ಪೋಸ್ಟರ್, ಫರ್ಸ್ಟ್ ಲುಕ್ ಮೂಲಕ ಈಗಾಗಲೇ ಜನಮನ ಗೆದ್ದಿರುವ ಸ್ಪೂಕಿ ಕಾಲೇಜ್ ಈಗಾಗಲೇ ಸಿನಿ ರಸಿಕರ ಕುತೂಹಲವನ್ನ ಹೆಚ್ಚಿಸದೆ. ಇನ್ನು ಈ ಚಿತ್ರತಂಡದಿಂದ ಹೊಸ ಅಪ್ಡೇಟ್ ಒಂದು ಹೊರ ಬಿದಿದ್ದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ಪದ್ಮವಿಭೂಷಣ ಡಾ || ರಾಜ್ಕುಮಾರ್ ಅಭಿನಯ್ ವೀರ ಕೇಸರಿ ಚಿತ್ರದ ಮೆಲ್ಲುಸಿರೆ ಸವಿಗಾನ ಹಾಡನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಭೂಷಣ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿರುವ ಈ ಹಾಡಿಗೆ ಏಕ್ ಲವ್ಯಾ ಖ್ಯಾತಿಯ ರೀಷ್ಮಾ ನಾಣಯ್ಯ ಹೆಜ್ಜೆ ಹಾಕಿದ್ದಾರೆ.
ಈ ಕುರಿತು ಮಾತನಾಡಿರುವ ನಿರ್ದೇಶಕ ಭರತ್ ನಾವು ಬಲವಂತವಾಗಿ ತುರುಕಿಲ್ಲ. ಚಿತ್ರದ ಕಥೆಯನ್ನು ಹೇಳುವ ಹಾಡೊಂದು ಬೇಕಿತ್ತು. “ಮೆಲ್ಲುಸಿರೆ ಸವಿಗಾನ” ಹಾಡನ್ನು ಕೇಳಿದಾಗ, ಈ ಅದ್ಭುತ ಹಾಡು ಸೂಕ್ತ ಎನಿಸಿತು. ಹಾಗಾಗಿ ಈ ಹಾಡನ್ನು ಆಯ್ಕೆ ಮಾಡಿಕೊಂಡೆವು. ದಾಂಡೇಲಿಯ ಅರಣ್ಯ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಅದ್ಭುತ ಸೆಟ್ ನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. 250 ಕ್ಕೂ ಅಧಿಕ ತಂತ್ರಜ್ಞರ ಪಾಲ್ಗೊಳ್ಳುವಿಕೆಯಲ್ಲಿ ಈ ಹಾಡು ಅದ್ದೂರಿಯಾಗಿ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಹಾಡಿಗೆ ಹೆಜ್ಜೆ ಹಾಕಿದ ಬಗ್ಗೆ ತಮ್ಮ ಅನುಭವ ಹಂಚಿಕೊಂಡ ರೀಷ್ಮಾ ನಾನು ಈ ಹಾಡಿನಲ್ಲಿ ಅಭಿನಯಿಸುವುದಕ್ಕು ಮುನ್ನ ಸಾಕಷ್ಟು ತಯಾರಿ ಮಾಡಿಕೊಂಡಿದೆ ಅಣ್ಣಾವ್ರು ಅಭಿನಯಿಸಿದ್ದ ಜನಪ್ರಿಯ ಹಾಡಿಗೆ ನಾನು ನೃತ್ಯ ಮಾಡಿರುವುದು ಖುಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರೀಮಿಯರ್ ಪದ್ಮಿನಿ ಖ್ಯಾತಿಯ ವಿವೇಕ್ ಸಿಂಹ ನಾಯಕನಾಗಿ ನಟಿಸಿದರೆ. ದಿಯಾ ಖ್ಯಾತಿಯ ಖುಷಿ ರವಿ ನಾಯಕಿಯಾಗಿದ್ದಾರೆ. ಅಜಯ್ ಪೃಥ್ವಿ, ಹನುಮಂತೇ ಗೌಡ, ಕೆ.ಎಸ್.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಮಣಕೊಪ್ಪ ಹಾಗೂ ಕಾಮಿಡಿ ಕಿಲಾಡಿಗಳು ಶೋನ ಜನಪ್ರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಇನ್ನು ಚಿತ್ರಕ್ಕೆ ಭರತ್.ಜಿ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ ಮಾಡಿದ್ದು ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ರಂಗಿತರಂಗ, ಅವನ್ನೇ ಶ್ರೀಮನ್ನಾರಾಯಣ ಖ್ಯಾತಿಯ ಹೆಚ್.ಕೆ.ಪ್ರಕಾಶ್ ಬಂಡವಾಳ ಹೂಡಿದ್ದಾರೆ.