• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರುಗಳ ಸ್ಥಬ್ದಚಿತ್ರ ತಿರಸ್ಕರಿಸಿದವರನ್ನು ನಾವು ಯಾಕೆ ಪುರಸ್ಕರಿಸುತ್ತಿದ್ದೇವೆ?

ದಿನೇಶ್ ಅಮೀನ್ ಮಟ್ಟು by ದಿನೇಶ್ ಅಮೀನ್ ಮಟ್ಟು
January 18, 2022
in Top Story, ಅಭಿಮತ
0
ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರುಗಳ ಸ್ಥಬ್ದಚಿತ್ರ ತಿರಸ್ಕರಿಸಿದವರನ್ನು ನಾವು ಯಾಕೆ ಪುರಸ್ಕರಿಸುತ್ತಿದ್ದೇವೆ?
Share on WhatsAppShare on FacebookShare on Telegram

ADVERTISEMENT

ಗಣರಾಜ್ಯೋತ್ಸವದ ಪರೇಡ್ ನಲ್ಲಿ ನಾರಾಯಣ ಗುರುಗಳ ಮೂರ್ತಿ ಇದ್ದ ಸ್ಥಬ್ದಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಇದನ್ನು ಯಾರೂ ವಿರೋಧಿಸಬೇಕಾಗಿಲ್ಲ, ಬದಲಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಆಡಳಿತಾರೂಢ ಬಿಜೆಪಿಯ ಪ್ರಾಮಾಣಿಕ ನಡವಳಿಕೆಗಾಗಿ ಎಲ್ಲರೂ ಅಭಿನಂದಿಸಬೇಕು.

ಇದೇ ರೀತಿಯ ಪ್ರಾಮಾಣಿಕತೆಯಿಂದ ಬುದ್ದ,ಬಸವ, ಅಂಬೇಡ್ಕರ್, ಕನಕ, ಕಬೀರ, ವಾಲ್ಮೀಕಿಯೂ ಸೇರಿದಂತೆ ಎಲ್ಲ ಮಹಾ ಪುರುಷರ ಬಗೆಗಿನ ತಮ್ಮ ವಿರೋಧವನ್ನು ಬಿಜೆಪಿ ಮತ್ತು ಅದರ ಸರ್ಕಾರಗಳು ಮುಕ್ತವಾಗಿ ದಾಖಲಿಸಬೇಕು ಎಂದು ನಾವೆಲ್ಲರೂ ಕೂಡಿ ಒತ್ತಾಯಿಸಬೇಕು.

ಸಾವರ್ಕರ್, ಗೋಲ್ವಾಲ್ಕರ್, ಹೆಗಡೆವಾರ್ , ಗೋಡ್ಸೆ ಸೇರಿದಂತೆ ರಾಜಕೀಯ ಹಿಂದುತ್ವದ ಪ್ರಚಾರಕರ ವಿರುದ್ದ ನಮ್ಮ ವಿರೋಧವನ್ನು ನಾವು ಹೇಗೆ ಮುಕ್ತವಾಗಿ ಮಂಡಿಸುತ್ತೇವೆಯೋ ಹಾಗೆ ಅವರು ಆತ್ಮವಂಚನೆ ಮಾಡಿಕೊಳ್ಳದೆ ನಾವು ಆದರ್ಶಪ್ರಾಯರೆಂದು ತಿಳಿದುಕೊಂಡ ಮತ್ತು ಅವರು ಮನಸ್ಸಿನೊಳಗೆ ವಿರೋಧಿಸುತ್ತಿರುವ ಮಹಾಪುರುಷರ ವಿರುದ್ಧದ ತಮ್ಮ ಅಭಿಪ್ರಾಯವನ್ನು ಪ್ರಾಮಾಣಿಕತೆಯಿಂದ ಮುಕ್ತವಾಗಿ ಹೇಳಿಕೊಳ್ಳಬೇಕು.

ನಡೆಯಲಿ ಇಂತಹದ್ದೊಂದು ಸೈದ್ದಾಂತಿಕ ಸಂಘರ್ಷ. ಗಟ್ಟಿಯಾಗಿರುವುದು ಉಳಿಯುತ್ತದೆ, ಉಳಿದದ್ದು ಇತಿಹಾಸದ ಕಸದ ಬುಟ್ಟಿಗೆ ಸೇರುತ್ತದೆ. ಹೊಡೆದು, ಬಡಿದು, ಕಡಿದು ಯಾವ ಸಿದ್ದಾಂತವನ್ನೂ ನೆಲೆ ಗೊಳಿಸಲಾಗುವುದಿಲ್ಲ.

ಇಂತಹದ್ದೊಂದು ದಾರಿಯನ್ನು ಹೇಳಿಕೊಟ್ಟವರೇ ನಾರಾಯಣ ಗುರುಗಳು. ಅವರು ತನ್ನ ಜನರಿಗೆ ಉಳಿದ ಸಮಾಜ ಸುಧಾರಕರಂತೆ ದೇವಸ್ಥಾನದೊಳಗೆ ಪ್ರವೇಶ ನೀಡಿ ಎಂದು ಅಂಗಲಾಚಲಿಲ್ಲ. ಅಲ್ಲಿಯೇ ಇದ್ದ ನದಿಯೊಳಗೆ ಧುಮುಕಿ ಶಿವಲಿಂಗವನ್ನು ಎದೆಗಪ್ಪಿಕೊಂಡು ಬಂದು ಅರವಿಪುರಂನಲ್ಲಿ ಸ್ಥಾಪಿಸಿ ಇದು ನಿಮ್ಮ ಶಿವ ಎಂದು ತನ್ನ ಜನರಿಗೆ ಹೇಳಿದರು.

ಪ್ರಶ್ನಿಸಿದ ಪುರೋಹಿತರಿಗೆ ‘ನಿಮ್ಮ ಶಿವ ನಿಮ್ಮಲ್ಲಿಯೇ ಇದ್ದಾನೆ, ಇದು ಈಳವರ ಶಿವ. ನೀವು ನಿಮ್ಮ ಪಾಡಿಗೆ ನಿಮ್ಮ ದೇವರನ್ನು ಪೂಜಿಸಿ, ನನ್ನ ಜನ ಅವರು ನಂಬಿದ ದೇವರನ್ನು ಪೂಜಿಸುತ್ತಾರೆ.. ’’ ಎಂದು ಬಾಯಿ ಮುಚ್ಚಿಸಿದ್ದರು.

ಅವರು ದೇವಾಲಯದೊಳಗೆ ಜನರನ್ನು ನುಗ್ಗಿಸಲಿಲ್ಲ, ದೇವರಮೂರ್ತಿಯನ್ನು ಒಡೆದುಹಾಕಲಿಲ್ಲ, ಅರ್ಚಕರನ್ನು ಪ್ರಶ್ನಿಸಲೂ ಇಲ್ಲ.. ಇದು ಯುದ್ಧದಲ್ಲಿ ಶಸ್ತ್ರ ಪ್ರಯೋಗ ಮಾಡದೆ ಶತ್ರುವನ್ನು ನಿಶಸ್ತ್ರಗೊಳಿಸುವ ಅಪರೂಪದ ಹೋರಾಟ.

ತಿರುವಾಂಕೂರು ಸಂಸ್ಥಾನದಲ್ಲಿ ಇಂದು ಕೇಂದ್ರ ಸರ್ಕಾರದಲ್ಲಿರುವಂತಹರದ್ದೇ ಪ್ರಭುತ್ವ ಇತ್ತು. ಅವರೊಡನೆ ನಾರಾಯಣ ಗುರುಗಳು ಸಂಘರ್ಷಕ್ಕಿಳಿದಿರಲಿಲ್ಲ. ವೈಕಂ ನಲ್ಲಿ ದೇವಸ್ಥಾನದ ಎದುರಿನ ಹಾದಿಯಲ್ಲಿ ನಡೆದುಕೊಂಡು ಹೋಗುವ ಸ್ವಾತಂತ್ರ್ಯಕ್ಕಾಗಿ ನಡೆದ ಸತ್ಯಾಗ್ರಹದ ಬಗ್ಗೆಯೂ ನಾರಾಯಣ ಗುರುಗಳ ವಿರೋಧ ಇತ್ತು. ‘’ಅವರು ಕಟ್ಟಿಕೊಂಡ ದೇವಸ್ಥಾನ, ಅದರ ಎದುರಿನ ಹಾದಿಯನ್ನು ಕಟ್ಟಿಕೊಂಡು ನೀವ್ಯಾಕೆ ಬಡಿದಾಡಿಕೊಳ್ಳುತ್ತೀರಿ,ನಿಮ್ಮ ದೇವಸ್ಥಾನವನ್ನು ನೀವೇ ಕಟ್ಟಿಕೊಳ್ಳಿ’’, ಎಂದು ಹೇಳುತ್ತಿದ್ದರು ನಾರಾಯಣ ಗುರುಗಳು.

ಆದರೆ ನಾರಾಯಣ ಗುರುಗಳು ಕಟ್ಟಿದ ದೇವಸ್ಥಾನಗಳನ್ನಷ್ಟೇ ಉಳಿಸಿಕೊಂಡಿರುವ ಅವರ ಅನುಯಾಯಿಗಳು ಅವರು ಹೇಳಿಕೊಟ್ಟಿರುವ ಚಿಂತನೆಯ ಪಾಠವನ್ನು ಮರೆತುಬಿಟ್ಟಿದ್ದಾರೆ.

ಮಂಗಳೂರಿನ ಕುದ್ರೋಳಿಯಲ್ಲಿ ಅಸ್ಪೃಶ್ಯ ಬಿಲ್ಲವರಿಗಾಗಿ ನಾರಾಯಣ ಗುರುಗಳೂ ಬಂದು ಸ್ಥಾಪಿಸಿದ್ದ ದೇವಸ್ಥಾನವನ್ನು ಹತ್ತಾರು ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾಗಿದೆ. ಆದರೆ ಬಿಲ್ಲವರು ಧಾರ್ಮಿಕ ಪ್ರವಾಸಕ್ಕೆ ಹೋದ ರೀತಿ ಅಲ್ಲಿಗೆ ಹೋಗಿ ಕೊಂಡಾಡಿ ಸೆಲ್ಪಿ ತೆಗೆಸಿಕೊಂಡು ಬರುತ್ತಾರೆ. ಅಲ್ಲಿಂದ ಉಡುಪಿ ಮಠ, ಕಟೀಲು, ಧರ್ಮಸ್ಥಳಗಳಿಗೆ ಹೋಗಿ ತಾವು ಕಷ್ಟ ಪಟ್ಟು ದುಡಿದ ದುಡ್ಡನ್ನು ಸುರಿದು ಬರುತ್ತಾರೆ.

ಉಡುಪಿ ಮಠದ ಸ್ವಾಮಿಗಳು, ಕಟೀಲಿನ ಆಸ್ರಣ್ಣರು ಮತ್ತು ಧರ್ಮಸ್ಥಳದ ಹೆಗಡೆಯವರು ಇಲ್ಲವೆ ಅವರ ಸಮುದಾಯದವರು ಎಂದಾದರೂ ಕುದ್ರೋಳಿ ದೇವಸ್ಥಾನಕ್ಕೆ ಭಕ್ತರಂತೆ ಬಂದು ಕೈಮುಗಿದು ನಾರಾಯಣ ಗುರುಗಳಿಗೆ ನಮಿಸಿ ಹೋಗಿದ್ದಾರೆಯೇ?

ಮತ್ತೆ ಯಾಕೆ ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರುಗಳ ಸ್ಥಬ್ದಚಿತ್ರವನ್ನು ತಿರಸ್ಕರಿಸಿದ್ದಾರೆ ಎಂದು ಗೋಳು ಹೋಯ್ಕೊಳ್ತೀರಿ? ಅವರು ನಾರಾಯಣ ಗುರುಗಳನ್ನು ಹಿಂದೆಯೂ ತಿರಸ್ಕರಿಸಿದ್ದರು, ಮುಂದೆಯೂ ತಿರಸ್ಕರಿಸುತ್ತಾರೆ. ಅವರನ್ನು ವಿರೋಧಿಸುವುದನ್ನು ಬಿಟ್ಟು ನಾರಾಯಣ ಗುರುಗಳ ಅನುಯಾಯಿಗಳು ನಿಜವಾಗಿ ತಮ್ಮನ್ನು ತಾವೇ ಪ್ರಶ್ನೆ ಮಾಡಬೇಕಾಗಿದೆ. ನಾರಾಯಣ ಗುರುಗಳನ್ನು ತಿರಸ್ಕರಿಸಿದವರನ್ನು ನಾವು ಯಾಕೆ ಪುರಸ್ಕರಿಸುತ್ತಿದ್ದೇವೆ? ಎಂದು.

ಇದಕ್ಕಾಗಿಯೇ ಕುವೆಂಪು “…ಹುಲಿಗೆ ಗುಂಡು ಹೊಡೆಯುವ ಮೊದಲು ನಿಮ್ಮ ಮೆದುಳಿಗೆ ಹೊಡೆಯಬೇಕು..” ಹೇಳಿದ್ದು.

Tags: ಕರ್ನಾಟಕಗಣರಾಜ್ಯೋತ್ಸವ ದಿನದಿನೇಶ್ ಅಮೀನ್ ಮಟ್ಟುನಾರಾಯಣ ಗುರುಮಂಗಳೂರು
Previous Post

ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ಸುಗ್ಗಿ; ವೇತನ ಹೆಚ್ಚಳದ ಭರವಸೆ ನೀಡಿದ ರಾಜ್ಯ ಸರ್ಕಾರ

Next Post

ಉತ್ತರಪ್ರದೇಶ ಚುನಾವಣೆ ಜಾತಿ ಸಮೀಕರಣ ; ಅಲ್ಪಸಂಖ್ಯಾತ ಮತಗಳೇ ನಿರ್ಣಾಯಕ

Related Posts

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ
Top Story

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

by ಪ್ರತಿಧ್ವನಿ
October 23, 2025
0

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ಪ್ರದೋಶ್ ತಂದೆ ಸುಬ್ಬರಾವ್ ವಿಧಿವಶರಾಗಿದ್ದಾರೆ. ಹೀಗಾಗಿ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪ್ರದೋಶ್ ಗೆ ಕೋರ್ಟ್ ಅನುಮತಿ ನೀಡಿದೆ.ತಂದೆ ನಿಧನರಾದ...

Read moreDetails
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

October 23, 2025
ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

October 23, 2025
Next Post
ಉತ್ತರಪ್ರದೇಶ ಚುನಾವಣೆ ಜಾತಿ ಸಮೀಕರಣ ; ಅಲ್ಪಸಂಖ್ಯಾತ ಮತಗಳೇ ನಿರ್ಣಾಯಕ

ಉತ್ತರಪ್ರದೇಶ ಚುನಾವಣೆ ಜಾತಿ ಸಮೀಕರಣ ; ಅಲ್ಪಸಂಖ್ಯಾತ ಮತಗಳೇ ನಿರ್ಣಾಯಕ

Please login to join discussion

Recent News

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ
Top Story

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

by ಪ್ರತಿಧ್ವನಿ
October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ
Top Story

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

by ಪ್ರತಿಧ್ವನಿ
October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ
Top Story

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

by ಪ್ರತಿಧ್ವನಿ
October 23, 2025
ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ
Top Story

ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

by ಪ್ರತಿಧ್ವನಿ
October 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

October 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!