ಕಳೆದ ವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಆಗಸ್ಟ್ 31ರ ವರೆಗೆ ಕ್ರೆಡಿಟ್ ಕಾರ್ಡ್ ಹಾಗೂ ಇಎಂಐ ಸಾಲ ಪಾವತಿಯ ಅವಧಿಯನ್ನು ಮುಂದೂಡಿದೆ. ಈ ಅವಧಿಯಲ್ಲಿ ಗ್ರಾಹಕರು ಯಾವುದೇ ರೀತಿಯ ಸಾಲ ಪಾವತಿಯನ್ನು ಮಾಡುವ ಅಗತ್ಯವಿಲ್ಲ. ಕರೋನಾ ಹಾಗೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಇಡೀ ದೇಶ ಸ್ಥಬ್ಧಗೊಂಡಿತ್ತು. ಈ ವೇಳೆ ಕೇಂದ್ರ ವಿತ್ತ ಸಚಿವೆ 1.70 ಲಕ್ಷ ಕೋಟಿಯ ಆರ್ಥಿಕ ಪ್ಯಾಕೇಜನ್ನು ಘೋಷಿಸಿದರು. ಈ ವೇಳೆ RBI ಮೂರು ತಿಂಗಳು ಗ್ರಾಹಕರು ಯಾವುದೇ ರೀತಿಯ ಸಾಲ ಮರುಪಾವತಿ ಮಾಡುವಂತಿಲ್ಲ ಎಂದಿತ್ತು. ಅದಾಗಿ ಲಾಕ್ ಡೌನ್ ಅವಧಿ ವಿಸ್ತರಣೆ ಆಗುತ್ತಿದ್ದಂತೆ RBI ಕೂಡ ಕಳೆದ ವಾರ ಸಾಲ ಮರುಪಾವತಿ ಅವಧಿಯನ್ನು ಮತ್ತೆ ಮೂರು ತಿಂಗಳು ಅಂದರೆ ಅಗಸ್ಟ್ 31ರ ವರೆಗೆ ವಿಸ್ತರಿಸಿದೆ.
ಇದರಲ್ಲಿ, ವೈಯಕ್ತಿಕ ಸಾಲ, ವಾಹನ ಸಾಲ, ಗೃಹ ಸಾಲ, ಕೃಷಿ ಸಾಲಗಳು ಸೇರಿದಂತೆ ಎಲ್ಲಾ ರೀತಿಯ ಚಿಲ್ಲರೆ ಸಾಲಗಳನ್ನು ಪಡೆದುಕೊಂಡಿದ್ದ ಗ್ರಾಹಕರಿಗೆ ಅಗಸ್ಟ್ 31ರ ವರೆಗೆ ಮರುಪಾವತಿಯ ಅವಧಿಯನ್ನು ವಿಸ್ತರಿಸಿದೆ. ಆದರೆ ಇದು ಗ್ರಾಹಕರ ಆಯ್ಕೆಗೆ ಬಿಟ್ಟಿದ್ದು. ಈ ಅವಧಿಯಲ್ಲಿ ಗ್ರಾಹಕರು ಮರುಪಾವತಿ ಮಾಡಲು ಸಶಕ್ತರಾಗಿದ್ದರೆ ನೀವು ಎಂದಿನಂತೆ ತಮ್ಮ ಪಾವತಿಯನ್ನು ಮಾಡಬಹುದು. ಆದರೆ ಇದು ಸಾಧ್ಯವಾಗದೆ ಇರುವವರು ಅಗಸ್ಟ್ 31ರ ವರೆಗೆ ಸಾಲ ಮರುಪಾವತಿ ಮಾಡಬೇಕಿಲ್ಲ.
Also Read: ಕೋವಿಡ್-19 ರಿಲೀಫ್ ಪ್ಯಾಕೆಜ್; EMI ಮೇಲಿನ ‘ಬಡ್ಡಿ’ ಪಾವತಿಯ ‘ಅಸಲಿ’ ಸಂಗತಿಗಳೇನು?

Also Read: ಖಾಸಗಿ ಬ್ಯಾಂಕುಗಳು ನಿಮ್ಮ ಸಾಲದ ಮೇಲೆ ಹೇರುವ ಹೆಚ್ಚುವರಿ ಬಡ್ಡಿ ಎಷ್ಟು ಗೊತ್ತಾ?
RBIನ ಈ ಸೇವೆಯ ಕುರಿತು ನೀವು ತಿಳಿದುಕೊಳ್ಳಲೇ ಬೇಕಾದ 5 ಅಂಶ.!
1. ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ನೀವು ಅಗಸ್ಟ್ 31ರ ವರೆಗೆ ಕಟ್ಟದೇ ಇರಲು ಅವಕಾಶ ಇದೆ. ಇದು ಗ್ರಾಹಕರ ಆಯ್ಕೆಗೆ ಬಿಟ್ಟಿದ್ದು.
2. ನೀವು RBI ನ ಈ ಸೇವೆಯನ್ನು ಆಯ್ದುಕೊಂಡರೆ, ಮುಂದಿನ 3 ತಿಂಗಳು ಬ್ಯಾಂಕುಗಳು ನಿಮ್ಮ ಬಳಿಯಿಂದ ಯಾವುದೇ ದಂಡ ಅಥವಾ ಶುಲ್ಕವನ್ನು ಪಡೆದುಕೊಳ್ಳುವುದಿಲ್ಲ.
3. ಅಗಸ್ಟ್ ವರೆಗೆ ನಿಮ್ಮ ಕ್ರೆಡಿಟ್ ಕಾರ್ಡ್ ಬಾಕಿ ಅಥವಾ ಇಎಂಐ ಪಾವತಿಸದಿದ್ದರೆ ಅದು ನಿಮ್ಮ ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ನಕರಾತ್ಮಕ ಪರಿಣಾಮ ಬೀರುವುದಿಲ್ಲ.
4. ಈ 3 ತಿಂಗಳ ಅವಧಿಯಲ್ಲಿ ಪಾವತಿಸದ ಬಾಕಿ ಮೊತ್ತಕ್ಕೆ ಬ್ಯಾಂಕುಗಳು ಬಡ್ಡಿ ವಿಧಿಸುತ್ತವೆ. ಆರ್‌ಬಿಐ ಪಾವತಿ ಅವಧಿ ವಿಸ್ತರಿಸಿದ್ದು ಬಾಕಿ ಮೊತ್ತಕ್ಕೆ ಹೊರತು, ಅದರ ಬಡ್ಡಿ ಶುಲ್ಕಗಳಿಗಲ್ಲ.
5. ನೀವು ಹಿಂದಿನಂತೆ ನಿಮ್ಮ ಬಾಕಿ ಮೊತ್ತವನ್ನು ಪಾವತಿಸಲು ಶಕ್ತರಾಗಿದ್ದರೆ, ಮರುಪಾವತಿಗಾಗಿ RBI ನ ಈ ಅವಧಿ ವಿಸ್ತರಣೆಯ ಕೊನೆಯ ದಿನಾಂಕದ ವರೆಗೆ ಕಾಯುವ ಅಗತ್ಯವಿಲ್ಲ. ಎಂದಿನಂತೆ ಸಮಯಕ್ಕೆ ಸರಿಯಾಗಿ ನೀವು ಪಾವತಿ ಮಾಡಬಹುದಾಗಿದೆ.









