ಸಿಎಂ ಸಿದ್ದರಾಮಯ್ಯ(cm siddaramaiah ) ಮತ್ತು ದಿವಂಗತ ವಿಶ್ವನಿವಾಸ್ ಪ್ರಸಾದ್ (srinivas prasad) ರಾಜಕಾರಣದಲ್ಲಿ ಆರಂಭದಿಂದಲೂ ಸ್ನೇಹಿತರಾಗಿ ಒಂದೇ ಪಕ್ಷದಲ್ಲಿ ಗುರುತಿಸಿಕೊಂಡಂತಹ ಹಿರಿಯ ನಾಯಕರು. ಆದರೆ ಕಾಲ ನಂತರದಲ್ಲಿ ಸಿದ್ದರಾಮಯ್ಯ ಮತ್ತು ಶ್ರೀನಿವಾಸ್ ಪ್ರಸಾದ್ ನಡುವೆ ಭಿನ್ನಮತ ಸ್ಫೋಟಗೊಂಡು ಸ್ನೇಹ ಸಂಬಂಧವು ಕೂಡ ಕಡಿದು ಹೋಗಿತ್ತು.
ಇದೇ ಕಾರಣಗಳಿಂದಾಗಿ ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ (congress) ತೊರೆದು ಬಿಜೆಪಿ (BJP) ಸೇರ್ಪಡೆಗೊಂಡು , ಚಾಮರಾಜನಗರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಇತ್ತೀಚಿಗಷ್ಟೇ ಸಿಎಂ ಸಿದ್ದರಾಮಯ್ಯ ಶ್ರೀನಿವಾಸ್ ಪ್ರಸಾದ್ ರನ್ನ ಭೇಟಿ ಮಾಡಿ ಮಾತನಾಡಿದ್ದರು.

ಈ ಬಾರಿ ಸ್ಪರ್ಧೆ ಮಾಡದೆ ಚುನಾವಣೆ ರಾಜಕಾರಣದಿಂದ ದೂರ ಉಳಿಯುವ ನಿರ್ಧಾರವನ್ನು ಬಿ ಶ್ರೀನಿವಾಸ್ ಪ್ರಸಾದ್ ಕೈಗೊಂಡಿದ್ದರು . ಹೀಗಾಗಿ ಕಾಂಗ್ರೆಸ್ಗೆ ಬೆಂಬಲ ನೀಡುವಂತೆ ಮಾತನಾಡಲು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು ಎಂದು ಹೇಳಲಾಗುತ್ತೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ , ಕೇವಲ ಸ್ನೇಹಪೂರ್ವಕವಾಗಿ ಅಷ್ಟೇ ಭೇಟಿಕೊಟ್ಟು ಆರೋಗ್ಯ ವಿಚಾರಿಸಿದ್ದೇನೆ ಎಂದು ಹೇಳಿದ್ದರು. ಇದೀಗ ಮೊದಲ ಹಂತದ ಮತದಾನ ಮುಗಿಯುತ್ತಿದ್ದಂತೆ ಶ್ರೀನಿವಾಸ್ ಪ್ರಸಾದ್ ಕೊನೆಯುಸಿರೆಳೆದಿದ್ದಾರೆ.