ರತನ್ ಟಾಟಾ (Ratan Tata) ಅವರ ಆರೋಗ್ಯ ಸ್ಥಿತಿ ತೀರ ಗಂಭೀರವಾಗಿದ್ದು, ಅವರನ್ನು ಮುಂಬೈ (Mumbai) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೊನ್ನೆಯಷ್ಟೇ ವಯೋಸಹಜ ಅನಾರೋಗ್ಯದ ನಿಮಿತ್ತ ಮುಂಬೈ ನ ಕ್ಯಾಂಡಿ ಬ್ರೀಚ್ (Candy breach) ಆಸ್ಪತ್ರೆಗೆ ರತನ್ ಟಾಟಾ ದಾಖಲಾಗಿದ್ದರು. ಈ ವೇಳೆ ನಾನು ಆರೋಗ್ಯಕರವಾಗಿದ್ದು, ಸಹಜ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಬಂದಿರುವುದಾಗಿ ತಿಳಿಸಿದ್ದರು.
ಸದ್ಯ ರತನ್ ಟಾಟಾ ಗೆ 86 ವರ್ಷ ವಯಸಾಗಿದ್ದು, ರಕ್ತದ ಒತ್ತಡದಲ್ಲಿ (Blood pressure) ತೀವ್ರ ಇಳಿಕೆ ಕಂಡುಬಂದಿದೆ ಎಂದು ಹೇಳಲಾಗಿದ್ದು, ವೈದ್ಯರು ರತನ್ ಟಾಟಾ ಅವರ ಆರೋಗ್ಯದ ಮೇಲೆ ಸಂಪೂರ್ಣ ನಿಗಾ ವಹಿಸಿದ್ದಾರೆ.