ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ಗೆ ಸದ್ಯಕ್ಕೆ ಬಿಡುಗಡೆಯ ದಾರಿ ಕಾಣುತ್ತಿಲ್ಲ. ನಟ ದರ್ಶನ್ ಹಾಗೂ ಪ್ರಕರಣದ ಎ-೧ ಆರೋಪಿ ಪವಿತ್ರ ಗೌಡ ಸೇರಿದಂತೆ ಇನ್ನುಳಿದ ಆರೋಪಿಗಳು ನಿನ್ನೆ ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಧೀಶರು ಎಲ್ಲಾ ಆರೋಪಿಗಳ ದೋಷಾರೋಪವನ್ನು ಪ್ರಕಟಿಸಿದ್ದಾರೆ.

ಚಿತ್ರದುರ್ಗದಿಂದ ರೇಣುಕಾಸ್ವಾಮಿ ಕಿಡ್ನಾಪ್‌ನಿಂದ ಹಿಡಿದು ಆತನ ಮೇಲೆ ಹಲ್ಲೆ, ಕೊ*, ಮೃ*ದೇಹ ಬಿಸಾಡಿ, ಸಾಕ್ಷ್ಯ ನಾಶದವರೆಗೂ ಪ್ರತಿಯೊಬ್ಬ ಆರೋಪಿಯ ಮೇಲೆ ದೋಷಾರೋಪ ಪಟ್ಟಿಯಲ್ಲಿ ಸಲ್ಲಿಸಲಾದ ವಿವರವನ್ನು ಪ್ರತ್ಯೇಕವಾಗಿ ನ್ಯಾಯಾಧೀಶರು ತಿಳಿಸಿದ್ದಾರೆ. ಈ ವೇಳೆ ನಟ ದರ್ಶನ್ ಮೇಲೆ ದಾಖಲಾದ ಆರೋಪ ಹಾಗೂ ಸೆಕ್ಷನ್‌ಗಳನ್ನು ವಿವರಿಸಲಾಗಿದೆ. ಮೂಲಗಳ ಮಾಹಿತಿ ಪ್ರಕಾರ ದರ್ಶನ್ ವಿರುದ್ಧ ಒಟ್ಟು ೧೦ ಸೆಕ್ಷನ್‌ಗಳು ದಾಖಲಾಗಿದ್ದು, ಈ ಕುರಿತು ವಿವರ ಈ ಕೆಳಗಿನಂತಿದೆ.

*IPC ಸೆಕ್ಷನ್ 120-B – ಕೊ* ಮಾಡಲು ಸಂಚು
*IPC ಸೆಕ್ಷನ್ 364 – ರೇಣುಕಾಸಾಮಿ ಕಿಡ್ನಾಪ್
*IPC ಸೆಕ್ಷನ್ 302 – ರೇಣುಕಾಸ್ವಾಮಿ ಸಾವಿಗೆ ಕಾರಣ
*IPC ಸೆಕ್ಷನ್ 384 – ಮೃತನ ಬಳಿ ಹಣ ದರೋಡೆ
*IPC ಸೆಕ್ಷನ್ 504 – ಅವಾಚ್ಯ ಶಬ್ದಗಳಿಂದ ನಿಂದನೆ
*IPC ಸೆಕ್ಷನ್ 342 – ಅಕ್ರಮ ಬಂಧನ
*IPC ಸೆಕ್ಷನ್ 147, 148 – ಮಾರಕಾಸ್ತ್ರಗಳೊಂದಿಗೆ ಗಲಭೆ
*IPC ಸೆಕ್ಷನ್ 143 – ಅಕ್ರಮ ಕೂಟ ರಚನೆ
*IPC ಸೆಕ್ಷನ್ 149 – ಕಾನೂನುಬಾಹಿರ ಗುಂಪು ಸೇರಿ ಕೃತ್ಯ
*IPC ಸೆಕ್ಷನ್ 201 – ಶ* ಬಿಸಾಡಿ, ಸಾಕ್ಷ್ಯ ನಾಶ
ಈ ಮೇಲಿನ ವಿವರಗಳನ್ನು ಮೂಲಗಳ ಮಾಹಿತಿ ಪ್ರಕಾರ ಉಲ್ಲೇಖಿಸಲಾಗಿದೆ.












