ಕೇಂದ್ರ ಸರಕಾರ ಮಂಡಿಸಿದ ವಿದೇಶಿ ನೆರವು ವಿಧೇಯಕ- ೨೦೨೦ಗೆ ಸುಪ್ರೀಂ ಒಪ್ಪಿಗೆ ಸೂಚಿಸಿದ್ದು, ವಿದೇಶದಿಂದ ಹಣದ ನೆರವು ಪಡೆಯುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.
ಸಾರ್ವಜನಿಕರ ಹಿತಾಸಕ್ತಿ ಹಿನ್ನೆಲೆಯಲ್ಲಿ ಈ ಕಾಯ್ದೆ ಸಹಕಾರಿ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್, ದೇಶದಲ್ಲಿ ಸಾಮಾಜಿಕ ಸೇವಾ ಕಾರ್ಯಗಳಿಗೆ ವಿದೇಶದಿಂದ ಹಣದ ನೆರವು ಪಡೆಯುವುದು ಸರಿಯಲ್ಲ. ಇದರಿಂದ ಹಣದ ದುರ್ಬಳಕೆ ಆಗುವ ಸಾಧ್ಯತೆ ಇದೆ ಎಂದು ಹೇಳಿದೆ.
ನ್ಯಾಯಮೂರ್ತಿ ಎ.ಎಂ. ಖಾನ್ ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಮತ್ತು ಸಿಟಿ ರವಿಕುಮಾರ್ ಅವರನ್ನೊಳಗೊಂಡ ಪೀಠ, ವಿದೇಶದಿಂದ ಬರುವ ಹಣ ದುರ್ಬಳಕೆ ಆಗುತ್ತದೆ ಎಂದು ಹೇಳುತ್ತಿಲ್ಲ. ಆದರೆ ಆದರೆ ಹಾಗೆ ಆಗುವ ಸಾಧ್ಯತೆ ಇದೆ ಎಂದಷ್ಟೇ ನಮ್ಮ ಅಭಿಪ್ರಾಯ ಎಂದು ಹೇಳಿದೆ.