಾಗಿ ರೇವಣ್ಣ ಪರ ವಕೀಲರು ತಮ್ಮ ನಿರೀಕ್ಷಣಾ ಜಾಮೀನು (anticipatory bail) ಅರ್ಜಿಯನ್ನ ಹಿಂಪಡೆಯುವ ನಿರ್ಧಾರ ಮಾಡಿದ್ರು. ಸದ್ಯಕ್ಕೆ ಈ ಪ್ರಕರಣದಲ್ಲಿ 354ಎ, 354ಡಿ ಮತ್ತು 509 ಸೆಕ್ಷನ್ಗಳ ಅಡಿಯಲ್ಲಿ ಕೇಸ್ ದಾಖಲಿಸಿದ್ದು, ಎಲ್ಲವೂ ಬೇಲಬಲ್ ಸೆಕ್ಷನ್ಗಳಾಗಿದೆ. ಹೀಗಾಗಿ 376 ಸೆಕ್ಷನ್ ಸೇರ್ಪಡೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕೂಡ ಎಸ್ಐಟಿ ಪರ ವಕೀಲರು ಮನವಿ ಮಾಡಿಕೊಂಡು.
ಒಂದುವೇಳೆ ಕೋರ್ಟ್ ಈ ಪ್ರಕರಣದಲ್ಲಿ 376 ಸೆಕ್ಷನ್ ಸೇರ್ಪಡೆಗೆ ಅವಕಾಶ ಮಾಡಿಕೊಟ್ಟರೆ, ಈಗ ಅಲ್ಲದಿದ್ರೂ ಮುಂದಿನ ದಿನಗಳಲ್ಲಿ ರೇವಣ್ಣ ಬಂಧನವಾಗುವ ಸಾಧ್ಯತೆಗಳು ದಟ್ಟವಾಗಿದೆ. ಹಾಗಾಗಿ ಇವತ್ತಿನ ರಿಲೀಫ್ ರೇವಣ್ಣ ಪಾಲಿಗೆ ಕೇವಲ ತಾತ್ಕಾಲಿಕ ಎಂದು ಹೇಳಲಾಗ್ತಿದೆ.