
ಎಲ್ಲೆಲ್ಲೂ ಆರ್.ಸಿ.ಬಿ (RCB) ಜಯಘೋಷ.. ಎಲ್ಲಿ ನೋಡಿದ್ರೂ ಈ ಸಲ ಕಪ್ ನಮ್ದೇ ಅನ್ನೋ ಘೋಷವಾಕ್ಯ. ಈ ಬಾರಿಯ ಐಪಿಎಲ್ (Ipl 2025) ಸೀಸನ್ ನಲ್ಲಿ ಆರ್.ಸಿ.ಬಿ ಫೈನಲ್ ಪ್ರವೇಶ ಮಾಡಿದ್ದು ಇಂದು ಪಂಜಾಬ್ (PBKS) ವಿರುದ್ಧ ಸೆಣೆಸಾಡಲಿದೆ. ಈ ಪಂದ್ಯದಲ್ಲಿ ಗೆದ್ದು ಆರ್.ಸಿ.ಬಿ ತನ್ನ 18 ವರ್ಷಗಳ ಕಾಯುವಿಕೆಯನ್ನು ಅಂತ್ಯಗೊಳಿಸಲಿ ಎಂಬುದು ಅಭಿಮಾನಿಗಳ ಆಶಯ.

ಈ ಮಧ್ಯ ಆರ್.ಸಿ.ಬಿ ಗೆಲುವಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ (Dk Shivakumar) ಕೂಡ ಮನಃ ಪೂರ್ತಿಯಾಗಿ ವಿಶ್ ಮಾಡಿದ್ದಾರೆ. ಕನ್ನಡಿಗರು ಕಳೆದ 18 ವರ್ಷಗಳಿಂದ ಈ ಸಮಯಕ್ಕಾಗಿ ನಾವು ಕಾಯ್ತಿದ್ದೇವೆ. ನಮ್ಮ ಆರ್‌ಸಿಬಿ ತಂಡ ಐಪಿಎಲ್ ಫೈನಲ್ ತಲುಪಿದೆ. RCB ಕೇವಲ ಜರ್ಸಿ ಅಲ್ಲ.. ಇದು ಮಿಲಿಯನ್ ಕನಸು ಎಂದು ವ್ಯಾಖ್ಯಾನಿಸಿದ್ದಾರೆ.

ಇನ್ನು ನಿಮ್ಮಜೊತೆ ನಾವಿದ್ದೇವೆ..ಕರ್ನಾಟಕ ನಿಮ್ಮ ಜೊತೆಯಿದೆ. ಈ ಬಾರಿ ಟ್ರೋಫಿ ಗೆದ್ದು ಬನ್ನಿ, ಆಲ್ ದಿ ಬೆಸ್ಟ್ ಅಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಶುಭಾಶಯ ಕೋರಿದ್ದಾರೆ.












