ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy stadium) ಆರ್‌ಸಿಬಿ (RCB) ಮತ್ತು ಡೆಲ್ಲಿ (DC) ನಡುವಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಆರ್‌ಸಿಬಿ ತಂಡ ತವರು ನೆಲದಲ್ಲಿ ಪಂದ್ಯದ ಆರಂಭದಲ್ಲೇ ಹೊಸ ದಾಖಲೆ ನಿರ್ಮಿಸಿದೆ.

ಫಿಲ್ ಸಾಲ್ಟ್ (Phill salt) ಮತ್ತು ವಿರಾಟ್ ಕೊಹ್ಲಿ (Virat kohli) ಆರ್.ಸಿ.ಬಿ ಉತ್ತಮ ಆರಂಭ ಕಟ್ಟಿಕೊಟ್ಟಿದ್ದು, ಫಿಲ್ ಸಾಲ್ಟ್ ಅಬ್ಬರಿಸಿ ಬೊಬ್ಬಿರಿದರು.ಈ ವೇಳೆ ಆರ್‌ಸಿಬಿ ಹೊಸ ದಾಖಲೆ ನಿರ್ಮಿಸಿದ್ದು ಕೇವಲ ಮೂರು ಓವರ್‌ಗಳಲ್ಲಿ ಅತಿ 50 ರನ್ ಗಳಿಸಿ ದಾಖಲೆ ಬರೆದಿದೆ.

ಹೌದು, ಅತಿ ವೇಗವಾಗಿ 50 ರನ್ ಗಳಿಸಿದ ತಂಡವಾಗಿ ಆರ್.ಸಿ.ಬಿ ಕೇವಲ 18 ಎಸೆತಗಳಲ್ಲಿ 50 ರನ್ ಗಳಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಮೊದಲ ಪಂದ್ಯ ಸೋತಿರುವ ಆರ್.ಸಿ.ಬಿ ಇಂದಿನ ಪಂದ್ಯ ಗೆಲ್ಲುವ ವಿಶ್ವಾಸದಲ್ಲಿದೆ.