
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಮುಸ್ಲಿಂ ಸಮುದಾಯದವರಿಗೆ ಶೇಕಡ 4ರಷ್ಟು ಮೀಸಲಾತಿ ಇತ್ತು. ಸಂವಿಧಾನದ ಪ್ರಕಾರ ಧಾರ್ಮಿಕ ಮೀಸಲಾತಿಗೆ ಅವಕಾಶ ಇಲ್ಲ. ಬಸವರಾಜ ಬೊಮ್ಮಾಯಿ ಸರ್ಕಾರ ಧಾರ್ಮಿಕ ಮೀಸಲಾತಿ ಹಿಂಪಡೆದಿತ್ತು. ಕಾಂಗ್ರೆಸ್ ನಾವು ಬಂದ ಮೇಲೆ ಮತ್ತೆ ಕೊಡ್ತೇವೆ ಎಂದಿದ್ರು.. ಅವರೀಗ ಗುತ್ತಿಗೆಯಲ್ಲಿ ಮೀಸಲಾತಿ ಕೊಟ್ಟಿದ್ದಾರೆ. ನಾವು ಇದನ್ನ ಒಪ್ಪಲ್ಲ ವಿರೋಧಿಸುತ್ತೇವೆ. ನೆಪ ಮಾತ್ರಕ್ಕೆ ಜೈನರನ್ನ, ಸಿಖ್‌ರನ್ನ ಸೇರಿಸಿದ್ದಂತಾಗಿದೆ. ಅವರ ಉದ್ದೇಶ ಮುಸ್ಲಿಂರಿಗೆ ಕೊಡಬೇಕು ಅನ್ನೋದೆ ಆಗಿದೆ. ಇದು ದೇಶ ವಿರೋಧಿ ನೀತಿ ಎಂದಿದ್ದಾರೆ.

ದೇಶವನ್ನ 2047ಕ್ಕೆ ಇಸ್ಲಾಂ ರಾಷ್ಟ್ರ ಮಾಡ್ತೇವೆ ಎಂದು ಹೇಳ್ತಿದ್ದಾರೆ. ಮುಸ್ಲಿಮರಿಂದಲೇ ದೇಶಕ್ಕೆ ಗಂಡಾಂತರ ಇದೆ ಎಂದು ಹೇಳಲ್ಲ. ಮುಸ್ಲಿಂ ಜೊತೆ ಇದ್ದು ಅವರಂತೆ ವರ್ತಿಸುವ ಹಿಂದೂಗಳಿಂದ ದೇಶಕ್ಕೆ ಗಂಡಾಂತರ ಇದೆ ಎಂದಿದ್ದಾರೆ ಛಲವಾದಿ ನಾರಾಯಣ ಸ್ವಾಮಿ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸರ್ಕಾರದ ವಿರುದ್ಧ ಎಕ್ಸ್ ಖಾತೆಯಲ್ಲಿ ಕಿಡಿಕಾರಿದ್ದು, ಸರ್ವರಿಗೂ ಸಮಪಾಲು.. ಸರ್ವರಿಗೂ ಸಮಬಾಲು ಅನ್ನೋ ತತ್ವಕ್ಕೆ ಬಿಜೆಪಿ ಸದಾ ಸಿದ್ಧ. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಮುಸ್ಲಿಮರಿಗೆ ಬಹುಪಾಲು ಇತರರಿಗೆ ಅಲ್ಪಪಾಲು ಅನ್ನೋ ನೀತಿ ಅನುಸರಿಸಲು ಹೊರಟು, ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಅನ್ನೋ ಕಲ್ಪನೆಗೆ ಇತಿಶ್ರೀ ಹಾಡಲು ಹೊರಟಿದೆ ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರದಿಂದ ಮುಸ್ಲಿಂ ಸಮುದಾಯ ಓಲೈಕೆ ಮಾಡುತ್ತಿದೆ ಎಂದು ವಿಜಯಪುರದಲ್ಲಿ ಶಾಸಕ ಯತ್ನಾಳ್ ವಾಗ್ದಾಳಿ ಮಾಡಿದ್ದಾರೆ. ಮುಸ್ಲಿಂ ಯುವತಿಯರಿಗೆ ಆತ್ಮರಕ್ಷಣೆ ತರಬೇತಿ ವಿಚಾರದ ಬಗ್ಗೆ ಮಾತನಾಡಿ, ಸಿದ್ದರಾಮಯ್ಯ ವಿರುದ್ದ ಯತ್ನಾಳ್ ವಾಗ್ದಾಳಿ ಮಾಡಿದ್ದು, ಮುಸ್ಲಿಂ ಯುವತಿಯರಿಗೆ ಆತ್ಮರಕ್ಷಣೆ ಕಲಿಸಲು ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಯುವತಿಯರಿಗೆ ಆತ್ಮರಕ್ಷಣೆ ಕಲಿಸಿದ್ರೆ, ನಿತ್ಯ ನಮ್ಮ ಹೆಣ್ಣು ಮಕ್ಕಳ ಜೊತೆಗೆ ಹೊಡೆದಾಡಬೇಕಾಗುತ್ತದೆ. ಮುಸ್ಲಿಂ ಹೆಣ್ಣುಮಕ್ಕಳಿಗೆ ಅನ್ಯಾಯವಾಗಿದೆಯಾ..? ಆಗ್ತಿರೋದು ಹಿಂದೂ ಹೆಣ್ಣುಮಕ್ಕಳಿಗೆ ಅನ್ಯಾಯ. ನಿನ್ನೆ ಹಾವೇರಿಯಲ್ಲಿ ಹಿಂದೂ ಯುವತಿಯನ್ನ ಮುಸ್ಲಿಂ ಯುವಕ ಕೊಲೆ ಮಾಡಿದ್ದಾನೆ. ನಿರಂತರವಾಗಿ ಹಿಂದೂ-ದಲಿತ ಹೆಣ್ಣು ಮಕ್ಕಳ ಮೇಲೆ ಈ ಸರ್ಕಾರದಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂದಿದ್ದಾರೆ.

ಗುತ್ತಿಗೆಯಲ್ಲಿ ಮುಸ್ಲೀಂ ಮೀಸಲಾತಿ ವಿಷಯವಾಗಿ ವಿಜಯೇಂದ್ರ ಟ್ವೀಟ್ ವಿಚಾರವಾಗಿ ಗದಗದಲ್ಲಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಮುಸ್ಲೀಮರಾಗಿ ಇರಬಹುದು, ಕ್ರಿಶ್ಚಿಯನ್, ಸಿಖ್ಖರು, ಬೌದ್ಧರು ದೇಶದ ಪ್ರಜೆಗಳು.. ನಾವು ಎಲ್ಲ ಹಿಂದುಳಿದ, ಅಲ್ಪ ಸಂಖ್ಯಾತರ ಬಗ್ಗೆ ಚಿಂತನೆ ಮಾಡುತ್ತೇವೆ.. ಸಮಬಾಳು ಸಮಪಾಲು ಅನ್ನೋರು ಅಲ್ಪ ಸಂಖ್ಯಾತರಿಗೆ ಎಮ್ಎಲ್ಸಿ ಮಾಡಿ.. ರಾಜ್ಯ ಸಭಾ ಸದಸ್ಯರನ್ನಾಗಿ ಅಲ್ಪ ಸಂಖ್ಯಾತರನ್ನ ಮಾಡಿ.. ಇಬ್ಬರು ಕ್ರಿಶ್ಚಿಯನ್, ಮೂವರು ಮುಸ್ಲೀಮರನ್ನ ಕೇಂದ್ರದಲ್ಲಿ ಮಂತ್ರಿ ಮಾಡಿ.. ಆಗ ಸಮ ಬಾಳು, ಸಮಪಾಲು ಅಂತಾ ಮಾತಾಡೋದಕ್ಕೆ ವಿಜಯೇಂದ್ರ ಅವರಿಗೆ ಅವಕಾಶವಿದೆ.. ಕುವೆಂಪು ಅವರ ನಾಡಗೀತೆಯನ್ನ ಒಮ್ಮೆ ವಿಜಯೇಂದ್ರ ಓದಲಿ.. ಈಗ ಪಾಪ ಅಧ್ಯಕ್ಷ ಆಗಿದ್ದಾರೆ.. ಅವರ ಲೇವಲ್ನಲ್ಲೇ ಇರಲಿ ಎಂದಿದ್ದಾರೆ..