ಆಸ್ಕರ್ ಪ್ರಶಸ್ತಿ ವಿಜೇತ (Oscar winner) ಭಾರತದ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಎ.ಆರ್ ರೆಹಮಾನ್ (AR Rehman) ಅವರ ಆರೋಗ್ಯದಲ್ಲಿ ಧಿಡೀರ್ ಏರುಪೇರಾಗಿದ್ದು ಸದ್ಯ ಚೆನ್ನೈನ ಖಾಸಗಿ ಆಸ್ಪತ್ರೆಗೆ (Chennai hospital) ದಾಖಲಾಗಿದ್ದಾರೆ.

ಅವರ ಆಪ್ತ ಮೂಲಗಳ ಮಾಹಿತಿಯ ಪ್ರಕಾರ, ರೆಹಮಾನ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಅವರು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು (ಮಾ.೧೬) ಬೆಳಗ್ಗೆ 7.30ರ ಸುಮಾರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ.
ಹೀಗಾ ಎದೆನೋವಿನ ಕಾರಣ ಗಾಯಕ ರೆಹಮಾನ್ ಆಸ್ಪತ್ರೆಗೆ ದಾಖಲಾದ ಕೂಡಲೇ ಅವರನ್ನು ECG ಹಾಗೂ ಎಕೋಕಾರ್ಡಿಯೋಗ್ರಾಮ್ ಸೇರಿದಂತೆ ಸಾಕಷ್ಟು ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.