ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್ ಲಾಸ್ ಅವರು, ಇಂದು ವಿಕಾಸಸೌಧದಲ್ಲಿ ವಿವಿಧ ಕಾರ್ಖಾನೆಗಳ ಆಡಳಿತ ಮಂಡಳಿ ಹಾಗೂ ನೌಕರರ ನಡುವೆ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಸರಣಿ ಸಭೆಗಳನ್ನು ನಡೆಸಿದರು.

ಇಂಡಾಲ್ಕೊ ಕಾರ್ಖಾನೆಯ ನೌಕರರು ಮತ್ತು ಆಡಳಿತ ಮಂಡಳಿಯ ಸಭೆ
ಬೆಳಗಾವಿಯ ಇಂಡಾಲ್ಕಿ ಕಾರ್ಖಾನೆಯ ನೌಕರರ ಮತ್ತು ಆಡಳಿತ ವರ್ಗದವರ ನಡುವಿನ ಸಮಸ್ಯೆಗಳನ್ನು ಬಗೆಹರಿಸಲು ಸಭೆ ನಡೆಸಿ ಚರ್ಚಿಸಿದರು.
ಈ ಸಭೆಯಲ್ಲಿ ಬೆಳಗಾವಿ ಶಾಸಕರಾದ ಆಸೀಫ್ ಸೇಠ್, ಕಾರ್ಮಿಕ ಆಯುಕ್ತರಾದ ಡಾ. ಗೋಪಾಲಕೃಷ್ಣ, ಉಪ ಕಾರ್ಮಿಕ ಆಯುಕ್ತರಾದ ನಾಗೇಶ್, ವೆಂಕಟೇಶ್ ರಾಠೋಡ್, ಕಾರ್ಖಾನೆಗಳು ಮತ್ತು ಬಾಯ್ಲರುಗಳ ಇಲಾಖೆಯ ನಿರ್ದೇಶಕರಾದ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

ವೆರ್ಜಾ ಅಟ್ಯಾಚ್‌ಮೆಂಟ್ ಕಾರ್ಮಿಕರ ಸಭೆ
ಕೋಲಾರ ಜಿಲ್ಲೆಯ ಮಾಲೂರು ಕೈಗಾರಿಕಾ ಪ್ರದೇಶದಲ್ಲಿರುವ ವೆರ್ಜಾ ಅಟ್ಯಾಚ್‌ಮೆಂಟ್ ಕಂಪನಿಯ ನೌಕರರ ಸಂಘಟನೆ ಮತ್ತು ಆಡಳಿತ ಮಂಡಳಿ ನಡುವಿನ ಸಮಸ್ಯೆಗಳನ್ನು ಬಗೆಹರಿಸಲು ಸಭೆಯನ್ನು ನಡೆಸಿದರು.
ಈ ಸಭೆಯಲ್ಲಿ ಕಾರ್ಮಿಕ ಆಯುಕ್ತರಾದ ಗೋಪಾಲಕೃಷ್ಣ, ಕಾರ್ಖಾನೆಗಳು ಮತ್ತು ಬಾಯ್ಲರುಗಳ ಇಲಾಖೆಯ ನಿರ್ದೇಶಕರಾದ ಶ್ರೀನಿವಾಸ್, ಅಪರ ನಿರ್ದೇಶಕರಾದ ಶ್ರೀ ನಂಜಪ್ಪ, ಸಹಾಯಕ ಕಾರ್ಮಿಕ ಆಯುಕ್ತರಾದ ಜಹೀರ್ ಭಾಷಾ, ಜಂಟಿ ನಿರ್ದೇಶಕರಾದ ನವನೀತ್ ಮೋಹನ್, ಕಾರ್ಮಿಕ ಅಧಿಕಾರಿವರಲಕ್ಷ್ಮಿ, ಕಂಪನಿಯ ಹೆಚ್.ಆರ್.ಮ್ಯಾನೇಜರ್, ನೌಕರರ ಸಂಘದ ಶ್ರೀ ಗೌಡ ರವರು ಪಾಲ್ಗೊಂಡಿದ್ದರು.

ಎಂವಿ ಫೋಟೊ ವೋಲ್ಟಾಯಿಕ್ ಕಂಪನಿಯ ಸಭೆ
ಬೆಂಗಳೂರಿನ ಎಂವಿ ಫೋಟೊ ವೋಲ್ಟಾಯಿಕ್ ಕಾರ್ಖಾನೆಯ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಕಾರ್ಮಿಕ ಸಚಿವ ಲಾಡ್ ಅವರು ಸಭೆ ನಡೆಸಿದರು.

ಕಾರ್ಮಿಕರ ಹಿತ ಕಾಯುವುದೇ ಆದ್ಯತೆ
ಈ ಸಭೆಗಳಲ್ಲಿ ಮಾತನಾಡಿದ ಸಚಿವ ಲಾಡ್ ಅವರು, ಕಾರ್ಮಿಕರ ಹಿತ ಕಾಯುವುದೇ ಆದ್ಯತೆ. ಸಮಸ್ಯೆಗಳನ್ನು ಪರಿಹಾರ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.