• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Energy Minister KJ George: ರಾಜ್ಯದಲ್ಲಿ ನಿನ್ನೆ ದಾಖಲೆಯ 143 ಮಿಲಿಯನ್ ಯೂನಿಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ

ಪ್ರತಿಧ್ವನಿ by ಪ್ರತಿಧ್ವನಿ
August 19, 2025
in Top Story, ಅಂಕಣ, ಇದೀಗ, ಕರ್ನಾಟಕ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ, ಸರ್ಕಾರಿ ಗೆಜೆಟ್
0
Share on WhatsAppShare on FacebookShare on Telegram
  • ರಾಜ್ಯದ ನವೀಕರಿಸಬಹುದಾದ ಇಂಧನದ ಪಾಲು ಶೇ.75-ಶೇ.85
  • ಉಷ್ಣ, ಜಲ ವಿದ್ಯುತ್‌ನಂಥ ಸಾಂಪ್ರದಾಯಿಕ ಇಂಧನ ಅವಲಂಬನೆ ಕಡಿತ

ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನದ ಪಾಲು ಪ್ರಸ್ತುತ ಶೇ.75 ರಿಂದ ಶೇ.85ಕ್ಕೆ ಏರಿದ್ದು, ಆಗಸ್ಟ್‌ 18ರಂದು ನವೀಕರಿಸಬಹುದಾದದ ಇಂಧನ ಮೂಲಗಳಿಂದ 143 ಮಿಲಿಯನ್‌ ಯೂನಿಟ್‌ ವಿದ್ಯುತ್‌ ಉತ್ಪಾದನೆಯಾಗುವ ಮೂಲಕ ಹೊಸ ದಾಖಲೆ ಬರೆಯಲಾಗಿದೆ.

ADVERTISEMENT
Assembly Session:ಧರ್ಮಸ್ಥಳ ಕೇಸ್ ಸಿದ್ದರಾಮಯ್ಯನ ಪರ ಡಿಕೆಶಿ  #pratidhvani

ಇತ್ತೀಚಿನ ದಿನಗಳಲ್ಲಿ ಉಷ್ಣ, ಜಲ ವಿದ್ಯುತ್‌ನಂಥ ಸಾಂಪ್ರದಾಯಿಕ ಇಂಧನದ ಅವಲಂಬನೆ ಕಡಿತಗೊಂಡಿದ್ದು, ನವೀಕರಿಸಬಹುದಾದದ ಇಂಧನ ಮೂಲಗಳಿಂದ ಆಗಸ್ಟ್‌ 18ರಂದು 143 ಮಿಲಿಯನ್‌ ಯೂನಿಟ್‌ ವಿದ್ಯುತ್‌ ಉತ್ಪಾನೆಯಿಂದಾಗಿ ಗ್ರಿಡ್‌ಗೆ ಶೇ.80ರಷ್ಟು ಹಸಿರು ಇಂಧನ ಪೂರೈಕೆಯಾಗಿದೆ. ಇದು ನವೀಕರಿಸಬಹುದಾದ ಇಂಧನ ಮೂಲಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ.

Karnataka Assembly Session | Santosh Lad|ಲೇಬರ್ ಕಾರ್ಡ್ ಅಪ್ಲಿಕೇಶನ್ ರಿಜೆಕ್ಟ್ ಬಗ್ಗೆ ಸಂತೋಷ್ ಲಾಡ್ ಸ್ಪಷ್ಟನೆ

ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದನೆ ಸಾಕಷ್ಟು ಹೆಚ್ಚಾಗಿದೆ. ಬೇಡಿಕೆಯ ಶೇ.75ರಿಂದ ಶೇ.85 ರಷ್ಚು ವಿದ್ಯುತ್ ಈ ಮೂಲಗಳಿಂದಲೇ ಉತ್ಪಾದನೆಯಾಗುತ್ತಿದೆ. ಅದರಲ್ಲೂ, ಪವನ ವಿದ್ಯುತ್ ಉತ್ಪಾದನೆ ಗಣನೀಯವಾಗಿ ಹೆಚ್ಚಳ ಕಂಡಿದ್ದು, ಪ್ರಸ್ತುತ ದಿನಕ್ಕೆ ಸರಾಸರಿ 54 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.

ನವೀಕರಿಸಬಹುದಾದ ಇಂಧನ ಮೂಲಗಳಿಗೆ ಆದ್ಯತೆ ನೀಡುವ ರಾಜ್ಯ ಸರ್ಕಾರದ ಕಾರ್ಯತಂತ್ರದಿಂದಾಗಿ ಈ ಬೆಳವಣಿಗೆ ಸಾಧ್ಯವಾಗಿದೆ. ಇತರೆ ರಾಜ್ಯಗಳೂ ಹಸಿರು ಇಂಧನ ಪರಿವರ್ತನೆಗೆ ಮುಂದಡಿ ಇಡಲು ಈ ಉಪಕ್ರಮ ಮಾದರಿಯಾಗಿದೆ. ಇದಲ್ಲದೆ, ನವೀಕರಿಸಬಹುದಾದ ಇಂಧನ ಮೂಲಗಳ ವಿದ್ಯುತ್ ಕಡಿಮೆ ದರಕ್ಕೆ ದೊರೆಯುವುದರಿಂದ ಸರ್ಕಾರದ ಮೇಲಿನ ಹೊರೆಯೂ ಕಡಿಮೆಯಾಗುವಂತಾಗಿದೆ.

ಪವನ ವಿದ್ಯುತ್ ಉತ್ಪಾದನೆಯಲ್ಲಿ ದಾಖಲೆ

ಪ್ರಸ್ತುತ ವರ್ಷ ಪವನ ವಿದ್ಯುತ್ ಉತ್ಪಾದನೆಯಲ್ಲಿ ದಾಖಲೆ ಬರೆಯಲಾಗಿದೆ. ಮುಂಗಾರು ಆರಂಭವಾದ ಮೇಲೆ ಪ್ರತಿನಿತ್ಯ ಸರಾಸರಿ 50 ಮಿಲಿಯನ್ ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಈ ಮೂಲಗಳಿಂದ ಉತ್ಪಾದನೆಯಾಗಿದೆ. ಪ್ರಸ್ತುತ 65.80 ಮಿಲಿಯನ್ ಯೂನಿಟ್ ಪವನ ವಿದ್ಯುತ್ ಉತ್ಪಾದನೆಯಾಗುತ್ತಿದೆ.

ಸಾಂಪ್ರದಾಯಿಕ ಇಂಧನ ಅವಲಂಬನೆ ಕಡಿತ
ಇದರಿಂದಾಗಿ ಜಲ ವಿದ್ಯುತ್ ಮತ್ತು ಉಷ್ಣ ವಿದ್ಯುತ್ ಮೇಲಿನ ಅವಲಂಬನೆ ಕಡಿಮೆಯಾಗಿದೆ. ರಾಜ್ಯದ ಒಟ್ಟಾರೆ ವಿದ್ಯುತ್‌ ಉತ್ಪಾದನೆಯಲ್ಲಿಉಷ್ಣ ವಿದ್ಯುತ್‌ ಪಾಲು ಶೇ.15-ಶೇ.25.

ಇಳಿಕೆಯಾದ ವಿದ್ಯುತ್‌ ಬೇಡಿಕೆ
ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಿದ್ಯುತ್ ಬಳಕೆ ಪ್ರಮಾಣ ನಿರೀಕ್ಷೆಗೂ ಮೀರಿ ಇಳಿಮುಖವಾಗಿದ್ದು, ಪ್ರಸ್ತುತ ರಾಜ್ಯದಲ್ಲಿ ವಿದ್ಯುತ್ ಬಳಕೆ 179.03 ದಶಲಕ್ಷ ಯೂನಿಟ್ (ಮಿಲಿಯನ್ ಯೂನಿಟ್ )ಗೆ ಇಳಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರಾಜ್ಯದ ವಿದ್ಯುತ್ ಬಳಕೆ 200.35 ಮಿಲಿಯನ್ ಯೂನಿಟ್‌ ಇತ್ತು. ಈ ವರ್ಷ ಸರಾಸರಿ ವಿದ್ಯುತ್ ಬಳಕೆ ಪ್ರಮಾಣ ಹಿಂದಿನ ವರ್ಷಕ್ಕಿಂತ ಶೇ. 15ರಿಂದ 15ರಷ್ಟು ಹೆಚ್ಚಿದ್ದರೂ ಪ್ರಸ್ತುತ 21 ದಶಲಕ್ಷ ಯೂನಿಟ್‌ಗಳಷ್ಟು ಕಡಿಮೆ ವಿದ್ಯುತ್ ಬಳಕೆಯಾಗುತ್ತಿದೆ.

ರಾಜ್ಯದಲ್ಲಿ ಜನವರಿ ಅಂತ್ಯದ ವೇಳೆಗೆ ವಿದ್ಯುತ್ ಬೇಡಿಕೆ ಹೆಚ್ಚಾಗಲು ಆರಂಭವಾಯಿತು. ಬೇಸಿಗೆಯಲ್ಲಿ ದೈನಂದಿನ ಬಳಕೆ 350 ಮಿಲಿಯನ್ ಯೂನಿಟ್‌ಗಳನ್ನು ಮೀರುವ ನಿರೀಕ್ಷೆಯಿತ್ತಾದರೂ ಮುಂಗಾರು ಪೂರ್ವ ಮಳೆಯಿಂದ ಬೇಡಿಕೆ 320–330 ಮಿಲಿಯನ್ ಯೂನಿಟ್‌ಗಳ ವ್ಯಾಪ್ತಿಯಲ್ಲಿಯೇ ಇತ್ತು. ಮೇ 16–17ರ ಸುಮಾರಿಗೆ ಪೂರ್ವ ಮುಂಗಾರು ಮಳೆ ಮತ್ತು ನಿಗದಿಗಿಂತ ಮುನ್ನ ಮುಂಗಾರು ಪ್ರವೇಶಿಸಿದ್ದರಿಂದ ವಿದ್ಯುತ್ ಬೇಡಿಕೆ ಕಡಿಮೆಯಾಗಿ ದಿನಕ್ಕೆ 230–240 ಮಿಲಿಯನ್ ಯೂನಿಟ್‌ಗಳಿಗೆ ಇಳಿಯಿತು. ಇದೀಗ ಕನಿಷ್ಟ ಮಟ್ಟಕ್ಕೆ ಬಂದಿದೆ.

ವಿದ್ಯುತ್ ಬೇಡಿಕೆ ಕಡಿಮೆಯಾಗುವುದರ ಜತೆಗೆ ಪವನ ಮತ್ತು ಸೌರ ವಿದ್ಯುತ್ ಉತ್ಪಾದನೆ ಹೆಚ್ಚಿದ್ದರಿಂದ ಕೇಂದ್ರೀಯ ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ ಖರೀದಿಸುತ್ತಿದ್ದ ವಿದ್ಯುತ್ ಪ್ರಮಾಣವೂ ಕುಸಿದಿದೆ. ಇದರಿಂದಾಗಿ ವಿದ್ಯುತ್ ಖರೀದಿಗೆ ಸರ್ಕಾರ ಮಾಡುವ ವೆಚ್ಚವೂ ಇಳಿಮುಖವಾಗಿದೆ.

ಕೋಟ್
“ನವೀಕರಿಸಬಹುದಾದ ಇಂಧನ ಮೂಲಗಳಿಂದ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತದೆ. ಇದರಿಂದ ಸರ್ಕಾರದ ಮೇಲಿನ ಹೊರೆ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಸರ್ಕಾರ ಈ ಮೂಲಗಳಿಗೆ ಆದ್ಯತೆ ನೀಡುತ್ತಿದೆ. ಇದರಿಂದ ಜಲ ಮತ್ತು ಉಷ್ಣ ವಿದ್ಯುತ್ ಸ್ಥಾವರಗಳ ಮೇಲಿನ ಹೊರೆ ಕಡಿಮೆಯಾಗಿ ಬೇಸಿಗೆಯಲ್ಲಿ ಈ ಮೂಲಗಳಿಂದ ಹೆಚ್ಚು ವಿದ್ಯುತ್ ಉತ್ಪಾದಿಸಿ ಬೇಡಿಕೆಗೆ ತಕ್ಕಂತೆ ಪೂರೈಸಲು ಅನುಕೂಲವಾಗುತ್ತದೆ,”.

  • ಕೆ.ಜೆ.ಜಾರ್ಜ್, ಇಂಧನ ಸಚಿವ

“ಕರ್ನಾಟಕವು ಹಲವಾರು ಉಪಕ್ರಮಗಳ ಮೂಲಕ, ವಿಶೇಷವಾಗಿ ಸೌರ ವಿದ್ಯುತ್ ಪಾರ್ಕ್, ಪವನ ವಿದ್ಯುತ್ ಯೋಜನೆಗಳ ಮೂಲ ನವೀಕರಿಸಬಹುದಾದ ಇಂಧನ ಸಾಮರ್ಥ್ಯಗಳನ್ನು ಹೆಚ್ಚಿಸುತ್ತಿದೆ. ನವೀಕರಿಸಬಹುದಾದ ಇಂಧನಕ್ಕಾಗಿ ನಮ್ಮ ಕಾರ್ಯತಂತ್ರಗಳು ಮತ್ತು ಗುರಿ ಸಾಧಿಸಲು ಕೈಗೊಂಡ ಮಹತ್ವಾಕಾಂಕ್ಷಿ ಕ್ರಮಗಳಿಂದಾಗಿ ಇದು ಸಾಧ್ಯವಾಗಿದೆ.

  • ಗೌರವ್ ಗುಪ್ತ, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ
Tags: ed to question kj georgeex-minister kj georgeK J Georgekarnataka kj georgeKJ Georgekj george daughterkj george edkj george ed casekj george ed raidkj george embassy groupkj george housekj george interviewkj george it raidkj george latest newskj george ministerkj george newskj george questioningkj george reactionkj george siddaramaiahkj george sonkj george speechkj george today newskj george todays newsminister kj georgequestioning kj george
Previous Post

Apple Company: ಬೆಂಗಳೂರಿನಲ್ಲಿ ಕಚೇರಿ ತೆರೆದ ಆ್ಯಪಲ್ – ತಿಂಗಳಿಗೆ 6.3 ಕೋಟಿ ರೂ. ಬಾಡಿಗೆ

Next Post

DK Shivakumar: ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

Related Posts

ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಯಾರಿಂದಲೂ ಮುಟ್ಟೋಕಾಗೋಲ್ಲಾ ಮುಟ್ಟಿದ್ರೆ ಭಸ್ಮ ಆಗ್ತಾರೆ.
ರಾಜಕೀಯ

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್ ಒಳಜಗಳ ತೀವ್ರ, ಸಚಿವ ಜಮೀರ್ ವಿರುದ್ಧ ಗಂಭೀರ ಆರೋಪ

by ಪ್ರತಿಧ್ವನಿ
April 12, 2026
0

ದಾವಣಗೆರೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಾಜಕೀಯ ಪೈಪೋಟಿಯಷ್ಟೇ ಅಲ್ಲದೆ, ಕಾಂಗ್ರೆಸ್ ಪಕ್ಷದ ಒಳಜಗಳದ ವೇದಿಕೆಯಾಗಿಯೂ ಪರಿಣಮಿಸಿದೆ. ಸ್ವಪಕ್ಷದ ಅಭ್ಯರ್ಥಿಯನ್ನೇ ಸೋಲಿಸಲು ಸಂಚು ರೂಪಿಸಿದ ಆರೋಪದ...

Read moreDetails
ಶಿಕ್ಷಣೋದ್ಯಮಕ್ಕೆ ಶಿಕ್ಷಣಾರ್ಥಿಗಳೇ ಸರಕುಗಳು- ನಾ ದಿವಾಕರ ಲೇಖನ

ಶಿಕ್ಷಣೋದ್ಯಮಕ್ಕೆ ಶಿಕ್ಷಣಾರ್ಥಿಗಳೇ ಸರಕುಗಳು- ನಾ ದಿವಾಕರ ಲೇಖನ

April 12, 2026
ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

April 11, 2026
ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

April 11, 2026
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
Next Post

DK Shivakumar: ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada