ಲಖಿಂಪುರ್ ಖೇರಿಯಲ್ಲಿ ಕೇಂದ್ರ ಸಚಿವನ ಮಗ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರವು ಮೃತ ರೈತರ ಕುಟುಂಬಗಳಿಗೆ ತಲಾ 45 ಲಕ್ಷ ರೂಪಾಯಿಗಳ ಪರಿಹಾರ ಮತ್ತು ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಕೆಲಸ ನೀಡುವುದಾಗಿ ಘೋಷಿಸಿದೆ ಮತ್ತು ಘಟನೆಯಲ್ಲಿ ಗಾಯಗೊಂಡಿರುವ ರೈತರಿಗೆ ತಲಾ 10 ಲಕ್ಷ ರೂಪಾಯಿಗಳ ಪರಿಹಾರವನ್ನ ಸರ್ಕಾರ ಘೋಷಿಸಿದೆ.
ಘಟನೆ ಸಂಬಂಧ ಸರ್ಕಾರ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಸಮುಖದಲ್ಲಿ ತನಿಖೆಗೆ ಆದೇಶಿಸಿದೆ ಎಂದು ಕಾನೂನು ಸುವ್ಯವಸ್ಥೆ ಹೆಚ್ಚುವರಿ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಬೆಳ್ಳಗೆ ನಾಲ್ಕು ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದು ಇನ್ನು ನಾಲ್ಕು ಶವಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಖೇರಿ ವೈದ್ಯಾಧಿಕಾರಿ ಶೈಲೇಂದ್ರ ಭಟ್ನಾಗರ್ ತಿಳಿಸಿದ್ದಾರೆ.

ಭಾನುವಾರ ಲಖೀಂಪುರ್ ಖೇರಿಯಲ್ಲಿ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಒಡೆತನದ ಬೆಂಗಾವಲು ಕಾರು ಪ್ರತಿಭಟನಾ ನಿರತ ರೈತರ ಮೇಲೆ ಏಕಾಏಕಿ ಚಲಾಯಿಸಲಾಗಿತ್ತು ಈ ಘಟನೆಯಲ್ಲಿ ನಾಲ್ಕು ಜನ ರೈತರು ಮೃತಪಟ್ಟಿದರು. ಘಟನೆಯ ನಂತರ ದೇಶಾದಂತ್ಯ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಮಂತ್ರಿ ಮತ್ತು ಅವನ ಮಗನನ್ನು ಈ ಕೂಡಲೇ ಬಂಧಿಸಬೇಕು ಎಂದು ವ್ಯಾಪಕ ಆಗ್ರಹ ಕೇಳಿಬಂದಿತ್ತು. ಈ ಘಟನೆ ಕುರಿತು ರಾಷ್ಟ್ರಾದ್ಯಂತ ರೈತ ಸಂಘಗಳು ಮತ್ತು ವಿರೋಧ ಪಕ್ಷಗಳು ಪ್ರತಿಭಟನೆಗೆ ಕರೆ ನೀಡದ್ದವು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಸಚಿವ ಮಿಶ್ರಾ ʻನನ್ನ ಮಗ ವ್ಯಾಪರಸ್ಥನಾಗಿದ್ದು ಅವನ್ನು ಘಟನೆ ಸಂಭವಿಸಿದಾಗ ಸ್ಥಳದಲ್ಲೇ ಇರಲಿಲ್ಲ ಮತ್ತು ಮೃತಪಟ್ಟ ಇತರ ನಾಲ್ವರು ರೈತರಲ್ಲ ಮೂವರು ಬಿಜೆಪಿ ಕಾರ್ಯಕರ್ತರು ಮತ್ತು ಕಾರು ಚಾಲಕ ಘಟನೆ ಸಂಭವಿಸಿದ ನಂತರ ರೈತರ ಗುಂಪಿನಲ್ಲಿದ್ದ ಶಸ್ತ್ರಸಜ್ಜಿತ ದಾಳಿಕೋರರು ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಸಚಿವರು ಪ್ರತಿಕ್ರಿಯಿಸಿದ್ದಾರೆʼ.
ಘಟನೆಯ ಕುರಿತು ಟಿಕುನಿಯಾ ಪೊಲೀಸ್ ಠಾಣೆಯಲ್ಲಿ ಸಚಿವ ಆಶಿಶ್ ಮಿಶ್ರಾ,ಅಜಯ್ ಮಿಶ್ರಾ ವಿರುದ್ದ ಪ್ರಕರಣ ದಾಖಲಾಗಿದ್ದು ನಿರ್ಲಕ್ಷ್ಯ, ಹತ್ಯೆ ಪ್ರಕರಣದ ಕುರಿತು ಎಫ್ಐಆರ್ ದಾಖಲಿಸಲಾಗಿದೆ. ಗಲಭೆಯಿಂದ ಹತ್ಯೆಯಾದ ನಾಲ್ವರ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಸುಮಿತ್ ಜೈಸ್ವಾಲ್ ಎಂಬುವವರಿಂದ ಅದೇ ಠಾಣೆಯಲ್ಲಿ ಪ್ರತ್ಯೇಕವಾಗಿ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.