ಕೇಂದ್ರ ಗೃಹ ಸಚಿವ ಅಮಿತ್ ಶಾ (Amit sha) ಸಹ ಪ್ರಜ್ವಲ್ ರೇವಣ್ಣ ಮತ್ತು ರೇವಣ್ಣ ಕೇಸ್ನಿಂದ ಅಂತರ ಕಾಯ್ದುಕೊಂಡಿದ್ದಾರೆ.ಹೆಚ್ಡಿಕೆ (HDK) ಇದ್ದ ಅದೇ ತಾಜ್ ವೆಸ್ಟ್ ಎಂಡ್ ಹೋಟೆಲ್‌ಗೆ (Taj west end hotel) ರಾತ್ರಿ 8:15ಕ್ಕೆ ಅಮಿತ್ ಶಾ ಆಗಮಿಸಿ ವಾಸ್ತವ್ಯ ಹೂಡಿದ್ದರು. ಆದ್ರೆ, ಅಮಿತ್ ಶಾ ಹೊಟೇಲ್‌ಗೆ ಬಂದು ಒಂದು ಗಂಟೆಯ ಬಳಿಕ ಕುಮಾರಸ್ವಾಮಿ ಭೇಟಿ ಆಗದೇ ಹೋಟೆಲ್‌ನಿಂದ ತೆರಳಿದ್ದಾರೆ.
ಇನ್ನು ನಿನ್ನೆ ಹೊರಗೆ ಇಷ್ಟೇಲ್ಲಾ ಬೆಳವಣಿಗೆಗಳು ನಡೆಯುತ್ತಿದ್ರೂ, ನಿನ್ನೆ ಮಧ್ಯಾಹ್ನ ಒಂದು ಗಂಟೆಯಿಂದ ಬೆಂಗಳೂರಿನ(Bangalore) ತಾಜ್ ವೆಸ್ಟ್ ಎಂಡ್ ಹೊಟೇಲ್‌ನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ರು. ಇಡೀ ಬೆಳವಣಿಗೆ ಮೇಲೆ ನಿರಂತರ ಮಾಹಿತಿ ಪಡೆಯುತ್ತಿದ್ದ ಹೆಚ್ಡಿಕೆ, ಆಪ್ತರ ಜೊತೆಗೆ ರಹಸ್ಯ ಸಭೆ ನಡೆಸಿದ್ರು.
ಸಭೆಯಲ್ಲಿ ಜಿ.ಟಿ.ದೇವೇಗೌಡ, ಸಿ.ಎಸ್.ಪುಟ್ಟರಾಜು, ನಿಖಿಲ್ ಕುಮಾರಸ್ವಾಮಿ ಸೇರಿ ಕೆಲ ಆಪ್ತರು ಭಾಗಿ ಆಗಿದ್ರು.ಇನ್ನು, ಪೆನ್ಡ್ರೈವ್(pendrive) ಪ್ರಕರಣ ದಳಕ್ಕಷ್ಟೇ ಅಲ್ಲ(jds), ಕಮಲಕ್ಕೂ (Bjp)ತಳಮಳ ಸೃಷ್ಟಿ ಮಾಡಿದಂತೆ ಕಾಣಿಸ್ತಿದೆ. ಹೀಗಾಗಿ ಕೇವಲ ರಾಜ್ಯ ಬಿಜೆಪಿ ನಾಯಕರಷ್ಟೇ ಅಲ್ಲದೆ ರಾಷ್ಟೀಯ ನಾಯಕರು ಕೂಡ ಅಂತರ ಕಾಯ್ದುಕೊಂಡಿದ್ದಾರೆ.