ವಿಧಾನ ಸಭೆ ಚುನಾವಣಿಗೆ (Legislative Assembly Elections) ಇನ್ನು ಕೆಲ ದಿನಗಳು ಮಾತ್ರ ಬಾಕಿ ಇದೆ ಇದರ ನಡುವೆ ತೆಲುಗಿನ ಖ್ಯಾತ ನಿರ್ದೇಶಕ ರಾಜ್ಯಕ್ಕೆ ಏಂಟ್ರಿ ಕೊಡುತ್ತಾ ಇದ್ದಾರೆ ಯಾಕೆ ಅಂತಿರಾ ಇಲ್ಲಿದೆ ನೋಡಿ ಮಾಹಿತಿ ರಾಯಚೂರು ಜಿಲ್ಲೆಗೆ ಚುನಾವಣಾ ರಾಯಭಾರಿಯಾಗಿ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ (Famous director SS Rajamouli) ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ತಿಳಿಸಿದ್ದಾರೆ. ರಾಯಚೂರು: ರಾಯಚೂರು ಜಿಲ್ಲೆಗೆ ಚುನಾವಣಾ ರಾಯಭಾರಿಯಾಗಿ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ (District Collector Chandrasekhar Naik) ತಿಳಿಸಿದ್ದಾರೆ.

ಮೂಲತಃ ರಾಯಚೂರಿನ ಮಾನ್ವಿ ತಾಲೂಕಿನವರಾದ ರಾಜಮೌಳಿ ಅವರು ಮತದಾನ ಜಾಗೃತಿ ಕುರಿತು ಚುನಾವಣಾ ಸ್ವೀಪ್ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ವೀಡಿಯೋ ಕ್ಲಿಪ್ಗಳ ಮೂಲಕ ಜಾಗೃತಿ ಮೂಡಿಸುತ್ತಾರೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಮತದಾರರನ್ನು ಸೆಳೆಯಲು ಚಿತ್ರದುರ್ಗದ ಮತಗಟ್ಟೆಗಳಲ್ಲಿ ಅಳವಡಿಸಿರುವ ವಿನೂತನ ವಿಧಾನ ‘ವಾರ್ಲಿ ಕಲೆ’ ಚುನಾವಣಾ ಆಯೋಗ ಸೂಚಿಸಿದಂತೆ ರಾಜಮೌಳಿ ಅವರು ವಿಡಿಯೋ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ಇದರಲ್ಲಿ ಯಾವುದೇ ಪಕ್ಷಗಳಿಗೆ ಬೆಂಬಲಿಸುವಂತಹ ಸಂದೇಶ ಇರುವುದಿಲ್ಲ. ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ಕ್ರೀನ್ ರೈಟರ್ ಹಾಗೂ ಚಿತ್ರಸಂಭಾಷಣೆಗಾರರನ್ನು ಆಯ್ಕೆ ಮಾಡಲಾಗಿದೆ.