ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಓದಿರುವವರಿಗೆ ಉದ್ಯೋಗಗಳ ಕೊರತೆ ಇದೆ. ಈ ಎರಡು ಸಮಸ್ಯೆಗಳಿಗೆ ಪರಿಹಾರ ನೀಡಲು ಮುಂದಾಗಿರುವ ಶಿಕ್ಷಣ ಇಲಾಖೆ ಸಿಹಿ ಸುದ್ದಿ ನೀಡಿದೆ. ಶಿಕ್ಷಣ ಗುಣಮಟ್ಟ ಏರಿಸಲು ಹಾಗೂ ವಿದ್ಯಾವಂತರಿಗೆ ಉದ್ಯೋಗಾವಕಾಶ ಒದಗಿಸಲು ಪಣತೊಟ್ಟಿರುವ ಸರ್ಕಾರ ಶಿಕ್ಷಕರ ನೇಮಕಾತಿಗೆ ಮುಂದಾಗಿದೆ.
ಶಿಕ್ಷಕರ ಕೊರತೆ ನೀಗಿಸಲು ಮುಂದಾದ ಶಿಕ್ಷಣ ಇಲಾಖೆ!
ಕರ್ನಾಟಕದಲ್ಲಿ ಒಂದುಕಡೆ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದಿದ್ದು, ಮಕ್ಕಳ ಭವಿಷ್ಯ ಕುಂಠಿತ ಒಂದು ಕಡೆಯಾದರೆ, ಇನ್ನೊಂದೆಡೆ ವಿದ್ಯೆಯಿದ್ದರು, ಎಲ್ಲಾ ಅರ್ಹತೆಯಿದ್ದರೂ ಉದ್ಯೋಗ ಧಕ್ಕದೆ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆಯು ಹೆಚ್ಚಿದೆ. ಇದಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ಶಿಕ್ಷಣ ಇಲಾಖೆ, ಸಾಕಷ್ಟು ಬದಲಾವಣೆ ಮಾಡಿ ಸರ್ಕಾರಿ ಶಿಕ್ಷಕರ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದೆ.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8ನೇ ತರಗತಿ) 15,000 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಶಿಕ್ಷಣ ಸಚಿವ ಒಪ್ಪಿಕೊಂಡಿದ್ದಾರೆ. ಪ್ರಸುತ್ತ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ವಿಭಾಗಕ್ಕೆ 5000 ಹುದ್ದೆಗಳು ಸೇರಿ ಒಟ್ಟು 15,000 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಶಿಕ್ಷಕರ ಕೊರತೆ ನೀಗಿಸಲು ಜೊತೆಗೆ ಈ ಬಾರಿ ವಿಶೇಷವಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬಿಎಡ್, ಟಿಇಟಿ ಮಾಡಿದವರಿಗೆ ಹಾಗೂ ಮಂಗಳಮುಖಿಯರಿಗೂ ಪ್ರತಿ ಪ್ರವರ್ಗದಲ್ಲಿ 1% ರಷ್ಟು ಸಿಇಟಿ ಪರೀಕ್ಷೆಗೆ ಅವಕಾಶ ಇರಲಿದೆ.
ಮಾರ್ಚ್ 21ರಂದು ನೇಮಕಾತಿ ಅಧಿಸೂಚನೆ ಹೊರಬೀಳಲಿದೆ ಅಭ್ಯರ್ಥಿಗಳು ಆನ್ ಲೈನ್ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮಾರ್ಚ್ 23ಕ್ಕೆ ಆರಂಭಗೊಂಡು ಏಪ್ರಿಲ್ 22ರ ಒಳಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಿರುವ ಕೊನೆಯ ದಿನಾಂಕ. ಸ್ಪರ್ಧಾತ್ಮಕ ಪರೀಕ್ಷೆ ಮೇ 21 ಹಾಗೂ 22ಕ್ಕೆ ನಡೆಯಲಿದೆ. ಆಂಗ್ಲಭಾಷೆ, ಗಣಿತ ಮತ್ತು ವಿಜ್ಞಾನ – ಜೀವವಿಜ್ಞಾನ, ಸಮಾಜಪಾಠಗಳು ಶಿಕ್ಷಕರ ಹುದ್ದೆಗಳಿಗೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಒಟ್ಟು 400 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, ಸಾಮಾನ್ಯ ಜ್ಞಾನ 150, ವಿಷಯವಾರು 150, ಯಾವ ಭಾಷೆಗೆ ಅರ್ಜಿ ಹಾಕಿರುತ್ತಾರೋ ವಿಷಯ 100 ಅಂಕ ನಿಗದಿ ಮಾಡಲಾಗಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬಿಎಡ್, ಟಿಇಟಿ ಮಾಡಿದ್ದರೆ ಪರೀಕ್ಷೆಗೆ ಅವಕಾಶ ನೀಡಿದ್ದೂ, ಇದೇ ಮೊದಲ ಬಾರಿಗೆ ಮಂಗಳ ಮುಖಿಯರಿಗೂ ಪ್ರತಿ ಪ್ರವರ್ಗದಲ್ಲಿ ಶೇ. 1 ರಷ್ಟು ಸಿಇಟಿ ಪರೀಕ್ಷಗೆ ಅವಕಾಶ ಕೊಡಲಾಗಿದೆ. 6 ರಿಂದ 8 ತಿಂಗಳ ಒಳಗೆ ಶಿಕ್ಷಕರ ಹುದ್ದೆ ಭರ್ತಿಯಾಗಲಿಗಿದೆ. ಇನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೇಲ್ವಿಚಾರಣೆಯಲ್ಲಿ ಪರೀಕ್ಷೆ ನಡೆಯಲಿದೆ.

ಇನ್ನೂ ಕೋವಿಡ್ ಕಾರಣಕ್ಕೆ ಈ ಸಲ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಪರಿಶಿಷ್ಟ ಜಾತಿ, ವರ್ಗ, ಪ್ರವರ್ಗ-1, ವಿಕಲಚೇತನರಿಗೆ ಈ ಹಿಂದೆ 45 ವರ್ಷ ಇದ್ದ ವಯೋಮಿತಿಯನ್ನ 47ಕ್ಕೆ ಏರಿಸಲಾಗಿದೆ. ಇನ್ನು ಪ್ರವರ್ಗ 2ಎ, 2ಬಿ, 3ಎ ಮತ್ತು 3 ಬಿ 43 ವರ್ಷ ಇದ್ದಿದ್ದು 45ಕ್ಕೆ ಹಾಗೂ ಸಾಮಾನ್ಯ ವರ್ಗದವರು 40 ವರ್ಷದಿಂದ 42 ವರ್ಷಕ್ಕೆ ಏರಿಕೆ ಮಾಡಲಾಗಿದೆ.
ಜೀವವಿಜ್ಞಾನ ಶಿಕ್ಷಕ (Biological Science) ಹುದ್ದೆಗೆ ಅವಕಾಶ ಇದ್ದು, ಬಿ.ಎಸ್.ಸಿ. ಪದವಿಯಲ್ಲಿ ರಸಾಯನಶಾಸ್ತ್ರ ಕಡ್ಡಾಯವಾಗಿದ್ದು, ಈ ವಿಷಯದೊಂದಿಗೆ ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ ತಳಿಶಾಸ್ತ್ರ, ಸೂಕ್ಷ್ಮಜೀವಿಶಾಸ್ತ್ರ ಜೈವಿಕ ತಂತ್ರಜ್ಞಾನ/ಪರಿಸರ ವಿಜ್ಞಾನ/ ರೇಷ್ಮೆ ಕೃಷಿ ವಿಷಯಗಳನ್ನು ಐಚ್ಛಿಕವಾಗಿ ಅಧ್ಯಯನ ಮಾಡಿದ ಅಭ್ಯರ್ಥಿಗಳಿಗೆ ಹೊಸದಾಗಿ ಅವಕಾಶ ನೀಡಲಾಗಿದೆ. ಹಾಗೇ ಗಣಿತ ಮತ್ತು ವಿಜ್ಞಾನ ಶಿಕ್ಷಕ ಹುದ್ದೆಗೆ ನಿಗದಿಪಡಿಸಲಾಗಿದ್ದ ವಿಷಯ ಸಮೂಹಕ್ಕೆ ಹೆಚ್ಚುವರಿ ವಿಷಯಗಳ ಸೇರ್ಪಡೆ ಮಾಡಲಾಗಿದೆ. ಒಟ್ಟಿನಲ್ಲಿ ಶಿಕ್ಷಣ ಇಲಾಖೆ ಶಿಕ್ಷಕರ ನೇಮಕಾತಿಗೆ ಮುಂದಾಗಿದ್ದು, ಮಕ್ಕಳಿಗೆ ಶಿಕ್ಷಣ ಭದ್ರ ಬುನಾದಿ ಆಗಲಿದೆ.