
ಚಿತ್ರದುರ್ಗ: ಪವಿತ್ರಾಗೌಡಗೆ ಅಸಭ್ಯವಾಗಿ ಮೆಸೇಜ್ ಮಾಡಿದ್ದ ಅನ್ನೋ ಕಾರಣಕ್ಕೆ ಡಿ ಗ್ಯಾಂಗ್‌ನಿಂದ ಹತ್ಯೆಯಾದ ರೇಣುಕಾಸ್ವಾಮಿ ಪತ್ನಿಗೆ ಗಂಡು ಮಗು ಜನನ ಆಗಿದೆ.
ರೇಣುಕಸ್ವಾಮಿ ಪತ್ನಿ ಸಹನಾಗೆ ಇಂದು ಬೆಳಗ್ಗೆ ಹೆರಿಗೆ ಆಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗನ ಪತ್ನಿಗೆ ಗಂಡು ಮಗು ಹುಟ್ಟಿದ ಹಿನ್ನಲೆಯಲ್ಲಿ ರೇಣುಕಾಸ್ವಾಮಿ ತಂದೆ ಶಿವನಗೌಡ ಸಂತಸಗೊಂಡಿದ್ದಾರೆ.

ನಮ್ಮ ಸೊಸೆ ಸಹನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಮ್ಮ ಮಗನೇ ಮತ್ತೆ ಹುಟ್ಟಿ ಬಂದಷ್ಟು ಖುಷಿ ಆಗುತ್ತಿದೆ. ನಮ್ಮ ಮಗನ ಆಕಸ್ಮಿಕವಾಗಿ ನಮ್ಮನ್ನು ಬಿಟ್ಟು ಅಗಲಿದ್ದಾನೆ. ಆದರೆ ಇದೀಗ ಗಂಡು ಮಗು ಹುಟ್ಟಿರುವುದು ಮಗನ ಮರು ಜನ್ಮ ಎನ್ನುವಂತಾಗಿದೆ ಎಂದಿದ್ದಾರೆ.

			
                                
                                
                                