ವ್ಯಾಪಾರ, ಭಯ, ಆಮಿಷದ ಮೂಲಕ ಮತಾಂತರ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಾಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು; ವ್ಯಾಪಾರ, ಭಯ, ಆಮಿಷದ ಮೂಲಕ ಮತಾಂತರ ಮಾಡುವುದಕ್ಕೆ ಅವಕಾಶವಿಲ್ಲ. ಹೆದರಿಕೆ ಹುಟ್ಟಿಸಿ ಮತಾಂತರ ಮಾಡುವವರು ಭಯ ಪಡಬೇಕು. ಸ್ವ ಇಚ್ಛೆಯಿಂದ ಮತಾಂತರಗೊಳ್ಳುವರಿಗೆ ಕಾಯ್ದೆಯಿಂದ ತೊಡಕಿಲ್ಲ. ಮತಾಂತರ ನಿಷೇಧ ಕಾಯ್ದೆ ಅಂದರೆ ಅವರವರ ಮತದಲ್ಲಿ ಸುರಕ್ಷಿತವಾಗಿ ಮತಾಚರಣೆ ಮಾಡಲಿ ಎಂದಿದ್ದಾರೆ.
ಕಾಂಗ್ರೆಸ್ ದ್ವಿ ಮುಖ ನೀತಿ
1936 ರಲ್ಲಿ ಬ್ರಿಟೀಷ್ ಆಡಳಿತ ಇದ್ದಾಗ ರಾಯಪುರ ಮತ್ತು ಇತರೆ ಜಾಗದಲ್ಲಿ ರಾಜಮನೆತನ ಮತಾಂತರ ನಿಷೇದ ಕಾಯ್ದೆ ಜಾರಿಗೆ ತಂತು. ನೆಹರು ಪ್ರಧಾನಿಯಾಗಿದ್ದ ಸಮಯದಲ್ಲಿ ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಾರ್ಟಿಯೇ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದ್ರು. 1967/68 ರಲ್ಲಿ ಸಂಯುಕ್ತ ವಿಧಯಕ ದಳ ಮದುಪ್ರದೇಸದಲ್ಲಿ ಅಂದಿನ ಒಡಿಸ್ಸಾ ಕಾಂಗ್ರೆಸ್ ಆಡಳಿತದಲ್ಲಿಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಆದರೆ ಈಗ ನಾವು ಆ ನೀಡಿಯನ್ನು ಜಾರಿ ಮಾಡಲು ಮುಂದಾದರೆ ಕಾಂಗ್ರೆಸ್ ದ್ವಿ ಮುಖ ನೀತಿ ತೋರುತ್ತಿದೆ. ಕಾಂಗ್ರೆಸ್ಸಿಗೆ ಸಮಾಜ ಹಿತ, ರಾಷ್ಟ್ರಹಿತ ಎರಡರ ಕಾಳಜಿಯಿಲ್ಲ ಎಂದು ಹೇಳಿದ್ದಾರೆ.
ಜೈನ್, ಬೌದ್ಧ, ಸಿಖ್ ಧರ್ಮಗಳಿಗೆ ನಿಬಂಧನೆಗಳಿಲ್ಲ
ಜೈನ್, ಬೌದ್ಧ, ಸಿಖ್ ಧರ್ಮಗಖಿಗೆ ನಿಬಂದನೆಗಳು ಹಾಕಿಲ್ಲ ಯಾಕೆ ಅಂದರೆ ಇದ್ಯಾವುದು ನಮ್ಮ ಮೂಲ ಸಂಸ್ಕೃತಿಯನ್ನು ಬದಲಾಯಿಸಲ್ಲ. ಹಿಂದೂ ಇದ್ದವ ಬೌದ್ಧ ಆಗಬಹುದು, ಬೌದ್ಧ ಇದ್ದವ ಮೈಷ್ಣವ ಆಗಬಹುದು, ಮೈಷ್ಣವ ಲಿಂಗಾಯತನಾಗಬಹುದು, ಲಿಂಗಾಯತ ಜೈನನಾಗಬಹುದು ಇದ್ಯಾವುದು ನಮ್ಮ ಮೂಲ ಸಂಸ್ಕೃತಿಯನ್ನು ಬದಲಾಯಿಸಲ್ಲ. ಮತಾಂತರ ನಿಷೇಧ ಕಾಯ್ದೆಯಲ್ಲಿ ಈಗಲೂ ಇದಕ್ಕೆ ಜಾಗ ಇದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಇಸ್ಲಾಮಿಗೆ ಪರಿವರ್ತನೆಯಾದ್ರೆ ಅಂಬೇಡ್ಕರ್, ಬುದ್ಧನಿಗೂ ಜಾಗವಿಲ್ಲ
ಹಿಂದೂಗಳು ಮುಸ್ಲಿಮರಾಗಿ ಮತಾಂತರವಾದ್ರೆ ಅಂಬೇಡ್ಕರ್, ಬೌದ್ಧ ರಿಗೆ ಎಲ್ಲಿ ಜಾಗ ಸಿಗುತ್ತೆ. ಹಿಂದೂಗಳು ಬೌದ್ಧರು, ವೈಷ್ಣವರಾದ್ರೆ ಅಂಬೇಡ್ಕರ್, ರಾಮನಿಗೆ ಜಾಗ ಸಿಗುತ್ತೆ. ಜೈನರ ಮನೆಯಲ್ಲಿ ರಾಮ, ಗಣಪತಿಗೆ ಜಾಗ ಇದೆ. ಇಸ್ಲಾಮಿಗೆ ಪರಿವರ್ತನೆಯಾದ್ರೆ ಅಂಬೇಡ್ಕರ್, ಬುದ್ಧನಿಗೂ ಜಾಗ ಸಿಗಲ್ಲ ಎಂದು ಹೇಳಿದ್ದಾರೆ. ಮತಾಂತರ ಮತಗಳ ಗಳಿಕೆಗೆ ಇರೋ ಸಾಧನ ಅಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಇತಿಹಾಸ ಓದಲಿ
ಕಾಂಗ್ರೆಸ್ ನಮ್ದು ಗೋಡ್ಸೆ ಹಿಂದೂತ್ವ ಅಲ್ಲ, ಗಾಂಧೀಜಿ ಹಿಂದುತ್ವ ಅಂತಾರೆ. ಮತಾಂತರದ ಬಗ್ಗೆ ಗಾಂಧಿ ಏನು ಹೇಳಿದ್ರು ಅಂತ ಕಾಂಗ್ರೆಸ್ ಇತಿಹಾಸ ಓದಲಿ. ಸಿದ್ದರಾಮಯ್ಯನವರೇ ನೀವು ಒಮ್ಮೆ ಇತಿಹಾಸ ಓದಿ. ಮತಾಂತರ ದೇಶಾಂತರಕ್ಕೆ ಸಮ ಅಂತ ಗಾಂಧಿಜೀ ಹೇಳಿದ್ದಾರೆ. ಈಗ ಮತಾಂತರ ನಿಷೇಧ ಕಾಯ್ದೆ ಬೇಡ ಅನ್ನೋರೇ ತನ್ನಿ ಅಂತಿದ್ದಾರೆ ಎಂದು ಕುಟುಕಿದ್ದಾರೆ.