ಒಂದು ಕಾಲದಲ್ಲಿ ಕುಚಿಕುಗಳಾಗಿ ರಾಜಕೀಯದಲ್ಲಿ ಪ್ರಾಬಲ್ಯ ಮೆರೆದಿದ್ದ ಜನಾರ್ಧನ ರೆಡ್ಡಿ (Janardana reddy) ಹಾಗೂ ಶ್ರೀರಾಮುಲು (Sri ramulu) ರಾಜಕೀಯ ವಿಪ್ಲವಗಳ ಕಾರಣ ಹಾವು-ಮುಂಗೋಸಿಯಂತೆ ಕಚ್ಚಾಡಿಕೊಂಡಿದ್ದರು. ಇದು ರಾಜಕೀಯವಾಗಿಯೂ ಬಿಜೆಪಿಗೆ (Bjp) ದೊಡ್ಡ ಪೆಟ್ಟು ಕೊಟ್ಟಿತ್ತು. ಹೀಗಾಗಿ ಬಳ್ಳಾರಿ ಮೇಲಿನ ಹಿಡಿತವನ್ನು ಬಿಜೆಪಿ ಕಳೆದುಕೊಂಡಿತ್ತು.

ಹೀಗೆ ಮತ್ತೆ ಯಾವತ್ತೂ ಒಂದಾಗಲ್ಲ ಎಂಬ ಶಪತವನ್ನು ಮಾಡಿದ್ದ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಇದೀಗ ಮತ್ತೆ ಒಂದಾಗಿದ್ದಾರೆ. ಹೈಕಮಾಂಡ್ ನಾಯಕರ ಸಮ್ಮುಖದಲ್ಲಿ ಸಂಧಾನಕ್ಕೆ ಪ್ಲಾನ್ ಮಾಡಿದ್ದ ಕೇಂದ್ರ ಸಚಿವ ವಿ.ಸೋಮಣ್ಣ, ಇಬ್ಬರನ್ನ ಒಂದು ಮಾಡೋದ್ರಲ್ಲಿ ಯಶಸ್ವಿಯಾಗಿದ್ದಾರೆ.

ಇವರಿಬ್ಬರ ಮುನಿಸಿನಿಂದ ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಕಷ್ಟವಾಗಿತ್ತು. ಹೀಗಾಗಿ ಇಬ್ಬರೂ ನಾಯಕರನ್ನ ಒಗ್ಗೂಡಿಸುವ ವಿಚಾರದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ದೆಹಲಿಗೆ ಮಧ್ಯಸ್ಥಿಕೆ ವಹಿಸಿ ಬನ್ನಿ ಮಾತಾಡೋಣ ಎಂದಿದ್ದರು.

ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೇ ಅಲರ್ಟ್ ಆದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ರಾಜ್ಯದಲ್ಲೇ ಈ ಇಬ್ಬರು ನಾಯಕರ ಮಧ್ಯೆ ಸಂಧಾನ ಮಾಡುವ ಮೂಲಕ ರೆಡ್ಡಿ ರಾಮುಲೂ ಅವರನ್ನು ಮತ್ತೆ ಒಂದಾಗುವಂತೆ ಮಾಡಿದ್ದಾರೆ.