ಬೀದರ್: ಜಿಲ್ಲೆಯಲ್ಲಿನ ರೌಡಿಶೀಟರ್ (Rowdy Sheeter) ಪೇರೆಡ್ ನಡೆಸಿ ಬೀದರ್ ಎಸ್ಪಿ ಎಸ್ಪಿ ಪ್ರದೀಪ್ ಗುಂಟಿ (SP Pradeep Gunti) ಚಳಿ ಬಿಡಿಸಿದ್ದಾರೆ.ನಗರದ ಪೊಲೀಸ್ ಪೇರೆಡ್ ಮೈದಾನದಲ್ಲಿ (Police Parade Ground) ನಡೆದ ರೌಡಿ ಪೆರೇಡ್ ನಲ್ಲಿ ಜಿಲ್ಲೆಯ ನೂರಾರು ರೌಡಿಗಳನ್ನು ಕರೆತರಲಾಗಿತ್ತು.
ಇನ್ನು ಮುಂದೆ ಎಲ್ಲ ಅಪರಾಧ ಕೃತ್ಯಗಳು ಬಂದ್ ಆಗಬೇಕು. ನಾವು ಯಾವಾಗ ಮನೆ ಮೇಲೆ ದಾಳಿ ಮಾಡುತ್ತೇವೆ ಗೊತ್ತಿಲ್ಲ. ಹೀಗಾಗಿ ಮೊದಲೇ ಎಲ್ಲ ಅಪರಾಧಗಳನ್ನು ಬಿಟ್ಟು ಬಿಡಿ ಎಂದು ರೌಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಇರಾನಿ ಗ್ಯಾಂಗ್ ನ ಖತರ್ನಾಕ್ ರೌಡಿ ಪೇರೆಡ್ ಗೆ ಕ್ಯಾಪ್ ಹಾಕಿಕೊಂಡು ಬಂದಿದ್ದಕ್ಕೆ ಎಸ್ಪಿ ತರಾಟೆಗೆ ತೆಗೆದುಕೊಂಡು ವಾರ್ನಿಂಗ್ ನೀಡಿದ್ದಾರೆ. ಅಪರಾಧ ಕೃತ್ಯ ಬಿಡುವಂತೆ ವಾರ್ನ್ ಮಾಡಿದ್ದಾರೆ.