ಐಪಿಎಲ್ 2025 ರ (Ipl 2025) ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಅಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಗೆ (RCB) ಈಗ ಶಾಕ್ ಎದುರಾಗಿದ್ದು, ಸದ್ಯ ಧಿಡೀರ್ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಇದಕ್ಕೆ ಕಾರಣ SRH & MI ನಡುವಿನ ಪಂದ್ಯ.

ಹೌದು ಸನ್ ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಭರ್ಜರಿ ಜಯ ಸಾಧಿಸಿದ ಮುಂಬೈ ತಂಡ ಈಗ ಅಂಕ ಪಟ್ಟಿಯಲ್ಲಿ ಈಗ ಬರೋಬ್ಬರಿ 3 ಸ್ಥಾನಗಳ ಜಿಗಿತ ಕಂಡು ಟೇಬಲ್ ನಲ್ಲಿ 3ನೇ ಸ್ಥಾನ ತನ್ನದಾಗಿಸಿಕೊಂಡಿದೆ. ಹೀಗಾಗಿ RCB ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಸದ್ಯ 3ನೇ ಸ್ಥಾನದಲ್ಲಿದ್ದ RCB ಒಂದು ಸ್ಥಾನ ಹಿಂದಕ್ಕೆ ಬಿದ್ದಿದ್ದು ಈಗ 4ನೇ ಸ್ಥಾನದಲ್ಲಿದೆ.ಹೀಗಾಗಿ ಈ ಮುಂಚೆ 4ನೇ ಸ್ಥಾನದಲ್ಲಿದ್ದ ಪಂಜಾಬ್ ಕಿಂಗ್ಸ್ ಈಗ 5ನೇ ಸ್ಥಾನಕ್ಕೆ ಬಂದಿದೆ.

ಹೀಗಾಗಿ ಮುಂಬೈ ಗೆಲುವು ಅಂಕ ಪಟ್ಟಿ ಟೇಬಲ್ ನಲ್ಲಿ ಸಾಕಷ್ಟು ಬದಲಾವಣೆ ತಂದಿದ್ದು,ಟಾಪ್ 2 ಸ್ಥಾನಗಳಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ. ಇನ್ನು ರಾಜಸ್ಥಾನ ರಾಯಲ್ಸ್ ನ ವಿರುದ್ಧದ ಇಂದಿನ ಪಂದ್ಯದಲ್ಲಿ RCB ಗೆದ್ದರೆ ಮಾತ್ರ ಮತ್ತೆ ಟೇಬಲ್ ನಲ್ಲಿ ಮತ್ತೆ 3ನೇ ಸ್ಥಾನಕ್ಕೇರಲಿದೆ.